ಆಸ್ಪತ್ರೆಗೆ ಸಾಗಿಸಲು ರಸ್ತೆ ಇಲ್ಲದೇ ನವಜಾತ ಅವಳಿ ಶಿಶುಗಳು ತಾಯಿ ಮಡಿಲಲ್ಲೇ ಸಾವು

0
34

ಆಸ್ಪತ್ರೆಗೆ ಸಾಗಿಸಲು ರಸ್ತೆ ಇಲ್ಲದ ಕಾರಣ ಅವಧಿಪೂರ್ವ ಜನಿಸಿದ ನವಜಾತ ಅವಳಿ ಶಿಶುಗಳು ತಾಯಿಯ ಮಡಿಲಿನಲ್ಲಿಯೇ ಸಾವನ್ನಪ್ಪಿರುವ ಹೃದಯವಿದ್ರಾಯಕ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಯನ್ನು ತಾತ್ಕಾಲಿಕ ಸ್ಟ್ರೆಚರ್‍ನಲ್ಲಿ ಸಮೀಪದ ಆಸ್ಪತ್ರೆಗೆ ಸಾಗಿಸುತ್ತಿರುವುದನ್ನು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೆರಿಗೆ ನಂತರ ಭಾರೀ ರಕ್ತಸ್ರಾವವಾಗುತ್ತಿದ್ದ ಮಹಿಳೆಯನ್ನು ಕುಟುಂಬಸ್ಥರು ಸುಮಾರು 3 ಕಿ.ಮೀವರೆಗೆ ಕಲ್ಲು, ಮಣ್ಣು ಹಾಗೂ ಇಳಿಜಾರು ಪ್ರದೇಶಗಳಲ್ಲಿ ಹೊತ್ತು ಸಾಗಿಸಿದರು.

ಪಾಲ್ಘರ್ ಜಿಲ್ಲೆಯ ಮೊಖಾಡಾ ತಹಸಿಲ್ ನಿವಾಸಿಯಾಗಿರುವ ವಂದನಾ ಬುಧರ್ ತಮ್ಮ ಮನೆಯಲ್ಲಿಯೇ ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಏಳು ತಿಂಗಳ ಗರ್ಭಾವಸ್ಥೆಯಲ್ಲಿಯೇ ಅಕಾಲಿಕವಾಗಿ ಜನಿಸಿದ ಅವಳಿ ಶಿಶುಗಳು ದುರ್ಬಲವಾಗಿದ್ದವು. ಅಲ್ಲದೇ ಸರಿಯಾದ ವೈದ್ಯಕೀಯ ಚಿಕಿತ್ಸೆ ಇಲ್ಲದೇ ಇರುವುದರಿಂದ ಅವಳಿ ಶಿಶುಗಳು ತಾಯಿಯ ಕಣ್ಣೇದುರೆ ಎದುರೇ ಪ್ರಾಣಬಿಟಆಗುತ್ತಿದೆ.

ಈ ನಡುವೆ ಭಾರೀ ರಕ್ತಸ್ರಾವವಾಗುತ್ತಿದ್ದರಿಂದ ಮಹಿಳೆಯ ಸ್ಥಿತಿ ತೀವ್ರವಾಗಿ ಹದಗೆಡುತ್ತಿದ್ದಂತೆ, ಕುಟುಂಬಸ್ಥರು ಹಗ್ಗ, ಬೆಡ್‍ಶೀಟ್ ಮತ್ತು ಮರದ ತುಂಡನ್ನು ಬಳಸಿ ತಾತ್ಕಾಲಿಕ ಸ್ಟ್ರೆಚರ್ ಸಿದ್ಧಪಡಿಸಿ ಮಹಿಳೆಯನ್ನು ಹೊತ್ತುಕೊಂಡು ಆಸ್ಪತ್ರೆಯ ದಾರಿಯತ್ತ ಹೊರಟಿದ್ದರು. ಈಗಾಗಲೇ ಮಗುವನ್ನು ಕಳೆದುಕೊಂಡಿದ್ದು, ತಾಯಿಯನ್ನಾದರೂ ಉಳಿಸಬೇಕು ಎಂದು ನಿರ್ಧರಿಸಿ ಇಳಿಜಾರು ಪ್ರದೇಶಗಳಲ್ಲಿ ನಿಧಾನವಾಗಿ ಸಾಗುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

LEAVE A REPLY

Please enter your comment!
Please enter your name here