ಮದ್ವೆಗೂ ಮುನ್ನವೇ ಮಕ್ಕಳನ್ನು ಹೆತ್ತರು..!? ಮೊದಲು ಅಮ್ಮ ಆಗ್ತೀನಿ, ಆಮೇಲೆ ಮದ್ವೆ ಎಂದಳು ಶೃತಿ..!

0
58

raaaಚಂದದ ನಟಿಯರು. ಆಗ ತಾನೇ ಬಿರಿದ ಪೈರಿನಂಥ ಚೆಲುವೆಯರು. ನೇರಾ ನೇರಾ ನೋಡಿದ ನಂತರ ಅದೊಮ್ಮೆ ಕಳ್ಳನೋಟದಲ್ಲಿ ನೋಡಬೇಕೆನಿಸುವ ಚೆಲುವೆಯರು. ಒಬ್ಬರಿಗಿಂತ ಒಬ್ಬರು ಕೆಣಕುವ ಸುಂದರಿಯರು. ಇವರ ಒಂದು ಹಸ್ತಲಾಘವಕ್ಕೆ, ಅವಕಾಶ ಸಿಕ್ಕರೆ ಸಣ್ಣದೊಂದು ಅಪ್ಪುಗೆಗೆ ಹಾತೊರೆಯದ ಮನಸುಗಳೆಷ್ಟೋ..? ಇನ್ನು ಈ ಚೆಲುವೆಯರ ಜೊತೆ ಮದುವೆ ಆಗುವ ಯೋಗ ಕೂಡಿ ಬಂದ್ರೇ ಮುಗಿದೇಹೋಯ್ತು. ಆಕಾಶಕ್ಕೆ ಮೂರೇ ಗೇಣು. ಆದರೆ ಮೆಚ್ಚಿನ ಸೆಲೆಬ್ರಿಟಿಗಳು ಮದುವೆಗೂ ಮುನ್ನ ಗರ್ಭ ಧರಿಸಲು ಮುಲಾಜು ಮಾಡುವುದಿಲ್ಲ. ಅದರಲ್ಲೂ ಸಾಯುವಷ್ಟು ಇಷ್ಟಪಡುವ ನಟಿಮಣಿಯರು, ಸಡನ್ನಾಗಿ ಮಕ್ಕಳನ್ನು ಹೆತ್ತುಬಿಡುತ್ತಾರೆ ಅಂದ್ರೆ ಷಾಕ್ ಆದಷ್ಟೇ ನಿರಾಸೆಯಾಗುತ್ತದೆ. ಅವರಲ್ಲಿ ಶ್ರೀದೇವಿಯೂ ಒಬ್ಬಳು.

