ಹುಚ್ಚ, ಸ್ವಾತಿಮುತ್ತು, ವೀರ ಮದಕರಿ, ಕೆಂಪೇಗೌಡ, ಮೈ ಆಟೋಗ್ರಾಫ್, ರನ್ನ ಸೇರಿದಂತೆ ಅನೇಕ ರಿಮೇಕ್ ಚಿತ್ರಗಳನ್ನು ಮಾಡಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ ಕಿಚ್ಚ ಸುದೀಪ್ ಇನ್ಮುಂದೆ ರಿಮೇಕ್ ಚಿತ್ರಕ್ಕೆ ತಲೆ ಹಾಕಲ್ಲ ಅಂತ ಕಾಣ್ಸುತ್ತೆ..! ಕಿಚ್ಚ ಅಭಿನಯಿಸಿರೊ ರಿಮೇಕ್ ಚಿತ್ರಗಳೆಲ್ಲವೂ ಸೂಪರ್ ಹಿಟ್ ಆಗಿದ್ರೂ ಕೂಡ ಜನ ಆವರಿಗೆ ರಿಮೇಕ್‍ಗಳ ಹೀರೋ ಅನ್ನೊ ಪಟ್ಟ ಕೊಟ್ಟಿದ್ರು. ಆದ್ರೆ ಈ ವರ್ಷದಿಂದ ಆ ಪಟ್ಟವನ್ನು ಅಳಿಸಿ ಹಾಕೋಕೆ ಸಿದ್ದರಾಗಿದ್ದಾರೆ ಸುದೀಪ್..! ಹೇಗೆ ಅಂತೀರಾ..? ಈ ವರ್ಷ ಸುದೀಪ್ ಯಾವುದೇ ರಿಮೇಕ್ ಚಿತ್ರಕ್ಕೆ ಸಹಿ ಹಾಕಿಲ್ವಂತೆ. ಅಷ್ಟೆ ಅಲ್ಲ ಎಸ್.ಕೃಷ್ಣ ನಿರ್ದೇಶನದ ಹೆಬ್ಬುಲಿ ಚಿತ್ರವೂ ಕೂಡ ಸ್ವಮೇಕ್ ಚಿತ್ರ ಎನ್ನುವ ಸುದ್ದಿಯೂ ಇದೆ. ಈ ಚಿತ್ರ ಫೆಬ್ರವರಿಯಲ್ಲಿ ರಾಜ್ಯದಾದ್ಯಂತ ಬಿಡುಗಡೆಗೊಳ್ಳಲಿದೆ. ಇನ್ನುಳಿದಂತೆ ಜನವರಿ 21 ರಿಂದ ‘ದಿ ವಿಲನ್’ ಸಿನಿಮಾದ ಶೂಟಿಂಗ್ ಕಾರ್ಯವೂ ಕೂಡ ಆರಂಭವಾಗಲಿದೆ. ಈ ಚಿತ್ರದ ನಿರ್ದೇಶಕ ಪ್ರೇಮ್ ಆಗಿದ್ದು ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರೊಂದಿಗೆ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ. ಅದಾದ ನಂತರದಲ್ಲಿ ಕಿರಿಕ್ ಪಾರ್ಟಿ ಚಿತ್ರದ ನಟ ರಕ್ಷಿತ್ ಶೆಟ್ಟಿ ಜೊತೆ ‘ಥಗ್ಸ್ ಆಫ್ ಮಾಲ್ಗುಡಿ’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ..! ಈ ಕುರಿತು ಥಗ್ಸ್ ಆಫ್ ಮಾಲ್ಗುಡಿ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಟ್ವಿಟರ್‍ನಲ್ಲಿ ಟ್ವೀಟ್ ಮಾಡಿದ್ದಾರೆ. ಈ ಎಲ್ಲಾ ಚಿತ್ರಗಳು ಸ್ವಮೇಕ್ ಚಿತ್ರಗಳಾಗಿರೋ ಕಾರಣ ಈ ವರ್ಷ ರಿಮೇಕ್ ಚಿತ್ರಗಳನ್ನು ಮಾಡದೆ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ ಸುದೀಪ್.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಸದ್ಯದಲ್ಲೆ ಬೆಂಗಳೂರಲ್ಲಿ ಪ್ರತ್ಯೇಕ ಸೈಬರ್ ಠಾಣೆ: ಪ್ರವೀಣ್ ಸೂದ್
ಸ್ಯಾಂಡಲ್‍ವುಡ್ ಮಿಸ್ಟರ್ ಪರ್ಫೆಕ್ಟ್ ಅಂತೆ ಈ ನಟ..!