ಒಂದು ಹೊಸ ಪ್ರಭೇದದ ಮೀನನ್ನು ವಿಜ್ಞಾನಿಗಳು ಕಂಡು ಹಿಡಿದರೆ ಅದಕ್ಕೆ ಸಾಮಾನ್ಯವಾಗಿ ವ್ಶೆಜ್ಞಾನಿಕವಾದ ಹೆಸರನ್ನಿಡೋದು ಸಾಮಾನ್ಯ..! ಆದ್ರೆ ಅಮೇರಿಕಾದ ವಿಜ್ಞಾನಿಗಳು ಒಂದು ಹೊಸ ಪ್ರಭೇಧದ ಮೀನಿಗೆ ಅಮೇರಿಕಾ ಅಧ್ಯಕ್ಷರಾದ ಬರಾಕ್ ಒಬಾಮಾರ ಹೆಸನ್ನಿಟ್ಟು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದ್ದಾರೆ. ಫೆಸಿಫಿಕ್ ಸಾಗರದ ಕುರ್ ಹವಳ ದ್ವೀಪದ ವಿಜ್ಞಾನಿಗಳು ಒಂದು ಹೊಸ ಪ್ರಭೇಧದ ಮೀನನ್ನು ಪತ್ತೆ ಮಾಡಿದ್ದು, ಟೊಸನಯಿಡ್ಸ್ ಜಾತಿಗೆ ಸೇರಿದ್ದ ಕೆಡುಗೆಂಪು ಹಾಗೂ ಚಿನ್ನದ ಬಣ್ಣವನ್ನು ಹೊಂದಿರುವ ಈ ಜಾತಿಯ ಮೀನುಗಳು ಹವಾಯಿ ದ್ವೀಪದ ಉತ್ತರ ಭಾಗದ ಕುರ್ ಪ್ರದೆಶದ ಬಳಿ ಕಂಡುಬಂದಿದೆ. ಸುಮಾರು 15 ಲಕ್ಷ ಚದರ ಕಿ.ಮೀ ವ್ಯಾಪ್ತಿಯ ಪಾರಾಂಗಣ ತಾಣ ಇದಾಗಿದ್ದು, ಈ ಪ್ರದೇಶದಲ್ಲಿ ಹೊಸ ಪ್ರಭೇದದ ಮೀನು ಕಂಡಿದೆ. ಬರಾಕ್ ಒಬಾಮಾ ಈ ಪ್ರದೇಶದಲ್ಲಿ ಕಡಲ ಸ್ಮಾರಕವನ್ನು ವಿಸ್ತರಿದ ಕಾರಣದಿಂದಾಗಿ, ಅಧ್ಯಕ್ಷರ ರಕ್ಷಣಾ ಬದ್ಧತೆ ತೋರಿರುವ ಹಿನ್ನಲೆಯಲ್ಲಿ ಈ ಹೊಸ ಮೀನಿನ ಪ್ರಭೇದಕ್ಕೆ ಒಬಾಮಾ ಅವರ ಹೆಸರನ್ನಿಟ್ಟಿದಾರೆ.
POPULAR STORIES :
ದೇಹದಲ್ಲಿರೋ ವಿಟಮಿನ್ ಕೊರತೆಯನ್ನು ಪತ್ತೆ ಹಚ್ಚುವುದು ಹೇಗೆ..??
ಬಂಪರ್ ಆಫರ್…! 500ರೂ. ಕೊಟ್ಟು ಒಂದು ದಿನ ಜೈಲುವಾಸ ಅನುಭವಿಸಿ..!
ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಆಕೆಗೆ ಅಲ್ಲಿನ ಸರ್ಕಾರ ಕೊಟ್ಟ ಉಡುಗೊರೆ ಏನು ಗೊತ್ತಾ…?
ಶುಕ್ರವಾರ ತೆರೆ ಕಾಣಲಿವೆ ಎಂಟು ಸಿನಿಮಾ..! ದಾಖಲೆಯ ಸಿನಿಮಾ ರಿಲೀಸ್‍ಗೆ ಇನ್ನೊಂದೇ ದಿನ ಬಾಕಿ..!
ಶತಾಯುಷಿ ಅಜ್ಜಿ ಓಟದಲ್ಲಿ ಗೆದ್ದಿತು ಮೂರು ಚಿನ್ನದ ಪದಕ..!
ಕಾರ್ಮಿಕರ ಬೇಡಿಕೆ ಈಡೆರಿಸುವಲ್ಲಿ ಕೇಂದ್ರ ವಿಫಲ: ಶುಕ್ರವಾರ ಭಾರತ್ ಬಂದ್ ಖಚಿತ..!