ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ, ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ , ರಾಕಿಂಗ್ ಸ್ಟಾರ್ ಯಶ್ ಹೀಗೆ ಸ್ಯಾಂಡಲ್ ವುಡ್ ನ ನಂಬರ್ 1 ಹೀರೋ ಯಾರು ಅಂತ ಕೇಳಿದ್ರೆ ಉತ್ತರಿಸೋದು ಕಷ್ಟ.
ಆದರೆ, ಅಭಿಮಾನಿಗಳು ತನ್ನ ನೆಚ್ಚಿನ ನಟನ ಹೆಸರು ಹೇಳಿ ಇವರೇ ನಂಬರ್ 1…ಯಾಕೆ ? ಏನು ? ಅಂತ ಡೀಟೈಲ್ ಆಗಿ ಹೇಳ್ತಾರೆ.
ನಂಬರ್ 1 ಹೀರೋ ಪಟ್ಟಕ್ಕೆ ಟಾಪ್ ಸ್ಟಾರ್ ನಟರು ಫೈಟ್ ಮಾಡ್ತಾರೋ ಇಲ್ಲ ಗೊತ್ತಿಲ್ಲ.ಬಟ್ ತಮ್ಮ ನಟನಿಗಾಗಿ ಅಭಿಮಾನಿಗಳು ಮಾತ್ರ ಫೈಟ್ ಮಾಡ್ತಾನೇ ಇರ್ತಾರೆ.
ಇದೀಗ ಗೂಗಲ್ ನಲ್ಲಿ ಕನ್ನಡದ ನಂಬರ್ 1 ಹೀರೋ ಯಾರು ಅಂತ ನೋಡಿದ್ರೆ ಬರೋ ಹೆಸರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಗೂಗಲ್ ಪ್ರಕಾರ ಸ್ಯಾಂಡಲ್ ವುಡ್ ನ ನಂಬರ್ 1ಹೀರೋ ಅಪ್ಪು.