ಓಣಂ ಹಬ್ಬ ಅಂದ್ರೆನೆ ನಮಗೆಲ್ಲ ಬೇಗ ನೆನಪಾಗೋದು ಕೇರಳಿಗರು. ಬಿಳಿ ಶರ್ಟು, ಬಿಳಿ ಪಂಚೆ ಹುಟ್ಟುಕೊಂಡು ವಿಧ ವಿಧದ ಬಂಗಿಯಲ್ಲಿ ಫೋಸ್ ಕೊಡ್ತಾ ಫೇಸ್‍ಬುಕ್ಕು, ವಾಟ್ಸಾಪ್‍ಗಳಲ್ಲಿ ತಮ್ಮ ಮನೆಯಂಗಳದಲ್ಲಿ ಹಾಕಿರುವ ವಿಭಿನ್ನ ಹಾಗೂ ಆಕರ್ಷಕ ರಂಗೋಲಿ(ಪೂಕಳಂ) ಬಳಿ ನಿಂತಿರುವ ಫೋಟೋಗಳನ್ನು ಅಪ್‍ಲೋಡ್ ಮಾಡೋದ್ರಲ್ಲೇ ಸದಾ ಬ್ಯುಸಿಯಾಗಿರ್ತಾರೆ.. ಇನ್ನು ಹೆಣ್ಮಕ್ಳ ಕಡೆ ಬಂದ್ರೆ.. ನಮ್ ಮನೆ ಮುಂದೆ ಓಣಂ ದಿನ ಯಾವ ರೀತಿಯ ರಂಗೋಲಿಯನ್ನ ಹಾಕ್ಬೇಕು ಅಂತ ಒಂದು ವಾರಗಳ ಮುಂಚಿತವಾಗಿಯೇ ಇಂಟರ್‍ನೆಟ್‍ಗಳಲ್ಲಿ ರಂಗೋಲಿ ಚಿತ್ರ ಹುಡುಕುವಲ್ಲಿ ತಲ್ಲೀನರಾಗಿರ್ತಾರೆ. ಹಬ್ಬದ ದಿನದಂದಂತೂ ಹುಡ್ಗೀರನ್ನ ನೋಡೋಕೆ ಎರಡು ಕಣ್ಣೇ ಸಾಲದೇನೋ ಅನ್ನೋ ಹಾಗೆ ನಮ್ಮಂತ ಪೆಡ್ಡೆ ಹುಡ್ಗರ ತಲೆ ಕೆಡ್ಸೋಕಂತಲೇ ಕಾಯ್ತಾ ಇರ್ತಾರೆ.. ಬಿಳೀಯ ಬಣ್ಣದ ಗೋಲ್ಡನ್ ಬಾರ್ಡರ್ ಸೀರೆಯುಟ್ಟು ಮನೆ ಮುಂದೆ ರಂಗೋಲಿ ಬಳಿ ಫೋಸ್ ಕೊಡೋದೇನಂತಿರಾ..? ಅಲ್ಲಿಂದಲ್ಲಿಗೆ ಓಡಾಡುತ್ತ ಕಿಸಿ ಕಿಸಿ ಹಲ್ಲು ಕಿರಿಯೋದೇನಂತಿರಾ..? ಅಬ್ಬಬ್ಬಾ.. ಒಟ್ನಲ್ಲಿ ಮಳಿಯಾಳಿ ಜನರಿಗೆ ಈ ಓಣಂ ಹಬ್ಬದ ಮಜಾ ಇನ್ಯಾವ ಹಬ್ಬದಲ್ಲೂ ಸಿಗೋಲ್ಲ ಅನ್ಕೊಳ್ತೆನೆ..
ಓಣಂ ಹಬ್ಬ ಎಂದ ಕೂಡಲೇ ಅದು ಕೇರಳ ಜನರಿಗೆ ಹಾಗೂ ನಮ್ಮ ನಾಡಿನ ಕೇರಳಿಗರಿಗೆ ಸಂಭ್ರಮದ ಹಬ್ಬ. ಹೊಸ ಹುಟ್ಟು ಪಡೆದ ಸಂಭ್ರಮ. ಮನೆ ಮಂದಿಗೆಲ್ಲಾ ಈ ಓಣಂ ಬಹಳ ಸಂಭ್ರಮದ ಹಬ್ಬ ಎಂದರೆ ತಪ್ಪಾಗೊಲ್ಲ. ಕೇರಳದ ಕೃಷಿಕರಿಗಂತೂ ಈ ದಿನ ಹೊಸ ಭರವಸೆಯ ದಿನ. ಇದೇ ಕಾರಣಕ್ಕಾಗಿ ಕೇರಳದಲ್ಲಿ ಈ ಓಣಂ ತುಂಬಾ ವಿಶೇಷತೆ ಪಡೆದುಕೊಂಡಿದೆ.
