ದೇಹವು ನೂರೆಂಟು ದಾಹದೊಳು ದಹಿಸಿ
ಧನ-ಕನಕಗಳ ಸ್ರವಿಸಿ
ಸೊಕ್ಕಿನಿಂದಲಿ ಪರರ ದೂಷಿಸುತ
ದಾನ-ಧರ್ಮವ ಮರೆಯುವ
ಮೂಳೆಮಾಂಸಕೆ ಕಾವ್ಯದತ್ತನು
ಹಣತೆಯ ಹಿಡಿದು
ತಂದು ನುಡಿದಿಹನು
ಉಸಿರಿಲ್ಲದ ಹಣಕೆ
ಹೆಸರುಳಿಸುವ ತಲೆಬರಹಗಳಿಲ್ಲ
ಉಸಿರು ಜಗದಸಿರಾಗಲು
ಜ್ಞಾನಾಕ್ಷರದ ಜೋಳಿಗೆಯು ತುಂಬಿ
ಸಂಬಂಧಗಳ ನಂಬಿ
ಬಡಬಗ್ಗರ ಒಳಹೃದಯವ
ಅಪ್ಪುವಂತಿರಬೇಕು.
✍?ದತ್ತರಾಜ್ ಪಡುಕೋಣೆ✍?
ಒಳಹೃದಯ-ಜಗಹೃದಯ
Date: