ಹದಿಹರೆಯದ ವಯಸ್ಸಿನ ಯೋಚನೆ ಮಂಗಗಳಿಗಿಂತ ಕಡೆ ಅನ್ನೋದಕ್ಕೆ ಈ ಘಟನಯೇ ಸಾಕ್ಷಿ. ಟೀನೇಜ್ ಬಂದರೆ ಸಾಕು ಈ ಹುಡುಗರಿಗೆ ಏನೋ ಸಾಧಿಸಬೇಕು ಎಂಬ ಹಂಬಲ. ಸಾಧಿಸುವ ಛಲ ಒಳ್ಳೆಯದ್ದೇ ಬಿಡಿ ಆದರೆ ತರಬೇತಿ ಬೇಕಲ್ಲವೇ..? ತರಬೇತಿ ಇಲ್ಲದಿದ್ರೆ ಎಂತಹ ಅಪಾಯ ತಂದೊಡ್ಡುತ್ತದೆ ಎಂಬುದಕ್ಕೆ ಈ ಬಾಲಕನ ತುಂಟು ಬುದ್ದಿಯೇ ಸಾಕ್ಷಿ.
ಅಷ್ಟಕ್ಕೂ ಈ 17ರ ಹರೆಯದ ಯುವಕ ಏನಂತಾ ಘನಂಧಾರಿ ಕಾರ್ಯ ಮಾಡಿದ್ದಾನೆ ಅಂತೀರಾ..? ಒಲಂಪಿಕ್ ಕ್ರೀಡಾಕೂಟದ ಸ್ವಿಮ್ಮಿಂಗ್ ಪೂಲ್ ನಲ್ಲಿ ಡೈವ್ ಮಾಡುವ ಚಮತ್ಕಾತರಗಳನ್ನು ಟಿವಿಲಿ ನೋಡಿದ್ದಾನೆ. ನಾವೇನಾದ್ರೂ ಆಗಿದ್ದರೆ ಆತನ ಸಾಹಸಕ್ಕೆ ವಾಹ್… ಎಂದು ಉದ್ಘರಿಸಿ ಆನಂದಿಸುತ್ತಿದ್ವಿ.. ಆದ್ರೆ ಈ ಪುಣ್ಯಾತ್ಮ ಏನ್ ಮಾಡಿದ್ದಾನೆ ಗೊತ್ತಾ ರೀ ಕ್ರೀಡಾಪಡುಗಳ ಸಾಹಸದಿಂದ ಪ್ರಭಾವಿತನಾದ ಈತ ಸೀದಾ 25 ಅಡಿ ಎತ್ತರದ ರೈಲ್ವೇ ಬ್ರಿಡ್ಜ್ ನ ಮೇಲಿಂದ ನೀರಿಗೆ ಧುಮುಕಿ ಇದೀಗ ಆಸ್ಪತ್ರೆ ಪಾಲಾಗಿದ್ದಾನೆ.
