ಅಬ್ಬಾ..! ಈತನ ಸಾಧನೆ ಮೆಚ್ಚಲೇ ಬೇಕು ಬಿಡಿ.. ಸಾವಿರಾರು ಅಡಿ ಎತ್ತರದಲ್ಲಿರುವ ವಿಮಾನದ ಮೂಲಕ ಅದು ಪ್ಯಾರಾಚೂಟ್ ಬಳಸಿ ನೆಗೆಯುವವರನ್ನು ಕಂಡರೇ ಮೈ ಜುಮ್ಮ್.. ಅನ್ನತ್ತೆ, ಅದರಲ್ಲಿ ಈ ಮಹಾನುಭಾವ ಪ್ಯಾರಾಚೂಟ್ ಬಳದೇ 25 ಸಾವಿರ ಅಡಿ ಮೇಲಿಂದ ನೆಗೆದಿದ್ದಾನೆ ಎಂದರೆ ಊಹಿಸಲೂ ಸಾಧ್ಯವಾಗ್ತಾ ಇಲ್ಲ. ಆದರೆ ಅಂತಹ ಐತಿಹಾಸಿಕ ಸಾಧನೆಗೆ ಸಾಕ್ಷಿಯಾದದ್ದು ಅಮೇರಿಕಾದ ಫಾಕ್ಸ್ ಟಿವಿಯ ನೇರ ಪ್ರಸಾರ ಕಾರ್ಯಕ್ರಮ.
ಈ ಸಾಧನೆ ಮಾಡಿದ ಆಸಾಮಿ ಯಾರು ಅಂತೀರಾ..? ಬೇರ್ಯಾರೂ ಅಲ್ಲ, ಈ ಹಿಂದೆ 18 ಸಾವಿರಕ್ಕೂ ಅಧಿಕ ಬಾರಿ ಆಕಾಶದಿಂದ ಪ್ಯರಾಚೂಟ್ ಬಳಸಿ ಬಹಳಷ್ಟು ಸಾಧನೆ ಮಾಡಿರುವ ಸ್ಕೈ ಡೈವರ್ ಎಂದೇ ಪ್ರಖ್ಯಾತರಾಗಿರುವ ಲ್ಯೂಕ್ ಐಕಿನ್ಸ್. ಇದೀಗ ಅವರು 25 ಸಾವಿರ ಅಡಿ (7.62ಕಿಮಿ) ಎತ್ತರದಿಂದ ಯಾವುದೇ ಪ್ಯರಾಚೂಟ್ ಬಳಸದೇ ಧರೆಗೆ ದುಮುಕಿ ಹೊಸ ವಿಶ್ವ ದಾಖಲೆ ನಿರ್ಮಿಸಿದ ಭೂಪ..
ಕ್ಯಾಲಿಫೊರ್ನಿಯಾ ಬಳಿಯ ವಿಮಾನದಿಂದ ಜಿಗಿದು ಪ್ಯಾರಾಚೂಟ್ ಬಳಸದೇ 2 ನಿಮಿಷಗಳ ಕಾಲ ಹಾರಾಟ ನಡೆಸಿ ಬಳಿಕ 100 ಅಡಿ ಅಗಲ 100 ಅಡಿ ಉದ್ದದಷ್ಟು ಪ್ರದೇಶದಲ್ಲಿ ಅಳವಡಿಸಲಾಗಿದ್ದ ಬಲೆಗೆ ಬಂದು ಬಿದ್ದಿದ್ದಾನೆ.
ಫಾಕ್ಸ್ ನೆಟ್‍ವರ್ಕ್‍ನ ಸ್ಟ್ರೈಡ್ ಗಮ್ ಪ್ರಸೆಂಟ್ಸ್ ಹೆವೆನ್ ಸೆಂಟ್ ಎಂಬ ವಿಶೇಷ ನೇರ ಪ್ರಸಾರದಲ್ಲಿ ಭಾಗವಹಿಸಿ ಲ್ಯೂಕ್ ಈ ಸಾಹಸ ಪ್ರದರ್ಶಿಸಿದ್ದಾನೆ. ಪ್ಯಾರಾಚೂಟ್‍ನ್ನು ಬೆನ್ನಿಗೆ ಕಟ್ಟಿಕೊಂಡಿರಬೇಕೆಂದು ಆಯೋಜಕರು ಸೂಚಿಸಿದ್ದರೂ, ಅದನ್ನು ನಿರಾಕರಿಸಿದ ಲ್ಯೂಕ್, ಬಲೆಯ ಮೇಲೆ ಬಿದ್ದಾಗ ಪ್ಯಾರಾಚೂಟ್ ಡಬ್ಬಿ ಬೆನ್ನಿಗೆ ಬಡಿದರೆ ಅಪಾಯ ಸಂಭವಿಸಬಹುದು ಎಂದು ವಾದಿಸಿದ್ದ. ನಂತರ ಲ್ಯೂಕ್ ಮತ್ತು ಇತರೆ ಸ್ಕೈ ಡ್ರೆ
ಡೈವರ್‍ಗಳು 25 ಸಾವಿರ ಎತ್ತರ ಅಡಿ ಇರುವ ವಿಮಾನದಿಂದ ಹಾರಿದ್ದಾರೆ ಒಬ್ಬಾತ ಅದನ್ನು ವಿಡಿಯೋ ಮಾಡುತ್ತಿದ್ದರೆ ಮತ್ತೊಬ್ಬ ಹೊಗೆ ಬಿಡುತ್ತಾ ಸ್ಕೈಡ್ರೈವರ್ ಇಳಿಯವುದನ್ನು ಮೇಲಿದ್ದವರಿಗೆ ತೋರ್ಪಡಿಸಲು ಸಹಕಾರಿ ಯಾಗುತ್ತಿದ್ದ. ಇನ್ನೋರ್ವ ಆಮ್ಲ ಜನಕದ ಸಿಲಿಂಡರ್‍ಗಳನ್ನು ಹೊಂದಿದ್ದ. ಆ ಮೂವರೂ ಪ್ಯಾರಾಚೂಟ್ ಸಹಾಯದಿಂದ ಬೇರೆಡೆ ಇಳಿದರೆ ಲ್ಯೂಕ್ ಮಾತ್ರ ಬಲೆಯ ಮೇಲೆ ಬಿದ್ದ.
