ಟೋಲ್ ಕಿರಿಕ್.. ನೈಸ್ ರೋಡ್‍ನಲ್ಲಿ ವಾಹನಗಳಿಗೆ ಫ್ರೀ ಎಂಟ್ರಿ ಇಲ್ಲ…!

Date:

ದೇಶದಲ್ಲಿ ಭ್ರಷ್ಟಾಚಾರ, ಕಾಳಧನಿಕರ ಕಪ್ಪುಹಣ ಬಯಲು ಮಾಡುವ ನಿಟ್ಟಿನಲ್ಲಿ 500 ಮತ್ತು 1000ರೂ ಮುಖಬೆಲೆಯ ನೋಟುಗಳನ್ನು ರಾತ್ರೋ ರಾತ್ರಿ ಬ್ಯಾನ್ ಮಾಡಿ ಆದೇಶ ಹೊರಡಿದ ಕೇಂದ್ರ ಸರ್ಕಾರದ ನಡೆಯನ್ನು ದೇಶದಾದ್ಯಂತ ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ರೂ ಚಿಲ್ಲರೆ ಹಣಕ್ಕಾಗಿ ಗ್ರಾಹಕರು ಪರದಾಡುವಂತಹ ಪರಿಸ್ಥಿತಿ ಮಾತ್ರ ಹೇಳತೀರದು. ಇದರ ಬಿಸಿ ವಾಹನ ಸವಾರರಿಗೂ ತಟ್ಟಿದ್ದು ಸುಳ್ಳೇನಲ್ಲ..! ದೇಶದ ಪ್ರಮುಖ ಟೋಲ್‍ಗೇಟ್‍ಗಳಲ್ಲಿ ಚಿಲ್ಲರೆ ಹಣ ಇಲ್ಲದೇ ಗಂಟೆಗಟ್ಟಲೆ ನಿಂತಲ್ಲೇ ನಿಲ್ಲಬೇಕಾದ ಪರಿಸ್ಥಿತಿ ನಿನ್ನೆ ಕಂಡು ಬಂದಿತ್ತು. ಇದರಿಂದ ಗ್ರಾಹಕರ ಸಮಸ್ಯೆಯನ್ನು ನಿವಾರಿಸೋ ದೃಷ್ಠಿಯಿಂದ ಕೇಂದ್ರ ಸಚಿವ ನಿತೀನ್ ಗಡ್ಕರಿ ಎಲ್ಲಾ ಟೋಲ್‍ಗೇಟ್ಗಳಲ್ಲೂ ನ.11ರ ಮಧ್ಯರಾತ್ರಿಯವರೆಗೂ ಉಚಿತ ಪ್ರವೇಶ ಎಂದು ಆದೇಶ ಹೊರಡಿತು. ಆದರೆ ಬೆಂಗಳೂರಿನ ನೈಸ್ ರೋಡ್ ಟೋಲ್‍ಗೇಟ್‍ನಲ್ಲಿ ವಾಹನ ಸವಾರರ ಬಳಿ ಹಣ ಕೀಳುತ್ತಿದ್ದಾರೆ.. ಅಷ್ಟೇ ಅಲ್ಲ ಚಿಲ್ಲರೆ ಹಣ ನೀಡಿ ವಾಹನ ಮುಂದಕ್ಕೆ ಸಾಗಿಸಿ ಎಂದು ವಾಹನ ಸವಾರಿಗೆ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಎಲ್ಲಾ ಟೋಲ್‍ಗೇಟ್‍ನಲ್ಲೂ ಉಚಿತ ಪ್ರವೇಶ ಎಂದು ಆದೇಶ ನೀಡಿದ್ದಾರೆ ಎಂದು ಹೇಳಿದರೂ ಕೇಳದ ಅಲ್ಲಿನ ಟೋಲ್ ಸಂಗ್ರಹಾಕಾರರು ಹಣ ನೀಡಿ ಎಂದು ಒತ್ತಾಯಿಸುತ್ತಿದ್ದಾರೆ.. ಇದರಿಂದ ತೀವ್ರ ಆಕ್ರೋಶಗೊಂಡ ವಾಹನ ಸವಾರರು ಹಳೆಯ 500 ಮತ್ತು 1000ರೂ. ಮುಖಬೆಲೆಯ ನೋಟು ನೀಡಿದರೆ ಚಿಲ್ಲರೆ ಕೊಡಿ ಎನ್ನುತ್ತಿದ್ದಾರೆ. ಇದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಪ್ರಯಾಣಿಕರು..!