ಇವತ್ತಿಗೆ ಶ್ರೀದೇವಿಗೆ ಸರಿಯಾಗಿ ಐವತ್ತೆರಡು ವರ್ಷ. ಇನ್ನೂ ಮಾಸದ ಸೌಂದರ್ಯ. ಮತ್ತೆ ಮತ್ತೆ ನೋಡಬೇಕೆನ್ನುವ ರೂಪರಾಶಿ. ತಮಿಳು, ತೆಲುಗು, ಹಿಂದಿ, ಮಲಯಾಳಂ, ಕನ್ನಡ ಸೇರಿದಂತೆ ಬಹುಭಾಷಾ ತಾರೆಯಾಗಿ ಮಿಂಚಿದ ಈ ಚಂದದ ನಟಿ, ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾಳೆ. ತಮಿಳುನಾಡಿನ ಶಿವಕಾಶಿಯಲ್ಲಿ ಜನಿಸಿದ ಶ್ರೀದೇವಿಯ ಮೂಲ ಹೆಸರು ಶ್ರೀಅಮ್ಮ ಯಂಗರ್ ಅಯ್ಯಪ್ಪನ್. ಬಾಲ್ಯದಲ್ಲಿ ಮುಂಬೈ ಸೇರಿದ ಚಂದದ ಬೆಡಗಿ ಚಿತ್ರರಂಗವನ್ನು ಸೇರಿಕೊಂಡಳು. ಶ್ರೀದೇವಿ ಅದೆಂಥಾ ಚೆಲುವೆ ಅಂದರೇ ಅವಳನ್ನು ಆರಾಧಿಸದವರೇ ಇರಲಿಲ್ಲ. ಅವಳನ್ನು ಮದುವೆ ಆಗಬೇಕೆಂದು ಬಯಸಿದವರಲ್ಲಿ ಎಂಬತ್ತರ ದಶಕದ ಸೂಪರ್ಸ್ಟಾರ್ ಮಿಥುನ್ ಚಕ್ರವರ್ತಿ ಕೂಡ ಒಬ್ಬ. ಅವರಿಬ್ಬರು ಆಸೆಪಟ್ಟಂತೆ ಮದ್ವೆಯೂ ಆದರು. ಆದರೆ ಅವರಿಬ್ಬರ ಲವ್ ಮ್ಯಾರೇಜ್ ಬಾಳಿದ್ದು ಕೇವಲ ಮೂರು ವರ್ಷಗಳು ಮಾತ್ರ. ಇಬ್ಬರು ಡಿವೋರ್ಸ್ ಪಡೆದುಕೊಂಡರು. ಆನಂತರ ಶ್ರೀದೇವಿ ಜೊತೆ ನಿರ್ಮಾಪಕ ಬೋನಿ ಕಪೂರ್ ಸಂಬಂಧವಿಟ್ಟುಕೊಂಡರು. ಇಬ್ಬರ ನಡುವೆ ಅದೇನೋ ಇದೆ ಎಂಬೆಲ್ಲಾ ಗಾಸಿಪ್ಪಿಗೆ ಪೂರಕವಾಗಿ ಶ್ರೀದೇವಿ ಗರ್ಭ ಧರಿಸಿದಳು. ಡಿವೋರ್ಸ್ ಆಗಿ ಮೂರ್ನಾಲ್ಕು ವರ್ಷಗಳ ನಂತರ ಗರ್ಭಿಣಿ ಆಗಿದ್ದಾಳೆ ಅಂದರೇ ಅನೈತಿಕ ಸಂಬಂಧವಿಟ್ಟುಕೊಂಡಿದ್ದಾಳೆ. ಅದಕ್ಕೆ ಬೋನಿಕಪೂರ್ ಕಾರಣ ಅಂತ ಜಗತ್ತು ಅಪಹಾಸ್ಯ ಮಾಡಿತ್ತು. ಇವೆಲ್ಲಕ್ಕೂ ಅಂತ್ಯ ಹಾಡಿದ ಬೋನಿಕಪೂರ್ ಶ್ರೀದೇವಿ ಕತ್ತಿಗೆ ತಾಳಿ ಕಟ್ಟಿದ್ದ. ಶ್ರೀದೇವಿಗೆ ಈಗ ಜಾಹ್ನವಿ, ಖುಷಿ ಎಂಬಿಬ್ಬರು ಹೆಣ್ಣುಮಕ್ಕಳಿದ್ದಾರೆ. ಮದುವೆಗೂ ಮುನ್ನ ಶ್ರೀದೇವಿಗೆ ತಾಯ್ತನ ನೀಡಿದ ಹಿರಿಮಗಳು ಜಾಹ್ನವಿ ಚಿತ್ರರಂಗಕ್ಕೆ ಎಂಟ್ರಿ ಕೊಡುವುದು ಖಾತ್ರಿಯಾಗಿದೆ. ಕಿರಿಮಗಳು ಖುಷಿ; ಪೋಲಿಯೋ ಪೀಡಿತೆ.

