ನಿರೀಕ್ಷಿತ ಮಟ್ಟಕ್ಕಿಂತ ಈ ಬಾರಿಯೂ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಶೇ. 25 ರಷ್ಟು ಮಳೆಯ ಪ್ರಮಾಣ ಕೊರತೆ ಉಂಟಾಗಿದೆ. ಇದರಿಂದ ಮಲೆನಾಡಿನ ಹಲವು ಕಡೆಗಳಲ್ಲಿ ಭತ್ತದ ಬಿತ್ತನೆಗೆ ಭಾರಿ ಹಿನ್ನಡೆ ಉಂಟಾಗಿದೆ. ಕಳೆದ ವರ್ಷ ಸಮರ್ಪಕ ಮಳೆ ಬರದ ಕಾರಣ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬರದ ಪರಿಸ್ಥತಿ ನಿರ್ಮಾಣವಾಗಿತ್ತು . ಭತ್ತ ಬೆಳೆಯುವ ಪ್ರದೇಶಗಳಲ್ಲಿ ವ್ಯಾಪಕ ಮಳೆ ಕೊರತೆಯಿಂದಾಗಿ ಯಾವ ಅಣೆಕಟ್ಟುಗಳೂ ಪೂರ್ಣ ಪ್ರಮಾಣದಲ್ಲಿ ತುಂಬಿರಲಿಲ್ಲ. ಸುಮಾರು 6 ಲಕ್ಷಕ್ಕೂ ಹೆಚ್ಚು ಎಕರೆಗಳಲ್ಲಿ ಕಳೆದ ಬಾರಿ ಬಿತ್ತನೆ ಕಾರ್ಯ ಕೈಗೊಂಡಿರದೇ ರೈತರು ಕಂಗಾಲಾಗಿ ಹೋಗಿದ್ದರು. ಅದೇ ಸನ್ನಿವೇಶ ಈ ಬಾರಿಯೂ ನಡೆಯಬಹುದೆಂಬುದು ರೈತರ ಆತಂಕವಾಗಿದೆ.
ರಾಜ್ಯದಲ್ಲಿ ಈ ಬಾರಿ 73 ಲಕ್ಷ ಎಕ್ಟೇರ್‍ನಲ್ಲಿ ಭಿತ್ತನೆ ಕಾರ್ಯ ಆರಂಭಿಸಲು ಸಿದ್ದತೆ ಮಾಡಿಕೊಂಡಿದ್ದರು. ಆದರೆ ಈವರೆಗೆ 50.87 ಲಕ್ಷ ಎಕ್ಟೇರ್‍ನಲ್ಲಿ ಬಿತ್ತನೆ ಕಾರ್ಯ ಮುಗಿದಿದೆ. ಆದರೆ ಇನ್ನು 3 ಲಕ್ಷ ಎಕ್ಟೇರ್‍ನಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಳ್ಳಬೇಕಿದೆ.
ಕೃಷಿ ವಲಯ ಪ್ರದೇಶಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಈ ಬಾರಿ ಮಳೆಯಾಗದಿರುವುದು ಹಾಗೂ ರಾಜ್ಯದ ಜಲಾಶಯಗಳು ಪೂರ್ಣವಾಗದೇ ಇರುವುದು ಬಿತ್ತನೆ ಕಾರ್ಯ ಹಿನ್ನಡೆಗೆ ಕಾರಣ ಎನ್ನಬಹುದು. ಕೊಪ್ಪಳ ಜಿಲ್ಲೆಯ ಗಂಗಾವತಿ, ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಅಧಿಕ ಪ್ರಮಾಣದಲ್ಲಿ ಬತ್ತ ಬೆಳೆಯಲಾಗುತ್ತದೆ. ಕಳೆದ ಬಾರಿಯಂತೆ ಈ ಬಾರಿಯು ರಾಜ್ಯಕ್ಕೆ ಮಳೆರಾಯ ಕೈಕೊಟ್ಟ ಕಾರಣ ಕಳೆದ ವರ್ಷದಂತೆಯೇ ಈ ಬಾರಿಯೂ ಬೆಳೆ ಪ್ರಮಾಣ ಕುಂಠಿತಗೊಳ್ಳುವ ಸಂಭವ ಹೆಚ್ಚಿದೆ.
ವಾಣಿಜ್ಯ ಬೆಳೆಗಳು ಚುರುಕು.
ಕಳೆದ ಬಾರಿಗಿಂತ ಈ ಬಾರಿ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಪ್ರದೇಶಗಳಲ್ಲಿ ವಾಡಿಕೆಗಿಂತ ಹೆಚ್ಚಾಗಿ ಮಳೆ ಪ್ರಮಾಣ ಅಧಿಕವಾಗಿದ್ದು ಜೋಳ, ತೊಗರಿ ಶೇಂಗಾ, ಸೂರ್ಯಕಾಂತಿ ಹತ್ತಿ ಕಬ್ಬು ಬೆಳೆಗಳ ಬಿತ್ತನೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪ್ರಗತಿ ಹೊಂದಿದೆ. ಕಳೆದ ಬಾರಿ ಶೇ. 9 ರಷ್ಡು ಮಾತ್ರ ಪ್ರಗತಿ ಹೊಂದಿದ್ದು, ಈ ಬಾರಿ ಶೇ. 72ರಷ್ಟು ಗುರಿ ಸಾಧನೆ ಹೊಂದಿದೆ.
ರಾಜ್ಯದ ಇತರೆ ಪ್ರದೇಶಗಳನ್ನು ಹೋಲಿಸಿದರೆ ಈ ಬಾರಿ ಮಲೆನಾಡು ಪ್ರದೇಶಗಳಲ್ಲಿ ಜಲಾನಯನ ಪ್ರದೇಶಗಳಲ್ಲಿ ಬಾರೀ ಪ್ರಮಾಣದಲ್ಲಿ ಮಳೆ ಕೊರತೆ ಉಂಟಾಗಿದೆ. ಈ ಭಾಗಗಳಲ್ಲಿ ಈ ವಾರ ಉತ್ತಮ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಆಗಲೂ ಮಳೆಯಾಗದಿದ್ದಲ್ಲಿ ಪರ್ಯಾಯ ವ್ಯವಸ್ಥೆಗೆ ಮೊರೆ ಹೋಗಬೇಕಾದ ಅನಿವಾರ್ಯತೆ ಹೆಚ್ಚಿದೆ.
POPULAR STORIES :
ಅಬ್ಬಾ.. ಈ ವಿಡಿಯೋ ನೋಡಿದ್ರೆ ಕರಳು ಚುರುಕ್ ಅನ್ನತ್ತೆ..!
ಅರ್ನಬ್ ಗೋಸ್ವಾಮಿ ವಿರುದ್ದ 500 ಕೋಟಿ ರೂ ದಾವೆ ಹೂಡಿದ ಝಾಕೀರ್…!
ಮೊಬೈಲ್ ಫೋನ್ ಚಾರ್ಜ್ ಗೆ ಇಟ್ಟಿರುವಾಗ ಬ್ಲಾಸ್ಟ್ ಆಗಬಹುದು ಹುಷಾರ್…!
ಯಾಹೂ ಸಿಬ್ಬಂದಿಗಳಿಗೆ ಸಿ.ಇ.ಓ.ನ ಕೊನೆಯ ಪತ್ರ
ಸಲ್ಮಾನ್ ಗುಂಡು ಹಾರಿಸಿದ್ದು ನನ್ನ ಕಣ್ಣಾರೆ ನೋಡಿದ್ದೇನೆ: ಕೃಷ್ಣ ಮೃಗ ಬೇಟೆಯಲ್ಲಿ ಹೊಸ ಟ್ವಿಸ್ಟ್.
ಲೈಂಗಿಕ ಸಮಸ್ಯೆಗೆ ರಾಮಬಾಣ ದಾಳಿಂಬೆ ಹಣ್ಣಿನ ಜ್ಯೂಸ್….. !
ಇದ್ದಕ್ಕಿದ್ದ ಹಾಗೆ ಒಂದು ಹುಡುಗಿ ನಿಮ್ಮನ್ನು ತಬ್ಬಿಕೊಳ್ಳಲು ಬಂದಾಗ ನಿಮಗೆ ಏನ್ ಅನ್ಸಲ್ಲಾ ಹೇಳಿ..!
ಧೋನಿಯನ್ನು ಮಾಹೀ ಎಂದು ಕರೆದ ಮಗಳು ಜಿವಾ..! ಅಪ್ಪ ಮಗಳ ಕ್ಯೂಟ್ ವಿಡಿಯೋ..!