ವಯಸ್ಸಾದ್ಮೇಲೆ ಬದುಕಿರಬಾರ್ದಪ್ಪ..! ಮಕ್ಕಳೆಲ್ಲಾ ನಮ್ಮನ್ನು ನೋಡ್ಕೊಳ್ತಾರೆ ಅನ್ನೋದು ಸುಳ್ಳು ಅಂತ 50-60 ವರ್ಷದವರೇ ಹೇಳೋದನ್ನು ಕೇಳಿದ್ದೇನೆ..! ಅವರಿಗೆ ಇನ್ನೂ ಏಜ್ ಆದ್ಮೇಲೆ ತಮ್ಮ ಮಕ್ಕಳು ನೋಡ್ಕೋಳೋದಿಲ್ಲ ಅಂತ ಅನಿಸ್ತಾ ಇರುತ್ತೆ..! ಅವರ ಮಕ್ಕಳು ಅಂಥಾ ಹೃದಯಹೀನರಲ್ಲದೇ ಇದ್ದರೂ ಬೇರೆಯವರ ಸ್ಥಿತಿಯನ್ನು ಕಂಡು ನಮಗೂ ಅಂಥಾ ಸ್ಥಿತಿ ಬರಬಹುದೆಂದು ಯೋಚಿಸುವವರು ಇದ್ದಾರೆ..! ವಯಸ್ಸಾದ್ಮೇಲೆ ಕೆಲವರು ಎಂಥೆಂಥಾ ಕಷ್ಟವನ್ನು ಅನುಭವಿಸ್ತಾರೆ ಅಂತ ನಿಮಗೂ ಗೊತ್ತು..! ಎಷ್ಟೋ ಜನ ವೃದ್ಧರು ಅನಾಥರಾಗಿ ಉಸಿರಿದೆಲ್ಲಾ ಎಂಬ ಕಾರಣಕ್ಕಾಗಿಯೇ ಬದುಕಿರೋದನ್ನು ನೋಡಿರ್ತೀರಿ..! ಅಂಥವರಲ್ಲಿ ಈ ಮೇಲಿನ ಚಿತ್ರದಲ್ಲಿ ಕಾಣೋ ಅಜ್ಜಿ ಕೂಡ ಒಬ್ಬರು..!
ಅದ್ನಾನ್ ಖಾನ್ ಅನ್ನೋರು ಈ ಅಜ್ಜಿ ಕತೆಯನ್ನು ತನ್ನ ಫೇಸ್ ಬುಕ್ ಗೋಡೆಯಲ್ಲಿ ಬರ್ಕೊಂಡಿದ್ದಾರೆ..! ಅದ್ನಾನ್ ಖಾನ್ ಅವರು `ದಾದರ್’ ಬೀದಿಯಲ್ಲಿ ನಡೆದುಕೊಂಡು ಹೋಗ್ತಾ ಇದ್ರಂತೆ..! ದಾದರ್ ರೈಲ್ವೆ ನಿಲ್ದಾಣದ ಸಮೀದ ಬೀದಿಯಲ್ಲಿ ತುಂಬಾ ಅಂದ್ರೆ ತುಂಬಾ ವಯಸ್ಸಾಗಿರೋ ಅಜ್ಜಿ ಭಿಕ್ಷೆ ಬೇಡ್ತಾ ಇದ್ದರಂತೆ…! ಸಹಜವಾಗಿಯೇ ಅದ್ನಾನ್ ಖಾನ್ ಅವರಿಗೆ ಅಯ್ಯೋ ಪಾಪ ಅನಿಸ್ತಂತೆ..! ಪಾಪ, ಆ ಅಜ್ಜಿ ಹಸಿದಿದ್ದಾರೇನೋ ಅಂಥ ಪಕ್ಕದ ಫುಡ್ ಸ್ಟಾಲ್ಗೆ ಹೋಗಿ ತಿಂಡಿ ತಂದು ಕೊಡೋಕೆ ಹೋಗ್ತಾರಂತೆ..! ಅವರು ತಿಂಡಿ ತಗೊಂಡು ಆ ಅಜ್ಜಿಗೆ ಕೊಡಬೇಕು ಅನ್ನುವಷ್ಟರಲ್ಲಿ ಬೀದಿ ವ್ಯಾಪಾರಿಯೊಬ್ಬರು ಅದ್ನಾನ್ ಖಾನ್ ರವರನ್ನು ತಡೆದು.. ತಿಂಡಿಕೊಡ್ಬೇಡಿ ಅಂತಾರಂತೆ..! ಯಾಕೆ..? ಅಂತ ಅದ್ನಾನ್ ಖಾನ್ ಅವ್ರು ಕೇಳಿದಾಗ ಆ ವ್ಯಾಪಾರಿ ಹೇಳ್ತಾರೆ “ಬೆಳಿಗ್ಗೆಯಿಂದಲೂ ಆ ಅಜ್ಜಿಗೆ ತಿನ್ನೋಕೆ ಕೊಡ್ತಾನೇ ಇದ್ದಾರೆ..! ಆದರೆ ಅಜ್ಜಿ ಅದನ್ನು ತಿನ್ನದೇ ಹಾಗೇ ಎಸೆಯುತ್ತಿದ್ದಾರೆ..! ಸುಮ್ಮನೇ ತಿಂಡಿ ಕೊಟ್ಟರೂ ಪ್ರಯೋಜನವಿಲ್ಲ ಅಂತಾರಂತೆ..! ಇನ್ನಷ್ಟೂ ಈ ಅಜ್ಜಿ ಬಗ್ಗೆ ವಿಚಾರಿಸಿದಾಗ ಆ ಅಜ್ಜಿಯನ್ನು ಸಂಜೆ ಯಾರೋ ಬಂದು ಇಲ್ಲಿಗೆ ಬಿಟ್ಟು ಹೋಗಿದ್ದಾರೆಂಬುದನ್ನು ತಿಳಿಸುತ್ತಾರೆ..! ವ್ಯಾಪಾರಿ ಕೂಡ ಮುಂಬೈ ಪೊಲೀಸರಿಗೆ ಮತ್ತು ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಅವರಿಗೆ ಈ ವಿಷಯವನ್ನು ತಿಳಿಸಿದರೂ ಪ್ರಯೋಜನವಾಗಿಲ್ಲ..! ಅವರುಗಳು ಅಜ್ಜಿಗೆ ಸಹಾಯ ಮಾಡಲು ನಿರಾಕರಿಸಿದರಂತೆ..! ಆದ್ದರಿಂದ ಅದ್ನಾನ್ ಖಾನ್ ಅವರು ಫೇಸ್ ಬುಕ್ ನಲ್ಲಿ ಈ ಸ್ಟೋರಿಯನ್ನು ಬರೆದು, ಯಾರಾದರೂ ಪುಣ್ಯಾತ್ಮರು ಅಥವಾ ಯಾವುದಾದರೂ ಸಂಸ್ಥೆಗಳು ಅಜ್ಜಿಯ ಸಹಾಯಕ್ಕೆ ಬರ ಬಹುದೇನೋ ಅಂತ ಭಾವಿಸಿದ್ದಾರೆ..! ಯಾರದರೂ ಆ ಅಜ್ಜಿಗೆ ಸಹಾಯ ಮಾಡಿಯೇ ಮಾಡ್ತಾರೆ, ಮಾಡುವಂತಾಗಲಿ ಅನ್ನೋದೇ ನಮ್ಮ ಆಶಯ ಕೂಡ..!
- ಶಶಿಧರ ಡಿ ಎಸ್ ದೋಣಿಹಕ್ಲು
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
44 ವರ್ಷದ ನಂತರ ಜೈಲಿನಿಂದ ಹೊರಬಂದ ವ್ಯಕ್ತಿಯ ಪ್ರತಿಕ್ರಿಯೆ..!
ಇಡೀ ಜೀವನವನ್ನೇ ತಮ್ಮಂದಿರಿಗಾಗಿ ಮುಡಿಪಾಗಿಟ್ಟ ಅಣ್ಣ..!
ವಯಸ್ಸಾದ ಅಪ್ಪ ಬೆಂಗಳೂರಲ್ಲಿ ಒಬ್ಬಂಟಿ, ಮಗ ಹೆಂಡತಿ ಮಕ್ಕಳೊಡನೆ ಅಮೇರಿಕಾದಲ್ಲಿ..!
ರಾಹುಲ್ ಗಾಂಧಿ ಇಂದು ಮೇಕ್ ಇನ್ ಇಂಡಿಯಾ ವರ್ಕ್ ಆಗ್ತಿಯಾ ಅಂತ ಕೇಳಿದ್ರು..! ಬೆಂಗಳೂರು ಹುಡುಗೀರು ಏನಂದ್ರು ಗೊತ್ತಾ..?!
ಅಭಿಷೇಕ್ ಗೆ ಗೂಗಲ್ ನೀಡುತ್ತೆ 20000000 ರೂಪಾಯಿಗಳ ಸಂಬಳ..! ಐಐಟಿ ವಿದ್ಯಾರ್ಥಿಗೆ ಕೋಟಿ ಕೋಟಿ ಸಂಬಳದ ಆಫರ್ ..!