ಬಿಗ್ ಬಾಸ್ ಸೀಸನ್ 5ರ ಸ್ಪರ್ಧಿ ನಿವೇದಿತಾ ಗೌಡ ಕನ್ನಡಿಗರ ಮನೆಗೆದ್ದಿದ್ದಾರೆ. ಜನಸಾಮಾನ್ಯ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ ಬೊಂಬೆ ಹುಡುಗಿ ನಿವೇದಿತಾ ಅವರ ಕನ್ನಡದಲ್ಲಿ ಇಂಗ್ಲಿಷ್ ಆ್ಯಕ್ಸೆಂಟ್ ಇತ್ತು. ನೋಡಲು ಗೊಂಬೆಯಂತಿರುವ ನಿವೇದಿತಾಳ ಕನ್ನಡ ಮಾತು ಕೂಡ ಜನ ಇಷ್ಟಪಟ್ಟಿದ್ದರು.
ಬಿಗ್ ಬಾಸ್ ನಲ್ಲಿ 4ನೇ ಸ್ಥಾನ ಪಡೆದ ನಿವೇದಿತಾ ಇಂದು ಸೆಲಬ್ರಿಟಿ. ಸಾಕಷ್ಟು ಸಿನಿಮಾ ಅವಕಾಶಗಳು ನಿವೇದಿತಾ ಅವರನ್ನು ಹುಡುಕಿಕೊಂಡು ಬರುತ್ತಿವೆ. ಮೊದಲು ವಿದ್ಯಾಭ್ಯಾಸ, ನಂತರ ಸಿನಿಮಾಕ್ಕೆ ಆಧ್ಯತೆ ನೀಡಿರುವ ನಿವೇದಿತಾ ವಿದ್ಯಾಭ್ಯಾಸದ ಜೊತೆ ಜೊತೆಗೇನೆ ಸಿನಿಮಾ ಮಾಡ್ಕೊಂಡು ಹೋಗುವ ಯೋಚನೆಯನ್ನೂ ಮಾಡಿದ್ದಾರೆ.
ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ನಿವೇದಿತಾ ಅವರನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯ ಕೂಡ ಮೆಚ್ಚಿದ್ದಾರೆ.ಪ್ರಿಯ ಅವರಿಗೆ ಬಿಗ್ ಬಾಸ್ ಸ್ಪರ್ಧಿಗಳಲ್ಲಿ ನಿವೇದಿತಾ ಇಷ್ಟವಂತೆ. ನಿವೇದಿತಾ ಎಲಿಮಿನೇಟ್ ಆಗಿದ್ದು ಕಿಚ್ಚನ ಕುಟುಂಬಕ್ಕೆ ತುಂಬಾ ಬೇಜಾರಾಗಿತ್ತಂತೆ.