ಹೀಗೇ ಮುಂದುವರಿದರೇ ನೀರಿನ ಬರ ಜನರಿಗೆ ಮತ್ತಷ್ಟು ಬರೆ ಎಳೆಯುವುದು ನಿಶ್ಚಿತವಾಗಿದೆ. ದೇಶದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಬಯಲು ಸೀಮೆಗಳ ಪರಿಸ್ಥಿತಿ ಅತ್ಯಂತ ಹೀನಾಯವಾಗಿದೆ. ಕರಾವಳಿ, ಮಲೆನಾಡಿನ ಜನರಿಗೂ ಅದರ ಎಫೆಕ್ಟ್ ತಟ್ಟಿದೆ. ಹೀಗಿರುವಾಗ ಕರಾವಳಿಯ MRPL ನಿಂದ ಮಾಹಿತಿಯೊಂದು ಬಂದಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಇಡೀ ಕರ್ನಾಟಕಕ್ಕೆ ಪೆಟ್ರೋಲಿಯಂ ಪೂರೈಸುತ್ತಿರುವ MRPL ನೀರಿಲ್ಲದೆ ತಾತ್ಕಾಲಿಕ ಶಟ್ ಡೌನ್ ಆಗಿದ್ದು, ಇರುವ ನೀರಿನಲ್ಲಿ ಕಚ್ಛಾತೈಲ ಸಂಸ್ಕರಿಸಲಾಗುತ್ತಿದೆ. ಜೊತೆಗೆ ಸ್ಟಾಕ್ ಇರುವ ಪೆಟ್ರೋಲ್ ಅನ್ನು ಪೂರೈಸಲಾಗುತ್ತಿದೆ. ನೇತ್ರಾವತಿ ನದಿಯಿಂದ ನೀರು ಪೂರೈಕೆಯಾಗದ ಕಾರಣ ಕೆಲವು ಭಾಗ ಶಟ್ ಡೌನ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
MRPL ರಿಫೈನರಿಯನ್ನು ಚಲಾಯಿಸುವುದಕ್ಕೆ ಪ್ರತಿದಿನ ಆರು ಎಂಜಿಡಿಯಷ್ಟು ನೀರು ಬೇಕಾಗುತ್ತದೆ. ಕ್ಯಾಪ್ಟಿವ್ ಪವರ್ ಪ್ಲಾಂಟ್ ಮೂಲಕ ವಿದ್ಯುತ್ ಉತ್ಪಾದಿಸಲು ನೀರು ಬೇಕು. ಏಕೆಂದರೇ ಕಚ್ಛಾತೈಲವನ್ನು ಮುನ್ನೂರರಿಂದ ನಾನೂರು ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ ಸಂಸ್ಕರಿಸಲಾಗುತ್ತದೆ. ಅದನ್ನು ತಣಿಸಲು ಭಾರಿ ಪ್ರಮಾಣದ ನೀರು ಬೇಕು. ಇಲ್ಲವೆಂದರೇ ಅನಾಹುತ ಗ್ಯಾರಂಟಿ. ಇಲ್ಲಿಯವರೆಗೆ ಸ್ಟಾಕ್ ಇರುವ ನೀರಿನಲ್ಲೇ ಪೆಟ್ರೋಲಿಯಂ ಸಂಸ್ಕರಿಸಲಾಗುತ್ತಿದೆ. ಇನ್ನು ಸ್ವಲ್ಪ ದಿನದಲ್ಲಿ ನೀರು ಪೂರೈಕೆಯಾಗದಿದ್ದರೇ ಎಂಆರ್ಪಿಎಲ್ ಸಂಪೂರ್ಣ ಶಟ್ ಡೌನ್ ಆಗಲಿದೆ. ಆಮೇಲೆ ರಾಜ್ಯಕ್ಕೆ ಪೆಟ್ರೋಲ್ ಪೂರೈಕೆಯಾಗುವುದಿಲ್ಲ
- ರಾ ಚಿಂತನ್
POPULAR STORIES :
ಯಶವಂತಪುರ ಮತ್ತು ಬುರ್ಖಾದೊಳಗಿನ ಗುಟ್ಟು..! ( ಬೆಗ್ಗರ್ಸ್ ಮಾಫಿಯಾ- ಇನ್ವೆಸ್ಟಿಗೇಶನ್- ಭಾಗ 2 )
ಹುಡುಗಿರಿಗೆ ಈ ಮಾತನ್ನು ಕೇಳಿದ್ರೆ ಬಿಲ್ಕುಲ್ ಇಷ್ಟ ಆಗಲ್ಲ.!!
ಎಂದೂ ಕಾಣದ ಕೈ ಅವಳ ಹೆಗಲ ಮೇಲಿತ್ತು..!
KA09-B-3353 ಶೋಭ! (ಕರ್ನಾಟಕದ ಮೊದಲ ಮಹಿಳಾ ಆಟೋ ಚಾಲಕಿ)
ಪೊಲೀಸರ ಮೇಲೇಕೆ ಗೂಬೆ ಕೂರಿಸ್ತೀರಾ..? ರಾತ್ರಿ ಒಂಟಿಯಾಗಿ ಅಡ್ಡಾಡೋದನ್ನು ನಿಲ್ಲಿಸಿ..!?
ಅವಳಿಗೆ ಸೆಕ್ಸ್ ಬೇಜಾರಾಗಿದೆಯಂತೆ..! ವಿಚಾರ ಏನು..? ನೀವೇ ಓದಿ..!?
ಕೋಹ್ಲಿಗೆ ಬಿತ್ತು 24 ಲಕ್ಷ ರೂ ದಂಡ..! ದಂಡ ಕಟ್ಟೋಕೆ ಕಾರಣ ಏನ್ ಗೊತ್ತಾ..?