ವಾಟ್ಸಾಪ್ ಗ್ರೂಪ್‍ನಲ್ಲಿ ಪ್ರಧಾನಿ ಮೋದಿ ಅವರ ಆಕ್ಷೇಪಾರ್ಹ ಫೊಟೋಗಳನ್ನು ಕಳುಹಿಸಿದಕ್ಕಾಗಿ ಪಂಚಾಯ್ತಿ ಅಧಿಕಾರಿಯೋರ್ವರನ್ನು ಅಮಾನತುಗೊಳಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸಬ್ ಡಿವಿಶನಲ್ ಮ್ಯಾಜಿಸ್ಟ್ರೇಟ್ ಕ್ರಿಯೇಟ್ ಮಾಡಲಾಗಿದ್ದ ವಾಟ್ಸಾಪ್ ಗ್ರೂಪ್‍ನಲ್ಲಿ ಪಂಚಾಯತ್ ರಾಜ್ ಇಲಾಖೆ ಅಧಿಕಾರಿ ಹಿಫಾಜತ್ ಖಾನ್ ಮೋದಿ ಅವರ ಫೋಟೋವನ್ನು ಹಾಕಿದ್ದದರು. ಬಹೇದಿ ಪಂಚಾಯತ್‍ನಲ್ಲಿ ಅಧಿಕಾರಿಯಾಗಿದ್ದ ಹಿಫಾಜತ್ ಉಲ್ಲಾ ಖಾನ್‍ಗೆ ಶೋಕಾಸ್ ನೋಟಿಸ್ ಕೂಡ ಮಾಡಲಾಗಿತ್ತು. ಆದರೆ ಅವರು ತೃಪ್ತಿದಾಯಕ ಪ್ರತಿಕ್ರಿಯೆ ನೀಡದ ಕಾರಣ ಅಮಾನತು ಮಾಡಲಾಗಿದೆ. ಅಷ್ಟೆ ಅಲ್ಲದೇ ಕಾಲೇಜು ಮ್ಯಾನೆಜರ್ ಹರಿ ಓಂ ಸಿಂಗ್ ಕೂಡ ಮೋದಿ ಅವರ ಆಕ್ಷೇಪಾರ್ಹ ಫೋಟೋಗಳನ್ನು ವಾಟ್ಸಾಪ್‍ನಲ್ಲಿ ಕಳುಹಿದ್ದರಿಂದ ಅವರ ವಿರುದ್ದ ಬಿಜೆಪಿ ಜಿಲ್ಲಾಧ್ಯಕ್ಷ ರವೀಂದ್ರ ಸಿಂಗ್ ರಾಥೋಡ್ ದೂರು ನೀಡಿದ್ದು, ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Like us on Facebook The New India Times
POPULAR STORIES :
ಒಬಿಸಿ ಪಟ್ಟಿಗೆ 15 ಹೊಸ ಜಾತಿ ಸೇರ್ಪಡೆ..!
ಇನ್ಮುಂದೆ ಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆ, ರಾಷ್ಟ್ರಧ್ವಜ ಪ್ರದರ್ಶನ ಕಡ್ಡಾಯ : ಸುಪ್ರೀಕೋರ್ಟ್‍ನ ಮಹತ್ವದ ಆದೇಶ..!