ಶಾಂತಿ ಮತ್ತು ಸಾಮರಸ್ಯದ ಪ್ರತೀಕವಾಗಿರುವ ಈ ಓಣಂ ಹಬ್ಬದಲ್ಲಿ ಪ್ರಮುಖ ದಿನವೇ ಈ ‘ತಿರು ಓಣಂ’. ಕೇರಳದಲ್ಲಿ ಸುಮಾರು 10 ದಿನಗಳ ಕಾಲ ಭಾರಿ ವಿಜೃಂಭಣೆಯಿಂದ ನಡೆಸೋ ಪ್ರಮುಖ ಹಬ್ಬವಿದು. ಒಂಭತ್ತು ದಿನಗಳ ಕಾಲ ಮನೆಯ ಮುಂದೆ ಹೂವಿನ ರಂಗೋಲಿ ಬಿಟ್ಟು ಅದಕ್ಕೆ ಪೂಜೆ ಸಲ್ಲಿಸಿ ಆ ಹೂವಿನ ರಂಗೋಲಿ ಮಧ್ಯ ಭಾದಲ್ಲಿ ದೀಪವನ್ನಿಟ್ಟು ಆರಾಧಿಸುತ್ತಾರೆ. 10ನೇ ದಿನ ಇಡೀ ಕುಟುಂಬ ವರ್ಗದವರು ಬಹಳ ಸಂಭ್ರಮದಿಂದ ತಿರು ಓಣಂ ಆಚರಿಸಲಾಗುತ್ತೆ. ಈ ಹಬ್ಬದಲ್ಲಿ ಕುಟುಂಬದವರೊಂದಿಗೆ ಸೇರಿಕೊಳ್ಳಲು ದೂರದ ಸದಸ್ಯರುಗಳೆಲ್ಲರೂ ತಮ್ಮ ತಮ್ಮ ಊರಿಗೆ ಪ್ರಯಾಣ ಬೆಳೆಸಿರುತ್ತಾರೆ. ಅಂತೆಯೇ ಇಂದು ಸೆ. 14 ರಂದು ಸಂಭ್ರಮದ ಓಣಂ ಆಚರಣೆ ರಾಜ್ಯದಾದ್ಯಂತ ಅನಿವಾಸಿ ಕೇರಳಿಗರು ಆಚರಿಸುತ್ತಿದ್ದಾರೆ. ಈ ದಿನದ ಬಹಳ ವಿಷೇಶತೆ ಏನಪ್ಪಾ ಅಂದ್ರೆ ಪೂಕಳಂ. ಪೂಕಳಂ ಅಂದ್ರೆ ಕೇವಲ ಹೂವಿನಿಂದ ನಿರ್ಮಿಸಲಾದ ಆಕರ್ಷಕ ರಂಗೋಲಿ. ಅಷೇ ಅಲ್ಲ ಹತ್ತಕ್ಕೂ ಹೆಚ್ಚು ಸಹಿ ತಿನಿಸುಗಳು ಬಾಯಲ್ಲಿ ನೀರೊರೆಸುತ್ತದೆ.
ಮಾವೇಲಿ(ಮಹಾಬಲಿ) ರಾಜನು ವರ್ಷಕ್ಕೊಮ್ಮೆ ಭೂಮಿಗೆ ಬಂದು ತನ್ನ ಪ್ರಜೆಗಳ ಸಂಕಷ್ಟವನ್ನು ಪರಿಹರಿಸುತ್ತಾನೆ ಎಂಬ ಧೃಡವಾದ ನಂಬಿಕೆಯನ್ನು ಇಂದಿಗೂ ಇಟ್ಟುಕೊಂಡಿರುವ ಕೇರಳಿಗರು ಈ ವಿಷೇಶವಾದ ಓಣಂ ಹಬ್ಬವನ್ನು ಆಚರಿಸುತ್ತಾರೆ. ‘ಹಸ್ತ ನಕ್ಷತ್ರ’ದಿಂದ ‘ತಿರು ಓಣಂ’ ವರೆಗಿನ 10 ದಿನಗಳ ಕಾಲ ಬರೋ ಈ ಮಾವೇಲಿ ರಾಜನನ್ನ ಸ್ವಾಗತಿಸಲು ಮಲಯಾಳಿಗರು ಓಣಂ ಹಬ್ಬವನ್ನು ಆಚರಿಸುವುದು ಪ್ರತೀಕ..