ಮಧ್ಯ ಚೀನಾದ ಯಿಂಗ್‍ಟನ್ ನಗರದ ಜಿಯಾಂಕ್ಸಿ ಎಂಬ 17ರ ಯುವಕ ಈ ಸಾಹಸಕ್ಕೆ ಕೈಹಾಕಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಅಬ್ಬಾ… ಆ ಎತ್ತರದ ಬ್ರಿಡ್ಜ್ ನ್ನು ಕಣ್ಣಿಂದ ನೋಡಿಯೇ ತಲೆ ತಿರುಗುವಂತಿದ್ದರೆ ಈ ಯುವಕ ಏನೋ ಮಾಡಲು ಹೋಗಿ ಮತ್ತೇನೋ ಮಾಡಿಕೊಂಡು ಬೆಡ್ ರೆಸ್ಟ್ ನಲ್ಲಿದ್ದಾನೆ ನೋಡಿ.. ಈತನ ಸಾಹಸಮಯ ಫೋಟೊಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಬಾಲಕನಿಗೆ ಗಂಟಲು ಸೇರಿದಂತೆ ಹಲವಾರು ಭಾಗಗಳಲ್ಲಿ ಗಂಭೀರ ಗಾಯಗಳಾಗಿವೆ. ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಅಥ್ಲೀಟ್‍ಗಳಿಗೆ ಹಲವಾರು ವರ್ಷಗಳಿಂದ ಅದರ ತರಬೇತಿ ಇದೆ. ಆದ್ದರಿಂದಲೇ ಅಥ್ಲೀಟ್‍ಗಳಿಗೆ ಈ ಸಾಧನೆ ಒಂದು ಸಣ್ಣ ಹನಿಕೇಕ್ ತಿನ್ನೋ ಹಾಗೆ ಬಿಡಿ. ಆದರೆ ಈ ಹುಡುಗನ ಹುಚ್ಚಾಟಕ್ಕೆ ಏನನ್ನಬೇಕೋ ಗೊತ್ತಿಲ್ಲ. ಅದೂ ಬಿಡಿ ಅಥ್ಲೀಟ್‍ಗಳು ಅಬ್ಬಬ್ಬಾ.. ಅಂದ್ರೂ 8 ರಿಂದ ಹತ್ತು ಮೀಟರ್ ಎತ್ತರದಿಂದ ಧುಮುಕುತ್ತಾರೆ. ಈ ಮಹಾನುಭಾವ 25 ಅಡಿ ಎತ್ತರದಿಂದ ಜಿಗಿದರೆ ಮತ್ತೇನಾಗುತ್ತೇ ಸ್ವಾಮಿ… ಈ ರೀತಿಯ ಪ್ರಭಾವಕ್ಕೆ ಒಳಗಾಗಿ ಸಾಧನೆ ಮಾಡುವ ಎಲ್ಲಾ ಯುವಕರಿಗೂ ಒಂದು ಕಿವಿ ಮಾತು. ಸಾಧಿಸುವ ಛಲ ಇದ್ದಲ್ಲಿ ಒಬ್ಬ ಪ್ರತಿಭಾವಂತ ಟ್ರೈನಿಗಳನ್ನು ಇಟ್ಟುಕೊಳ್ಳಿ. ಅದು ಬಿಟ್ಟು ಈ ರೀತಿಯ ಹುಚ್ಚಾಟಕ್ಕೇ ಕೈಹಾಕ ಬೇಡಿ ಎಂಬುದೇ ನಮ್ಮ ಅಭಿಪ್ರಾಯ.
Video:
POPULAR STORIES :
ಸೆಕ್ಸ್ ಉದ್ಯಮದಲ್ಲಿ ಚೀನಾ ನಂ.1 ಭಾರತ ನಂ.7..!
ಮುಂದಿನ ದಿನಗಳಲ್ಲಿ ಮೂತ್ರಕ್ಕೂ ಬರ್ಬೋದು ಭಾರೀ ಬೇಡಿಕೆ..!
ಗಾಳಿಯಲ್ಲಿ ಕುಡಿಯುವ ನೀರು ಕಂಡು ಹಿಡಿದ ಮೊದಲ ಭಾರತೀಯ ಯುವಕ…!
ಪ್ರಾಣದ ಹಂಗು ತೊರೆದು ಪಾಕ್ ಧ್ವಜ ಕಿತ್ತೆಸೆದು ತ್ರಿವರ್ಣ ಧ್ವಜ ಹಾರಿಸಿದ ಧೀರ ಯೋಧ.
ಆಸ್ತಿಗಾಗಿ ಐಸಿಯುನಲ್ಲಿದ್ದ ತಂದೆಯ ಆಕ್ಸಿಜನ್ ಪೈಪ್ ಕಿತ್ತು ಹಾಕಿದ ಪುತ್ರಿ..!
ರೈಲು ನಿಲ್ದಾಣದಲ್ಲಿ ಸೆಲ್ಫಿ ತೆಗೆದರೆ ಐದು ವರ್ಷ ಜೈಲು..!
ಕಿಂಗ್ ಖಾನ್‍ಗೆ ಅಮೇರಿಕಾ ವಿಮಾನ ನಿಲ್ದಾಣದಲ್ಲಿ ಮತ್ತೊಮ್ಮೆ ಪಪ್ಪಿ ಶೇಮ್…!