ಒಳಕ್ಕೆ ಸೆಳೆದುಕೊಳ್ಳುವ ಬಲೆ.
ಲ್ಯೂಕ್ ಮೇಲಿಂದ ಜಿಗಿದ ಬಳಿಕ ಮತ್ತೆ ಪುಟಿದೇಳಬಾರದು ಎಂಬ ಕಾರಣಕ್ಕಾಗಿ ವಿಶಿಷ್ಟ ಬಲೆಯನ್ನು ನಿರ್ಮಿಸಲಾಗಿತ್ತು. ನೆಲಕ್ಕೆ ಕಟ್ಟಲಾದ ಬಲೆಯು ಸುಮಾರು 20 ಅಂತಸ್ಥಿನ ಕಟ್ಟಡದಷ್ಟು ಎತ್ತರವಿತ್ತು. ನಾಲ್ಕೂ ಮೂಲೆಗಳಲ್ಲಿ ಸುಮಾರು 20 ಅಡಿ ಎತ್ತರದ ನಾಲ್ಕು ಕ್ರೇನ್ ಗಳಿಗೆ ಬಲೆಯ ಅಂಚನ್ನು ಕಟ್ಟಲಾಗಿತ್ತು.
Video :
POPULAR STORIES :
ಅಬ್ಬಾ.. ಈ ವಿಡಿಯೋ ನೋಡಿದ್ರೆ ಕರಳು ಚುರುಕ್ ಅನ್ನತ್ತೆ..!
ಅರ್ನಬ್ ಗೋಸ್ವಾಮಿ ವಿರುದ್ದ 500 ಕೋಟಿ ರೂ ದಾವೆ ಹೂಡಿದ ಝಾಕೀರ್…!
ಮೊಬೈಲ್ ಫೋನ್ ಚಾರ್ಜ್ ಗೆ ಇಟ್ಟಿರುವಾಗ ಬ್ಲಾಸ್ಟ್ ಆಗಬಹುದು ಹುಷಾರ್…!
ಯಾಹೂ ಸಿಬ್ಬಂದಿಗಳಿಗೆ ಸಿ.ಇ.ಓ.ನ ಕೊನೆಯ ಪತ್ರ
ಸಲ್ಮಾನ್ ಗುಂಡು ಹಾರಿಸಿದ್ದು ನನ್ನ ಕಣ್ಣಾರೆ ನೋಡಿದ್ದೇನೆ: ಕೃಷ್ಣ ಮೃಗ ಬೇಟೆಯಲ್ಲಿ ಹೊಸ ಟ್ವಿಸ್ಟ್.
ಲೈಂಗಿಕ ಸಮಸ್ಯೆಗೆ ರಾಮಬಾಣ ದಾಳಿಂಬೆ ಹಣ್ಣಿನ ಜ್ಯೂಸ್….. !
ಇದ್ದಕ್ಕಿದ್ದ ಹಾಗೆ ಒಂದು ಹುಡುಗಿ ನಿಮ್ಮನ್ನು ತಬ್ಬಿಕೊಳ್ಳಲು ಬಂದಾಗ ನಿಮಗೆ ಏನ್ ಅನ್ಸಲ್ಲಾ ಹೇಳಿ..!
ಧೋನಿಯನ್ನು ಮಾಹೀ ಎಂದು ಕರೆದ ಮಗಳು ಜಿವಾ..! ಅಪ್ಪ ಮಗಳ ಕ್ಯೂಟ್ ವಿಡಿಯೋ..!