ಅತ್ಯಾಚಾರ ಆರೋಪ ಎದುರಿಸುತ್ತಿರುವ ಬಿಡದಿಯ ನಿತ್ಯಾನಂದ ಸ್ವಾಮಿಗೆ ಸುಪ್ರೀಂ ಸಂಕಷ್ಟ ಎದುರಾಗಿದ್ದು, ತನ್ನ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣ ಕೈ ಬಿಡಬೇಕೆಂದು ನಿತ್ಯಾ ನಂದ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ನಿತ್ಯಾನಂದ ಸ್ವಾಮಿಯ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣದ ತನಿಖೆ ಮುಂದುವರೆಯಲಿ. ಅದಕ್ಕೆ ತಡೆಯಾಜ್ಞೆ ನೀಡಲಾಗದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ತನ್ನ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣದ ತನಿಖೆಯನ್ನು ಕೈ ಬಿಡುವಂತೆ ನಿತ್ಯಾನಂದ ಕಳೆದ ತಿಂಗಳು ಕರ್ನಾಟಕ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಕೋರ್ಟ್ ಅದನ್ನು ಪುರಸ್ಕರಿಸಿರಲಿಲ್ಲ. ನಂತರ ನಿತ್ಯಾ ಅಂಡ್ ಕಂಪನಿ ಸುಪ್ರೀಂ ಮೆಟ್ಟಿಲೇರಿತ್ತು.