ಅವಳು ಮಲೈಕಾ ಅರೋರಾ ಖಾನ್. ಇವತ್ತಿಗೆ ಸರಿಯಾಗಿ ಈ ತಾರೆಗೆ ನಲವತ್ತೆರಡು ವರ್ಷ. ಅದೇ ಮಾಸದ ಸೌಂದರ್ಯ. ಮಹಾರಾಷ್ಟ್ರದ ಚೇಂಬೂರ್ನಲ್ಲಿ ಜನಿಸಿದ ಈ ನಟಿ ಪಂಜಾಬಿ-ಮಲಯಾಳಿ ಮನೆತನದಲ್ಲಿ ಬೆಳೆದವಳು. ಮಾಡೆಲ್ ಆಗಿ ಬಣ್ಣದಲೋಕಕ್ಕೆ ಪಾದಾರ್ಪಣೆ ಮಾಡಿದ ಮಲ್ಲೈಕಾ, ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾಳೆ. ಈ ಹಂತದಲ್ಲೇ ಅವಳ ಬದುಕಿನಲ್ಲಿ ಅವನ ಪ್ರವೇಶವಾಗಿತ್ತು. ಅವನ ಹೆಸರು ಅರ್ಬಾಜ್ ಖಾನ್. ಅರ್ಬಾಜ್ ಖಾನ್- ಮಲೈಕಾ ಅರೋರಾ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಅವರಿಬ್ಬರ ಪ್ರೀತಿ ಮದುವೆಯ ಹಂತವನ್ನು ಮುಟ್ಟುವ ಮೊದಲೇ ಮಲೈಕಾ ತಾಯಿಯಾಗಿದ್ದಳು. ದೊಡ್ಡ ಗಾಸಿಪ್ಪಿಗೆ ಆಹಾರವಾಗುವ ಮೊದಲೇ 1997ರಲ್ಲಿ ಮದುವೆಯಾದರು. ಮಲೈಕಾ ಇಸ್ಲಾಂ ಧರ್ಮವನ್ನು ಕಬೂಲ್ ಮಾಡಿದಳು. ಈಗ ಇವರಿಗೆ ಅರ್ಹನ್ ಖಾನ್ ಎಂಬ ಚಂದದ ಸುಪುತ್ರನಿದ್ದಾನೆ.

ಮಹಿಮಾ ಚೌದರಿಯ ಮೂಲ ಹೆಸರು ರಿತು ಚೌದರಿ. ವೆಸ್ಟ್ ಬೆಂಗಾಲ್ ನ ಡಾರ್ಜಿಲಿಂಗ್ ನಲ್ಲಿ ಹುಟ್ಟಿದ ಇವಳಿಗೆ ಈಗ ಬರೋಬ್ಬರಿ ನಲವತ್ತೊಂದು ವರ್ಷ. ಆರಂಭದಲ್ಲಿ ನೇಪಾಳದಲ್ಲಿ ಮಾಡೆಲಿಂಗ್ ಮಾಡುತ್ತಿದ್ದಳು. ಆನಂತರ ಬಾಲಿವುಡ್ ಚಿತ್ರರಂಗದಲ್ಲಿ ಮಿಂಚು ಹರಿಸಿದಳು. ಈ ವೇಳೆಗೆ ಮಹಿಮಾ ಚೌದರಿ ಹಾಗೂ ಬಾಬ್ಬಿ ಮುಖರ್ಜಿ ಮಧ್ಯೆ ಅಫೇರ್ ಶುರುವಾಗಿತ್ತು. ಅದು ಮದುವೆಗೂ ಮುನ್ನವೇ ದೈಹಿಕ ಸಂಪರ್ಕಕ್ಕೆ ಭೂಮಿಕೆಯಾಯಿತು. ಮಹಿಮಾ ಗರ್ಭಧರಿಸಿದಳು. ಆದರೆ ಬಾಬಿ ಕೈ ಬಿಡಲಿಲ್ಲ. 1997ರಲ್ಲಿ ಅವಳನ್ನು ಮದುವೆಯಾದ. ಮೂವತ್ತಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿರುವ ಮಹಿಮಾ ಮುದ್ದಾದ ಎರಡು ಮಕ್ಕಳನ್ನು ಹೆತ್ತು ಸಾರ್ಥಕ ತಾಯಿ ಎನಿಸಿಕೊಂಡಿದ್ದಾಳೆ.

