ಮಾತೆತ್ತಿದ್ರೆ ನೆಹರು ಹೆಸರು ಹೇಳಿರಾಜಕೀಯ ಮಾಡೋ ಕಾಂಗ್ರೆಸ್ಸಿಗರು ಇವತ್ತು ನೆಹರು ಅವ್ರನ್ನ ಸಂಪೂರ್ಣವಾಗಿ ಮರೆತಿರೋದು ವಿಪರ್ಯಾಸವೇ ಸರಿ. ಹೌದು ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಪುಣ್ಯಥಿತಿ ಆಚರಿಸಲಾಯಿತು.ಆದ್ರೆ ಯಾವೊಬ್ಬ ಮುಖಂಡನೂ ಅಲ್ಲಿ ಹಾಜರಿರಲಿಲ್ಲ. ಕೇವಲ ಖಾಲಿ ಕುರ್ಚಿಗಳ ಮುಂದೆ ನಿಂತು ಕೈ ನ ಕೆಲ ನಾಯಕರು ನೆಹರು ಅವರ ಗುಣಗಾನ ಮಾಡಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ 52 ನೇ ವರ್ಷದ ಪುಣ್ಯತಿಥಿ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್. ಶಂಕರ್ ನೆಹರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಆದರೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರೇ ಗೈರಾಗಿದ್ದರು. ಎಂಟೇ ಜನ ಕಾರ್ಯಕರ್ತರು ಆಗಮಿಸಿದ್ದರು. ಮಾಜಿ ಪ್ರಧಾನಿ ನೆನಪಿಸಿಕೊಳ್ಳಲೂ ಕಾಂಗ್ರೆಸ್ ಮುಖಂಡರು ಬಾರದಿರುವುದು ಪಕ್ಷಕ್ಕೆ ಇರುಸುಮುರುಸು ಉಂಟುಮಾಡಿದೆ. ಖಾಲಿ ಕುರ್ಚಿಗಳ ಮುಂದೆಯೇ ನೆಹರು ಬಗ್ಗೆ ಬಿ.ಎಲ್.ಶಂಕರ ಭಾಷಣ ಮಾಡಿದರು.
ಭಾರತ ಸ್ವಾತಂತ್ರ್ಯ ಸಂದರ್ಭದಲ್ಲಿ ಹಲವು ಸವಾಲುಗಳನ್ನು ಜವಾಹರ್ ಲಾಲ್ ನೆಹರು ಎದುರಿಸಿದ್ದರು. ಪ್ರಜಾಪ್ರಭುತ್ವವನ್ನು ಭಾರತದಲ್ಲಿ ನೆಲೆಗೊಳಿಸಲು ನೆಹರು ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದರು. ಪಂಚವಾರ್ಷಿಕ ಯೋಜನೆ, ದೊಡ್ಡ ದೊಡ್ಡ ಅಣೆಕಟ್ಟೆಗಳು ಇದಕ್ಕೆ ಸಾಕ್ಷಿ. ಅತ್ಯಂತ ಶಿಸ್ತಿನಿಂದ ಸಂಸತ್ ಅಧಿವೇಶನದಲ್ಲಿ ನೆಹರು ಪಾಲ್ಗೊಳ್ಳುತ್ತಿದ್ದರು ಎಂದು ಬಿ.ಎಲ್.ಶಂಕರ್ ನೆಹರು ಸ್ಮರಣೆ ಮಾಡಿದ್ರು.
- ಶ್ರೀ
POPULAR STORIES :
ಪ್ರೀತಿಸಿದ ಹುಡುಗಿ ನಡು ನೀರಲ್ಲಿ ಬಿಟ್ಟಾಗ, ಈಜು ಕಲಿಸಿದ ಹುಡುಗಿ ಹೀಗೇಕೆ ಒಂಟಿ ಮಾಡಿ ಹೊರಟಳು?
ಸಿಸಿ ಟಿವಿಯಲ್ಲಿ ಸೆರೆಯಾದ ನಟ ರಿತೇಶ್ ದೇಶ್ ಮುಖ್ ಕಳ್ಳತನ..!
ವೆಸ್ಟ್ ಇಂಡೀಸ್ ಆಟಗಾರರಿಗೆ `ಸೆಕ್ಸ್’ ಅಂದ್ರೆ ಅಷ್ಟಿಷ್ಟಾನಾ..? ಕ್ರಿಸ್ ಗೇಲ್ ಬ್ಯಾಟು.. ಪತ್ರಕರ್ತೆಯ ಎರಡು ಕೈ..!!
ಪ್ರತಿ 10 ನಿಮಿಷಕ್ಕೆ ಶುರುವಾಗುತ್ತೆ ಹೊಸ ಜೀವನ..!! ಇದು ರೀಲ್ ಅಲ್ಲ ರಿಯಲ್ ಗಜನಿಯ ಕಥೆ..!!!
ಪ್ರಿಯಕರನಿಗೆ ಕಾಯುತ್ತಾ ಬಸ್ಟ್ಯಾಂಡ್‍ನಲ್ಲಿ ನಿಂತಿದ್ದಳು..!? ಆಟೋಡ್ರೈವರ್‍ಗಳು ಏನ್ ಮಾಡಿದ್ರು ಗೊತ್ತಾ..!?
ಚೀನಾ-ಪಾಕ್ ಗೆ ಖಡಕ್ಕು ಸಂದೇಶ..! ನರೇಂದ್ರ ಮೋದಿ ಗೇಮ್ ಸ್ಟಾರ್ಟ್..!
ಹುಚ್ಚ ವೆಂಕಟ್ ಗೆ ಮಡಿಕೇರಿಯಲ್ಲಿ ಸಿಕ್ಕಳು ಹುಡುಗಿ..! `ಕೋಟಿ’ ಬೇಕಾದರೂ ಖರ್ಚಾಗಲಿ ಎಂದರಂತೆ..!?