ವಿಶ್ವದ ದೊಡ್ಡಣ್ಣ ಎನಿಸಿರುವ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಪುತ್ರಿ ಸಶಾ ಒಬಾಮ ಕೆಲವು ದಿನಗಳ ಹಿಂದೆ ರೆಸ್ಟೋರೆಂಟ್‍ಗಳಲ್ಲಿ ಕೆಲಸ ಮಾಡುತ್ತಿದ್ದ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈಗ ಒಬಾಮಾರ ಮತ್ತೋರ್ವ ಪುತ್ರಿ ವಿಶಿಷ್ಟ ರೀತಿಯಲ್ಲಿ ಸುದ್ದಿಯಾಗ್ತಿದ್ದಾರೆ.
18 ವರ್ಷದ ಮಲಿಯಾ ಒಬಾಮಾ ಚಿಕಾಗೋದಲ್ಲಿ ನಡೆದಿದ್ದ ಮ್ಯೂಸಿಕಲ್ ಫೆಸ್ಟಿವಲ್‍ನಲ್ಲಿ ತನ್ನ ಸ್ನೇಹಿತರ ಜೊತೆ ಪಾಲ್ಗೊಂಡು ಅವರೊಂದಿಗೆ ಧಂ ಎಳೆಯುವಾಗ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದು ಇದೀಗ ಎಲ್ಲೆಡೆ ಬಾರಿ ಸದ್ದು ಮಾಡುತ್ತಿದೆ. ಕೇವಲ ಸಿಗರೇಟ್ ಸೇದಿದ್ದರೆ ಈ ರೀತಿ ಸುದ್ದಿಯಾಗುತ್ತಿರಲಿಲ್ಲವೇನೋ..? ಆದರೆ ಮಲಿಯಾ ಸಿಗರೇಟ್‍ನಲ್ಲಿ ಮರಿಜುವನಾ ಡ್ರಗ್ಸ್ ಹಾಕಿಕೊಂಡು ಧಂ ಎಳೆಯುತ್ತಿದ್ದದ್ದು ಸುದ್ದಿಗೆ ಒಂದು ದೊಡ್ಡ ಕಾರಣವಾಗಿದೆ. ತನ್ನ ಸ್ನೇಹಿತರ ಜೊತೆಗಿನ ಬಿಂದಾಸ್ ಫೋಟೋಗಳನ್ನು ತೆಗೆದು ಶೇರ್ ಮಾಡಿಕೊಳ್ಳುತ್ತಿದ್ದ ಮಲಿಯಾ ಒಬಾಮ ಇದೀಗ ತಾನು ಧಂ ಎಳೆಯುವ ಚಿತ್ರವನ್ನು ಬೇರೆ ಇನ್ಯಾರೋ ವ್ಯಕ್ತಿ ಶೇರ್ ಮಾಡಿರುವುದನ್ನು ಕಂಡು ಗಾಬರಿಯಾಗಿದ್ದಾಳೆ. ಬರಾಕ್ ಒಬಾಮಾ ತಾವು ಬಾಲ್ಯದಲ್ಲಿರುವಾಗ ಮರಿಜುವನಾ ಸೇವಿಸಿದ್ದಾಗಿ ಈ ಹಿಂದೆ ಮಾಧ್ಯಮಗಳ ಬಳಿ ಹೇಳಿಕೊಂಡಿದ್ದರು. ಇದೀಗ ಮಗಳ ಸರದಿ ಎಂದು ಅಮೇರಿಕಾ ಮಾಧ್ಯಗಳು ವರದಿ ಮಾಡಿವೆ.
POPULAR STORIES :
ಸ್ಯಾಮ್ ಸಂಗ್ ಕಂಪನಿಯು ಭೀಕರ ರಹಸ್ಯದ ಬಗ್ಗೆ ಬಾಯ್ಮುಚ್ಕೊಂಡು ತೆಪ್ಪಗಿರೋಕೆ ಕೆಲಸಗಾರರಿಗೆ ಭಾರೀ ಮೊತ್ತ ನೀಡಿತ್ತಂತೆ
ಈ ಹಾಡನ್ನು ಕೇಳಿದವ್ರೆಲ್ಲಾ ಸುಸೈಡ್ ಮಾಡ್ಕೊಂಡ್ರಂತೆ…!
ದೇಶೀ ತಳಿ ಹಸುವಿನ ಸಗಣಿ ಸೇವಿದರೆ ನಾರ್ಮಲ್ ಡಿಲೆವರಿ…!
ಚಲಿಸುತ್ತಿರೋ ಟ್ರೈನ್ ನಲ್ಲಿದ್ದ R.B.I ನ 225 ಬಾಕ್ಸ್ ನಿಂದ 5.78 ಕೋಟಿ ರೂಪಾಯಿಗಳ ದರೋಡೆ ಮಾಡಿದ ಖದೀಮರು
ಒಲಿಂಪಿಕ್ಸ್ ನಲ್ಲಿ ಕಳ್ಳರ ಕಾಟ, ಭಯಭೀತರಾಗಿರುವ ಪ್ರವಾಸಿಗರು..! #Video
ಮೋದಿ ವಿರುದ್ದ ಲೀಗಲ್ ನೋಟಿಸ್ ಜಾರಿ…!
ಹನ್ನೆರಡು ವರ್ಷಗಳಿಂದ ಈ ಶಾಲೆಯಲ್ಲಿ ರಾಷ್ಟ್ರಗೀತೆಯೇ ಮೊಳಗಲಿಲ್ಲ…!
ತಲೆ ಇಲ್ಲ… ಆದ್ರೂ ನಡೆದಾಡುತ್ತೆ ಕೋಳಿ..?!