ನೀವು ಗಮನಿಸಿರುತ್ತೀರಿ , ಪುಸ್ತಕಗಳು ಹಳೆಯದಾದಂತೆ ಹಳದಿ ಆಗುತ್ತವೆ. ಆದ್ರೆ ಹೀಗೆ ಹಳದಿ ಆಗುವುದೇಕೆ ಅಂತ ಯೋಚಿಸಿರಲ್ಲ.
ಕಾಗದವನ್ನು ಸಾಮಾನ್ಯವಾಗಿ ಮರದ ಬಿಳಿ ಸೆಲ್ಯುಲಸ್ ನಿಂದ ತಯಾರಿಸಲಾಗುತ್ತದೆ. ಮರದಲ್ಲಿ ಲಿಗ್ನಿನ್ ಎನ್ನುವ ಕಡು ಅಂಶವಿದ್ದು, ಇದು ಕೂಡ ಕಾಗದ ತಯಾರಿಕೆಯ ಅಂಶವಾಗಿದೆ.
ಲಿಗ್ನಿನ್ ಎನ್ನುವ ಅಂಶವು ಮರವು ತುಂಬಾ ಕಠಿಣವಾಗಿ, ನೇರವಾಗಿ ಬೆಳೆಯಲು ನೆರವಾಗುವುದು. ಸೆಲ್ಯುಲಸ್ ನಾರಿನಾಂಶವು ಜತೆಯಾಗಿರಲು ಲಿಗ್ನಿನ್ ಅಂಟಿನಂತೆ ಕೆಲಸ ಮಾಡುವುದು. ಲಿಗ್ನಿನ್ ಗಾಳಿ ಮತ್ತು ಬಿಸಿಲಿಗೆ ಒಡ್ಡುವುದರಿಂದ ಕಾಗದದ ಬಣ್ಣವು ಹಳದಿಯಾಗುವುದು.
ಲಿಗ್ನಿನ್ ಅಣುಗಳು ಗಾಳಿಯಲ್ಲಿರುವ ಆಕ್ಸಿಜನ್ ಗೆ ಒಡ್ಡಿಕೊಂಡಾಗ ಇದು ಬದಲಾಗಲು ಆರಂಭವಾಗುವುದು ಮತ್ತು ಸ್ಥಿರತೆ ಕಡಿಮೆಯಾಗುವುದು. ಲಿಗ್ನಿನ್ ಹೆಚ್ಚು ಬೆಳಕನ್ನು ಹೀರಿಕೊಳ್ಳುವುದು. ಇದರ ಪರಿಣಾಮ ಕಾಗದದ ಬಣ್ಣ ಕಡುವಾಗುವುದು
ಲಿಗ್ನಿನ್ ನ್ನು ಹೆಚ್ಚು ತೆಗೆದರೆ ಅದು ಕಾಗದದ ಬಣ್ಣವು ಬಿಳಿಯಾಗಿಯೇ ಇರುವುದು. ಕಾಗದ ತಯಾರಕರು ಮರದಲ್ಲಿರುವ ಲಿಗ್ನಿನ್ ಅಂಶವನ್ನು ತೆಗೆಯಲು ಬ್ಲೀಚಿಂಗ್ ಬಳಸುವರು. ಪತ್ರಿಕೆ ಹಾಗೂ ಪಠ್ಯ ಪುಸ್ತಕಗಳಿಗೆ ಬಳಸುವಂತಹ ಕಾಗದದ ಗುಣಮಟ್ಟವು ತುಂಬಾ ಕೆಳಮಟ್ಟದ್ದಾಗಿರುವುದು. ಇದರಿಂದಾಗಿ ಪತ್ರಿಕೆ ಹಾಗೂ ಪಠ್ಯ ಪುಸ್ತಕದ ಪುಟಗಳು ಒಂದು ಹಂತದ ಬಳಿಕ ಹಳದಿ ಬಣ್ಣಕ್ಕೆ ತಿರುಗುವುದು.