ಸೆಲಿನಾ ಜೈಟ್ಲಿಯ ಕಥೆ ಕೊಂಚ ಭಿನ್ನ. ನಟಿಸಿದ್ದೆಲ್ಲಾ ಆಲ್ಮೋಸ್ಟ್ ಹಾಟ್ ಚಿತ್ರಗಳು. ಮಾಡಿದ್ದೆಲ್ಲಾ ಚಾಲೆಂಜಿಂಗ್ ಪಾತ್ರಗಳು. ನೋಡುವುದಕ್ಕೆ ಸೇಬಿನಂತಿರುವ ಇವಳು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಹುಟ್ಟಿ ಬೆಳೆದ ಕೂಸು. ಚಿತ್ರರಂಗದ ಮಟ್ಟಿಗೆ ಇವಳನ್ನು ಆಲ್ರೌಂಡರ್ ಎಂದೇ ಕರೆಯಲಾಗುತ್ತದೆ. ಏಕೆಂದರೆ ಮಾಡೆಲಿಂಗ್, ನಟನೆಯಲ್ಲಿ ಮಾತ್ರ ಇವಳು ಪಳಗಿರಲಿಲ್ಲ. ಒಳ್ಳೆ ಬರಹ ಅವಳಿಗೆ ಕರಗತವಾಗಿತ್ತು. ಮಾದಕ ಕಣ್ಣುಗಳಲ್ಲೇ ಕೊಲ್ಲುತ್ತಿದ್ದ ಪ್ರತಿಭೆ ಇವಳು. ಸೆಲೀನಾ ಒಂದು ಹಂತಕ್ಕೆ ಬೆಳೆದ ನಂತರ ಆಸ್ಟ್ರಿಯಾದ ಬಿಸಿನೆಸ್ಮೆನ್ ಪೀಟರ್ ಹಾಗ್ ಜೊತೆ ಸಂಬಂಧವಿಟ್ಟುಕೊಂಡಳು. ಇಬ್ಬರ ನಡುವೆ ಗಾಸಿಪ್ಪುಗಳು ಹರಡುತ್ತಿದ್ದಾಗಲೇ ಸಲೀನಾ ಗರ್ಭಿಣಿಯಾಗಿದ್ದಳು. ಅದೊಂದು ದಿನ ಅವಳಿ ಮಕ್ಕಳನ್ನು ಹೆತ್ತಳು. ಆಂಗ್ಲೋ ಇಂಡಿಯನ್ ಕೂಸುಗಳನ್ನು ತೆಕ್ಕೆಯಲ್ಲಿ ಎತ್ತಿಕೊಂಡ ನಂತರವೇ ಪೀಟರ್ ಹಾಗ್ ಅವಳನ್ನು ವರಿಸಿದ್ದ. ದಂಪತಿಗಳು ಅನ್ಯೋನ್ಯವಾಗಿದ್ದಾರೆ.

ಇನ್ನು ಕೊಂಕಣಾ ಸೇನ್ ಅದ್ಭುತ ಪ್ರತಿಭೆ. ನವದೆಹಲಿಯ ಈ ಬೆಡಗಿಯ ಅಭಿನಯಕ್ಕೆ ಅವಳೇ ಸಾಟಿ. ಬಾಲಿವುಡ್ ಚಿತ್ರರಂಗದ ಅತ್ಯುತ್ತಮ ಅಭಿನೇತ್ರಿ ಎಂದೇ ಖ್ಯಾತಳಾಗಿರುವ ಕೊಂಕಣ ಸೇನ್ ಬದುಕಿನಲ್ಲೂ ಪಲ್ಲವಿ ಇತ್ತು. ಚರಣಕ್ಕೂ ಮೊದಲೇ ಗೆಳೆಯನ ಜೊತೆ ಮಿತಿಮೀರಿ ಸರಸವಾಡಿದಳು. ಗೆಳೆಯ ರಣ್ವೀರ್ ಶೆರಾಯ್ ಅವಳ ಮಡಿಲಿಗೆ ಮಗುವೊಂದನ್ನು ಕರುಣಿಸಿದ್ದ. ಮದುವೆಗೂ ಮುನ್ನ ಮಡಿಲಿನಲ್ಲಿ ಕಂದನನ್ನು ತುಂಬಿಕೊಂಡ ಕೊಂಕಣ ಸೇನ್ 2010ರಲ್ಲಿ ರಣ್ವೀರ್ ಶೇರಾಯ್ನನ್ನು ಮದುವೆಯಾದಳು. ತನ್ನದೇ ಪುಟ್ಟ ಸಂಸಾರದಲ್ಲಿ ವಿಹರಿಸುತ್ತಿರುವ ಈ ನಟಿ ಸಿನಿಮಾರಂಗದಲ್ಲೂ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾಳೆ.

ಕಮಲ್ ಹಾಸನ್, ಭಾರತ ಚಿತ್ರರಂಗದ ಅದ್ವಿತೀಯ ಅಭಿನಯ ಬ್ರಹ್ಮ. ಕಮಲ್ ಅದೆಂಥಾ ಅದ್ಭುತ ನಟನೋ, ವೈಯುಕ್ತಿಕ ಜೀವನದಲ್ಲಿ ಅಷ್ಟೇ ರಸಿಕನೂ ಹೌದು. ಒಂದಲ್ಲ, ಎರಡಲ್ಲ ಮೂರು ಮೂರು ಮದ್ವೆಯಾಗಿರುವ ಕಮಲ್ ಹಾಸನ್ ಹಲವು ಮಕ್ಕಳಿಗೆ ತಂದೆಯಾಗಿದ್ದಾರೆ. ಮೊದಲ ಪತ್ನಿ ವಾಣಿ ಗಣಪತಿಗೆ ಡಿವೋರ್ಸ್ ಕೊಟ್ಟ ನಂತರ ನವದೆಹಲಿ ಮೂಲದ ಕಾಸ್ಟ್ಯೂಮ್ ಡಿಸೈನರ್ ಸಾರಿಕಾ ಠಾಕೂರ್ ಜೊತೆ ಲವ್ವಡವ್ವಿ ಶುರುವಿಟ್ಟುಕೊಂಡರು. ಸಾರಿಕಾ ಗರ್ಭಿಣಿಯಾಗಿದ್ದೇ ಅವರ ಕತ್ತಿಗೆ ತಾಳಿ ಬಿಗಿದು ಎರಡನೇ ಪತ್ನಿಯಾಗಿ ವರಿಸಿದರು. ಆಗ ಹುಟ್ಟಿದ ಮಗುವೇ ಇವತ್ತಿನ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಶೃತಿ ಹಾಸನ್.

ಕಮಲ್- ಸಾರಿಕಾ ದಂಪತಿಗಳಿಗೆ ಶೃತಿ ಹಾಸನ್ ಮಾತ್ರವಲ್ಲ, ಅಕ್ಷರ ಹಾಸನ್ ಎಂಬ ಮಗಳಿದ್ದಾಳೆ. ಅಲ್ಲಿಗೂ ನಿಲ್ಲದ ಕಮಲ್ ಹಾಸನ್ ಒಂದು ಕಾಲದ ಖ್ಯಾತ ಬಹುಭಾಷಾ ತಾರೆ ಗೌತಮಿಯನ್ನೂ ಮದುವೆಯಾಗಿದ್ದಾರೆ. ಅವರಿಗೂ ಮಕ್ಕಳನ್ನು ಕರುಣಿಸಿದ್ದಾರೆ. ಈಗ ಶೃತಿ ಹಾಸನ್ ತನ್ನ ತಾಯಿಯಂತೆ ಮದುವೆಗೂ ಮುನ್ನ ತಾಯಿಯಾಗುವ ಆಸೆಯನ್ನು ಹೊರಗೆಡವಿದ್ದಾಳೆ. ಶೃತಿ ಹಾಸನ್ ಇಲ್ಲಿಯವರೆಗೆ ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾಳೆ. ಐವತ್ತಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾಳೆ. ಹತ್ತಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ್ದಾಳೆ. ಹನ್ನೆರಡಕ್ಕೂ ಹೆಚ್ಚು ಅವಾರ್ಡ್ ಗಳನ್ನು ಪಡೆದಿದ್ದಾಳೆ. ಒಂದರ್ಥದಲ್ಲಿ ಅಪ್ಪನನ್ನೇ ಮೀರಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದ್ದಾಳೆ. ನಟನೆಯಲ್ಲಿ ಕಮಲ್ ಹಾಸನ್ ಅವರನ್ನ ಮೀರಿಸುವವರಿಲ್ಲ ನಿಜ, ಆದ್ರೆ ಶೃತಿ ಹಾಸನ್ ಚಿತ್ರರಂಗದ ಅಷ್ಟೂ ಮಗ್ಗಲುಗಳನ್ನು ಬದಲಾಯಿಸಿದ್ದಾಳೆ. ಒಂದರ್ಥದಲ್ಲಿ ಅವಳು ಆಲ್ರೌಂಡರ್.

