ನಟ ನಿಖಿಲ್ ಕುಮಾರ್ ‘ಸೀತಾ ರಾಮ ಕಲ್ಯಾಣ’ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ.
ನಿಖಿಲ್ ಅವರ ಚೊಚ್ಚಲ ಸಿನಿಮಾ ‘ಜಾಗ್ವಾರ್ ‘ ನಲ್ಲಿ ಬಾಲಿವುಡ್ ಚೆಲುವೆ ತಮನ್ನಾ ಭಾಟಿಯ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು. ಈಗ ಸೀತಾ ರಾಮ ಕಲ್ಯಾಣದಲ್ಲಿ ಬಿಟೌನ್ ನಟಿಯೊಬ್ಬರು ನಿಖಿಲ್ ಜೊತೆ ಹಾಡೊಂದರಲ್ಲಿ ಸ್ಟೆಪ್ ಹಾಕಲಿದ್ದಾರೆ ಎನ್ನಲಾಗಿದೆ.
ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಸ್ಯಾಂಡಲ್ ವುಡ್ ಗೆ ಬರೋ ಸಾಧ್ಯತೆಗಳಿವೆ. ಈಕೆ ವಿಶೇಷ ಹಾಡೊಂದರಲ್ಲಿ ನಿಖಿಲ್ ಜೊತೆ ಹೆಜ್ಜೆ ಹಾಕಲಿದ್ದಾರಂತೆ. ಈ ಬಗ್ಗೆ ಜಾಕ್ವೆಲಿನ್ ಜೊತೆ ಮಾತುಕತೆ ನಡೆದಿದ್ದು, ಡೇಟ್ ಫಿಕ್ಸ್ ಆಗೋದು ಬಾಕಿ ಇದೆ.