ಕನ್ನಡ ಬಿಗ್ ಬಾಸ್ ಸೀಸನ್ 5ರ ಅಸಲಿ ಆಟ ಈಗ ಶುರುವಾಗ್ತಿದೆ. ಪ್ರತಿಯೊಬ್ಬ ಸ್ಪರ್ಧಿಯ ಮುಖವಾಡ ಕಳಚಿದೆ…!
ಹೌದು, ಬಿಗ್ ಬಾಸ್ ಮನೆಯಲ್ಲಿ ಶೀತಲ ಸಮರ ನಡೀತಾ ಇದೆ. ಬಾರ್ಬಿ ಡಾಲ್ ನಿವೇದಿತಾ ಗೌಡಳನ್ನೇ ಕಂಡರೆ ಆಗಲ್ಲ ಎನ್ನುವ ಮಂದಿ ಇದ್ದಾರೆ ಅಂದ್ರೆ ಲೆಕ್ಕಹಾಕಿ…?
ನಿನ್ನೆ ಜಗನ್ ಗೊಂಬೆ ಹುಡುಗಿ ನಿವೇದಿತಾಗೆ ಕಣ್ಣೀರು ಹಾಕಿಸಿದ್ದಾರೆ…! ಟ್ರೂತ್ ಅಂಡ್ ಡೇರ್ ಗೇಮ್ ನಲ್ಲಿ ಜಗನ್ ನಿವೇದಿತಾ ಬಳಿ ಬಂದು , ನೀನು ಊಟಕ್ಕೆ ಕರೆದಾಗ ನಂಗೆ ಕಿರಿಕಿರಿ ಆಗಿತ್ತು…! ಕೋಪ ಬಂದಿತ್ತು’ ಎಂದರು. ಅದಕ್ಕೆ ನಿವೇದಿತಾ ತುಂಬಾನೇ ಅತ್ತರು.
ಬಿಗ್ ಬಾಸ್ ಮನೆಯ ಮುದ್ದಿನ ಮಗಳೆಂದೇ ಕರೆಯಲ್ಪಟ್ಟಿದ್ದ ನಿವೇದಿತಾ ಬಗ್ಗೆ ಅಭಿಪ್ರಾಯಗಳು ಬದಲಾಗ್ತಾ ಇವೆ. ಆಶಿತಾ, ಅನುಪಮಾ, ಶ್ರುತಿ ಹಾಗೂ ಕೃಷಿ ಬಾರ್ಬಿ ಡಾಲ್ ಬಗ್ಗೆ ಬೆಡ್ ರೂಂ ನಲ್ಲಿ ಪಿಸುಗುಟ್ಟುತ್ತಿದ್ದಾರೆ…!
ಮನೆಯೊಳಗಿನ ಈ ವರ್ತನೆಗಳಿಂದ ನಿವೇದಿತಾಗೆ ಬೇಜಾರಾಗಿದೆ. ನಾನು ಯಾರಿಗೂ ಏನೂ ಮಾಡಿಲ್ಲ. ಆದರೆ ನನಗೇಕೆ ಹೀಗೆ ಮಾಡ್ತಿದ್ದಾರೆ ಅಂತ ನಿವೇದಿತಾ ಅತ್ತರು.