Like us on Facebook  The New India Times

POPULAR  STORIES :

2.5 ಲಕ್ಷಕ್ಕೂ ಅಧಿಕ ಡೆಪಾಸಿಟ್‍ಗಳಿಗೆ ಟ್ಯಾಕ್ಸ್ ಭೀತಿ..!

500, 1000ರೂ. ನೋಟುಗಳು ಬ್ಯಾನ್ ಆದ್ವೇ..? ನೋ ಟೆನ್ಷನ್..

ಬಂಕ್‍ಗಳಲ್ಲಿ 500, 1000ರೂ. ನೋಟು ಪಡೆಯದಿದ್ದರೆ ಕಠಿಣ ಕ್ರಮ: ಸಚಿವ ಧರ್ಮೇಂದ್ರ ಪ್ರಧಾನ್.

ಅಮೇರಿಕಾ ಅಧ್ಯಕ್ಷೀಯ ಚುನಾವಣೆ: ಡೊನಾಲ್ಡ್ ಟ್ರಂಪ್‍ಗೆ ಐತಿಹಾಸಿಕ ಜಯ.

ಮನಸ್ಸಿಗೆ ಬಂದ ಫೇಸ್‍ಬುಕ್ ಗೆಳತಿ ಮನೆ ಬೆಳಗುವಳಾ.? | ರಿಯಲ್ ಸ್ಟೋರಿ

ತಮ್ಮ ಗುರುವಿಗಾಗಿ ಸ್ಟಂಟ್ ಮಾಡಲು ಒಪ್ಪಿಕೊಂಡಿದ್ರು: ರವಿವರ್ಮ

ಮಾಸ್ತಿಗುಡಿ ದುರಂತ: ಐವರ ವಿರುದ್ದ ಜಾಮೀನು ರಹಿತ ವಾರೆಂಟ್ ಜಾರಿ..!

12 ವರ್ಷದ ಅಪ್ರಾಪ್ತ ಬಾಲಕನಿಂದ 18 ವರ್ಷದ ಯುವತಿ ತಾಯಿಯಾದ್ಲು..!

Share post:

Subscribe

spot_imgspot_img

Popular

More like this
Related

ರೌಡಿಗಳನ್ನು, ಗೂಂಡಾಗಳನ್ನು ಬಿಟ್ಟು ಜನರ ಆಸ್ತಿಗಳನ್ನು ಲಪಟಾಯಿಸುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

ರೌಡಿಗಳನ್ನು, ಗೂಂಡಾಗಳನ್ನು ಬಿಟ್ಟು ಜನರ ಆಸ್ತಿಗಳನ್ನು ಲಪಟಾಯಿಸುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ ಬೆಂಗಳೂರು: ರೌಡಿಗಳನ್ನು,...

World Cup 2025: ಇಂದು ಭಾರತ- ಆಫ್ರಿಕಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯ! ಎಲ್ಲಿ ನಡೆಯಲಿದೆ?

World Cup 2025: ಇಂದು ಭಾರತ- ಆಫ್ರಿಕಾ ನಡುವಿನ ವಿಶ್ವಕಪ್ ಫೈನಲ್...

ನಿಮ್ಮ ಮುಖಕ್ಕೆ ಬಳಸುವ ರೋಸ್​ ವಾಟರ್​ನಿಂದಲೂ ಇದೆ ಅಪಾಯ; ಬಳಸೋ ಮುನ್ನ ಎಚ್ಚರ!

ನಿಮ್ಮ ಮುಖಕ್ಕೆ ಬಳಸುವ ರೋಸ್​ ವಾಟರ್​ನಿಂದಲೂ ಇದೆ ಅಪಾಯ; ಬಳಸೋ ಮುನ್ನ...

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ!

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ! ನವದೆಹಲಿ:- ದೇಶದಲ್ಲಿ ಪ್ರತಿ...