ಕನ್ನಡ ಬಿಗ್ ಬಾಸ್ ಸೀಸನ್ 5 ರಲ್ಲಿ ಎಲ್ಲರ ಗಮನ ಸೆಳೆದ ಸ್ಪರ್ಧಿ ನಿವೇದಿತಾ ಗೌಡ. ಇಂಗ್ಲಿಷ್ ಆ್ಯಕ್ಸೆಂಟ್ ಇರೋ ನಿವೇದಿತಾಳ ಕನ್ನಡ, ಗೊಂಬೆಯಂತಹ ನೋಟ, ವಿಭಿನ್ನ ಶೈಲಿಯ ಡ್ರೆಸ್ ಗಳಿಂದ ಬೊಂಬೆ ಹುಡುಗಿ ನಿವೇದಿತಾ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.
ರ್ಯಾಪರ್ ಚಂದನ್ ಶೆಟ್ಟಿ ನಿವೇದಿತಾ ಬಗ್ಗೆ ಹಾಡಿದ ಹಾಡು ಸಿಕ್ಕಾಪಟ್ಟೆ ಸದ್ದು ಮಾಡ್ತು, ಮಾಡುತ್ತಲೇ ಇದೆ. ಈಗ ಜೂನಿಯರ್ ನಿವೇದಿತಾ ಸದ್ದು ಮಾಡ್ತಿದ್ದಾಳೆ.
ಹೌದು, ಬೆಂಗಳೂರಿನ ಜೆಪಿ ನಗರದ ನಿವಾಸಿ ಚಿತ್ರಾಶ್ರೀ ಹರ್ಷ ಮತ್ತು ಹರ್ಷ ಬಿ ಎಸ್ ಅವರ 7ವರ್ಷದ ಮುದ್ದಿನ ಮಗಳು ಮಾನ್ಯ ಈಗ ಜೂನಿಯರ್ ನಿವೇದಿತಾ…!
ಈಕೆ ನಿವೇದಿತಾ ಗೌಡ ಅವರ ನಡೆ, ನುಡಿ , ಕಾಸ್ಟ್ಯೂಮ್ ಎಲ್ಲವನ್ನು ಫಾಲೋ ಮಾಡ್ತಿದ್ದಾಳೆ.
ಇಷ್ಟೇ ಅಲ್ಲದೆ ಇಂಗ್ಲಿಷ್ ಪದ್ಯಗಳನ್ನು ಬರೆಯುತ್ತಾಳೆ. ಈಕೆಯ ಎರಡು ಪುಸ್ತಕಗಳು ಸದ್ಯದಲ್ಲೇ ಬಿಡುಗಡೆಯಾಗಲಿವೆ.
ಡ್ಯಾನ್ಸ್, ಮಿಮಿಕ್ರಿ, ಹಾಡು ಎಲ್ಲದರಲ್ಲೂ ಎತ್ತಿದ ಕೈ.