ಇವತ್ತು ಬೆಳಿಗ್ಗೆ ಆಫೀಸಿಗೆ ಹೊರಟಿದ್ದೆ. ಆಗಲೇ ಯಥಾಪ್ರಕಾರ ಸೂರ್ಯ ಸುಡಲು ಶುರುಮಾಡಿದ್ದ. ಬೆವರಿನಿಂದ ತೊಯ್ದು ತಲೆ ಹೆಲ್ಮೆಟ್ ಅನ್ನು ಶಪಿಸುತ್ತಿತ್ತು. ಹೆಲ್ಮೆಟ್ ಕಡ್ಡಾಯ ಮಾಡಿದ ಸರ್ಕಾರವೇನೋ ಅಚಾನಕ್ಕ್ ಸಾವಿನಿಂದ ಬಚಾವಾಗುವ ಮಾರ್ಗ ತೋರಿಸಿತ್ತು. ಆದರೆ ದಿನಾ ಸಾಯೋದಕ್ಕೆ ಪರಿಹಾರ ಹೇಳಲಿಲ್ಲ. ಹೀಗೆ ಯೋಚಿಸುತ್ತಾ ಬೈಕ್ ರೈಡ್ ಮಾಡುತ್ತಿದ್ದವನ ಎದುರಿಗೆ ಎಪ್ಪತ್ತೈದರ ಅಜ್ಜ ಅಚಾನಕ್ಕಾಗಿ ಅಡ್ಡ ಬಂದ. ಬಲವಾಗಿ ಬ್ರೇಕ್ ಹಾಕಿದ ನಾನು ಬೈಬೇಕೆಂದು ಬಾಯಿ ತೆಗೆದೆ. ಆದರೆ ಆತನ ಪರಿಸ್ಥಿತಿ ಕರುಳನ್ನು ಚುರುಗುಟ್ಟಿಸಿತ್ತು. ನನಗೆ ಪಾಳ್ಯದವರೆಗೆ ಡ್ರಾಪ್ ಕೊಡಿ ಅಂದ. ಈ ಪಾಳ್ಯ ಅಂದರೆ ದೂರದರ್ಶನದ ಹಿಂಭಾಗದಲ್ಲಿ ಬರುವ ಏರಿಯಾ. ಅಜ್ಜನನ್ನು ಕೂರಿಸಿಕೊಂಡು ಹೊರಟ ನನಗೆ ಆತನ ಪರಿಸ್ಥಿತಿಯ ವರದಿ ಒಪ್ಪಿಸತೊಡಗಿದ. ಇರೋ ಮೂರು ಗಂಡುಮಕ್ಕಳು ಮದ್ವೆಯಾದ ಮೇಲೆ ಮನೆ ಬಿಟ್ಟಿದ್ದಾರೆ. ಅವರು ತಿಂಗಳಿಗೆ ತಲಾ ನೂರೈವತ್ತು ರೂಪಾಯಿ ಕೊಡುತ್ತಾರೆ. ಚಿಕ್ಕ ಕೋಣೆಯಂತ ಮನೆಯಲ್ಲಿ ನಾನು ನನ್ನ ಅರ್ಧಾಂಗಿ. ಅವಳಿಗೆ ಬಿಪಿ, ಶುಗರ್. ಅರೆ ಹೊಟ್ಟೆಯ ಜೀವನ. ಇಲ್ಲೆಲ್ಲೋ ವಾಚ್ ಮೆನ್ ಕೆಲಸ ಖಾಲಿಯಿದೆಯಂತೆ. ಮೂರು ಸಾವಿರ ಸಂಬಳ ಕೊಡ್ತಾರಂತೆ. ಸಾಯುವವರೆಗೆ ಬದುಕಬೇಕಲ್ಲ ಅಂದ. ಯಾಕೋ ಸಹಿಸಲಾಗಲಿಲ್ಲ. ತಿಂಡಿ ತಿಂದ್ರಾ ಅಂದೆ. ಬೆಳಿಗ್ಗೆ ತಿಂಡಿ ಬಿಟ್ಟು ಬಹಳ ವರ್ಷಗಳೇ ಆಯ್ತೆಂದ ಅಜ್ಜ. ಜೇಬಿನಲ್ಲಿದ್ದ ನೂರು ರೂಪಾಯಿ ತೆಗೆದು ಅವರ ಕೈಲಿಟ್ಟೆ. ನೂರು ವರ್ಷ ಬದುಕು ಎಂದ ತಾತನ ಕಣ್ಣಲ್ಲಿ ನೀರು. ಆ ಕಣ್ಣೀರು ಆ ಪಾಪಿ ಮಕ್ಕಳನ್ನು ಸುಡಲು ಸುರಿಯುತ್ತಿದೆ ಎಂದುಕೊಂಡು ಮುನ್ನಡೆದೆ.
- ರಾ ಚಿಂತನ್
POPULAR STORIES :
ಮದ್ವೆಗೂ ಮುನ್ನವೇ ಮಕ್ಕಳನ್ನು ಹೆತ್ತರು..!? ಮೊದಲು ಅಮ್ಮ ಆಗ್ತೀನಿ, ಆಮೇಲೆ ಮದ್ವೆ ಎಂದಳು ಶೃತಿ..!
ಯೂಟ್ಯೂಬ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಿಂಹದ ರಿಯಲ್ ಸ್ಟೋರಿ..!
ಒಸಾಮಾ ಬಿನ್ ಲಾಡೆನ್ ಸತ್ತಿಲ್ಲ..!? ಅಮೆರಿಕಾ ಮುಚ್ಚಿಟ್ಟ ಘೋರ ಸತ್ಯವೇನು..?
ಲವ್ ಇನ್ ಫೇಸ್ ಬುಕ್.. ಫ್ರಾನ್ಸ್ ಹುಡುಗಿ ಪುಣೆಯ ಹುಡುಗನ ರೋಮಾಂಚಕ ಸ್ಟೋರಿ