ಮದುವೆಗೂ ಮುನ್ನವೇ ತಾಯ್ತನ ಅನುಭವಿಸಿರುವ ಈ ಸೆಲೆಬ್ರಿಟಿಗಳು ನಮ್ಮ ದೇಶದ ಸಂಪ್ರದಾಯವನ್ನು ಮೀರಿ ನಿಂತಿದ್ದಾರೆ ಎನ್ನಬಹುದಾದರೂ ಸೊಗಸಾಗಿ ಜೀವನ ನಡೆಸುತ್ತಿದ್ದಾರೆ ಎಂಬುದೇ ವಾಸ್ತವ. ಆ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿರುವ ಶೃತಿ ಹಾಸನ್ ಬದುಕು ಮೂರಾಬಟ್ಟೆಯಾಗದೇ ಹಸನಾಗಲಿ. ಎಷ್ಟಾದರೂ ನಮ್ಮ ಮನೆ ಹೆಣ್ಣುಮಗಳು.

POPULAR  STORIES :

ಯುವರಾಜ್ ಸಿಂಗ್ ನಿಂದ 9 ವರ್ಷಗಳ ಹಿಂದಿನ ರಹಸ್ಯ ಬಯಲು..!

ಕಾಲ್ ಗರ್ಲ್ ಚಮಕ್ ಕೊಟ್ಟಿದ್ದು ಮಾಜಿ “ಮಿನಿಸ್ಟರ್”ಗಲ್ಲ ಶಾಸಕನಿಗೆ

ಯೂಟ್ಯೂಬ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಿಂಹದ ರಿಯಲ್ ಸ್ಟೋರಿ..!

ಒಸಾಮಾ ಬಿನ್ ಲಾಡೆನ್ ಸತ್ತಿಲ್ಲ..!? ಅಮೆರಿಕಾ ಮುಚ್ಚಿಟ್ಟ ಘೋರ ಸತ್ಯವೇನು..?

ಲವ್ ಇನ್ ಫೇಸ್ ಬುಕ್.. ಫ್ರಾನ್ಸ್ ಹುಡುಗಿ ಪುಣೆಯ ಹುಡುಗನ ರೋಮಾಂಚಕ ಸ್ಟೋರಿ

ಬೇಸಿಗೆ ರ(ಸ) ಜೆ – ಮಕ್ಕಳಿಗೊ? ಪೋಷಕರಿಗೋ ?

ನಾಗರಹಾವಿಗೆ ಎರಡು ಕಾಲು..! ಜನರು ದಂಗುಬಡಿದು ಹೋದರು..!

ನಿಮ್ಮ ಮಗು ಬಳಿ ಸ್ಮಾರ್ಟ್ ಫೋನ್ ಇದೆಯಾ ಹುಷಾರ್..!!

LEAVE A REPLY

Please enter your comment!
Please enter your name here