ಓಣಂ ಹಬ್ಬದ ಇತಿಹಾಸÀ
ಕಾರ್ಲ್ ಮಾರ್ಕ್ಸ್ ನ ಸಮತಾವಾದ , ಗಾಂಧೀಜಿ ಅವರ ರಾಮರಾಜ್ಯ, ಕ್ರಿಸ್ತನ ಧರ್ಮರಾಜ್ಯ, ನಾರಾಯಣ ಗುರು ಹಾಗೂ ಬಸವಣ್ಣನವರ ಜಾತಿ ರಹಿತ ಸಮಾಜದ ಪರಿಕಲ್ಪನೆಯ ಒಟ್ಟು ಮೊತ್ತವೇ ಹಿಂದಿನ ಚಕ್ರವರ್ತಿ ಆಳ್ವಿಕೆ ಕಾಲ. ಅದೇ ರೀತಿ ಕೇರಳದಲ್ಲಿ ಮಹಾಬಲಿ ರಾಜ ಪ್ರಸಿದ್ದನಾದವನು. ಸುಳ್ಳು, ಕಪಟ ಮಾತುಗಳಿರಲಿಲ್ಲ. ಇವನ ಕಾಲದಲ್ಲಿ ಪ್ರಜೆಗಳೆಲ್ಲರೂ ಸಮಾನರು. ಯಾವುದೇ ಕೊರತೆಯಿಲ್ಲದೇ ಮಹಾಬಲಿಯ ಸಂಸ್ಥಾನದಲ್ಲಿ ಎಲ್ಲರು ಸುಖ ಸಂತೋಷಗಳಿಂದ ಜೀವನ ಸಾಗಿಸುತ್ತಿದ್ದವರು. ಆತನ ಪ್ರಜಾ ದರ್ಶನಕ್ಕಾಗಿ ಬರುವ ಸಂದರ್ಭವೇ ಈ ತಿರು ಓಣಂ ಆಚರಣೆ. ಇನ್ನೊಂದು ಕಡೆಯಲ್ಲಿ ಹೇಳುವುದಾದರೆ ಕೇರಳ ರಾಜ್ಯದಲ್ಲಿ ಭಾವೈಕ್ಯತೆ ಸಾರುವ ವಿಭಿನ್ನ ಜನಾಂಗಳು ಒಟ್ಟುಗೂಡಿ ಆಚರಿಸಲ್ಪಡುವ ಮಹತ್ವದ ಹಬ್ಬ. ಮಲಯಾಳಂನ ಸಿಂಹ ಮಾಸದ ಹಸ್ತ ನಕ್ಷತ್ರದಿಂದ ಶ್ರಾವಣದ ವರೆಗೆ ಕೇರಳದಲ್ಲಿ ಎಲ್ಲೆಡೆ ಓಣಂ ಹಬ್ಬದ ಸಂಭ್ರಮ.
ಬಲಿ ಚಕ್ರವರ್ತಿ ಎಂಬ ರಾಜ ಮಹಾಶಿವನ ಪರಮ ಭಕ್ತ. ಅಷ್ಟೇ ಅಲ್ಲ ಅವನೊಬ್ಬ ಕೊಡುಗೈ ದಾನಿ. ತನ್ನ ಆಸ್ಥಾನಕ್ಕೆ ಯಾರೇ ಕಷ್ಟ ಎಂದು ಬಂದರೂ ಅವರನ್ನು ತಿರಸ್ಕಾರದಿಂದ ಕಾಣದೇ ಸತ್ಕಾರ ಮಾಡುವ ಗುಣವಂತನು. ಮಹಾಬಲಿಯು 99 ಮಹಾಯಾಗಗಳನ್ನು ಪೂರೈಸಿ ನೂರನೇ ಯಾಗಕ್ಕೆ ಅಣಿಯಾಗುತ್ತಾನೆ. ಈ ಬಲಿ ನೂರನೇ ಯಾಗದಲ್ಲೂ ಯಶಸ್ಸು ಕಂಡರೆ ಇಡೀ ಬ್ರಹ್ಮ ಕುಲದಲ್ಲೇ ಸರ್ವ ಶ್ರೇಷ್ಠವಾದ ಇಂದ್ರ ಪದವಿ ಲಭಿಸುವುದು ಅನುಮಾನವೇ ಇರಲಿಲ್ಲ. ಇದು ಬ್ರಹ್ಮ ಮಂಡಲದಲ್ಲಿನ ಹಲವಾರು ದೇವಾನು ದೇವತೆಗಳಿಗೆ ಸಹಿಸಲು ಸಾಧ್ಯವಾಗಲಿಲ್ಲ. ದೇವಾನು ದೇವತೆಗಳು ವಿಷ್ಣವಿನ ಬಳಿ ಬಂದು ಪರಿಹಾರಕ್ಕೆ ಉಪಾಯವನ್ನು ಬೇಡಿಕೊಂಡರು. ದೇವತೆಗಳ ಸಂಕಷ್ಟವನ್ನು ಅರಿತ ಹರಿ ಬಲಿಯಿಂದ ಪಾರಾಗುವ ಉಪಾಯವನ್ನು ಹುಡುಕಿದ. ತಪಸ್ಸಿನಲ್ಲಿ ನಿರತನಾಗಿದ್ದ ಮಹಾಬಲಿಯ ಬಳಿ ವಾಮನನಾಗಿ ಬಂದ ಹರಿ ತನ್ನ ವಾಸ್ತವ್ಯಕ್ಕೆ ನನಗೆ ಮೂರು ಹೆಜ್ಜೆ ಸ್ಥಳವನ್ನು ದಾನವಾಗಿ ಕೇಳಿದ. ಅದಕ್ಕೆ ದೂಸರ ಯಾವುದೇ ಮುಂದಾಲೋಚನೆಯನ್ನು ಮಾಡದೇ ಅದಕ್ಕೆ ಒಪ್ಪಿಕೊಂಡ. ತಕ್ಷಣವೇ ವಾಮನ ತ್ರಿವಿಕ್ರಮನಂತೆ ಬೆಳೆದು ನಿಂತು ಎರಡು ಹೆಜ್ಜೆಗಳಿಂದ ಭೂಮಿ ಮತ್ತು ಆಕಾಶವನ್ನು ತನ್ನದಾಗಿಸಿಕೊಂಡ ಮೂರನೇ ಹೆಜ್ಜೆಯನ್ನು ನಾನು ಎಲ್ಲಿ ಇಡಲಿ ಎಂದು ವಿಷ್ಣು ಬಲಿಯ ಬಳಿ ಕೇಳಿಕೊಂಡಾಗ ಬಲಿ ಮಂಡಿಯೂರಿ ಕುಳಿತುಕೊಂಡು ತನ್ನ ತಲೆಯನ್ನು ತೋರಿಸಿದ. ವಾಮನ ತನ್ನ ಬೃಹತ್ ಪಾದಗಳನ್ನು ಬಲಿಯ ತಲೆಯ ಮೇಲೆ ಇಟ್ಟಾಗ ಬಲಿ ಪಾತಾಳಕ್ಕೆ ತಳ್ಳಲ್ಪಟ್ಟ.
ಇದರಿಂದ ಪಶ್ಚಾತಾಪ ಪಟ್ಟ ವಿಷ್ಣು ಹರಿಹರನಾಗಿ ನಾನು ನಿನಗೇನು ಕೊಡಬೇಕೆಂದು ಕೇಳಿಕೊಂಡಾಗ ವರ್ಷಕ್ಕೊಮ್ಮೆ ನಾನು ಪಾತಾಳದಿಂದ ಮೇಲೆದ್ದು ಬಂದು ನನ್ನ ಪ್ರೀತಿಯ ಪ್ರಜೆಗಳ ದರ್ಶನ ಪಡೆಯುವ ವರವನ್ನು ಕೇಳಿದ. ಮಹಾಬಲಿ ಭೂಮಿಗೆ ಬರುವ ಸಂದರ್ಭದಲ್ಲಿ ಹೂವಿನಿಂದ ಶೃಂಗಾರಗೊಂಡ ರಂಗೋಲಿಯಿಂದ ಆತನನ್ನು ಬರ ಮಾಡಿಕೊಳ್ಳುವ ಸುಸಂದರ್ಭವೇ ಈ ತಿರು ಓಣಂ…
- ಪ್ರಮೋದ್ ಲಕ್ಕವಳ್ಳಿ
POPULAR STORIES :
ಬಿಎಸ್‍ಎನ್‍ಎಲ್ ಜೊತೆ ಜಿಯೋ ಒಪ್ಪಂದ…!
ಪ್ಯಾರಾಲಿಂಪಿಕ್‍ನಲ್ಲಿ ಭಾರತಕ್ಕೆ ಬೆಳ್ಳಿಯ ಬೆಳಕು ನೀಡಿದ ದೀಪಾ..
ಸೀದಾ ಮನೆಗೆ ಬಂದ ನಾನು ನಡೆದ ಘಟನೆಯನ್ನೆಲ್ಲಾ ನನ್ನ ಮಗನ ಬಳಿ ಹೇಳಿಕೊಂಡೆ..
ಬರ್ತ್ ಡೇ ದಿನ ನನ್ನ ಜೊತೆ ಸ್ವಿಮ್ ಮಾಡಲು ಬರ್ತೀರಾ: ಕ್ರಿಸ್ ಗೇಲ್..!
ಈ ಪ್ರಾಧ್ಯಾಪಕರ ವಯಸ್ಸು 55.. ಆದ್ರೆ ಅವರು ಪಡೆದಿರುವ ಪದವಿಗಳ ಸಂಖ್ಯೆ ಎಷ್ಟು ಗೊತ್ತಾ…?
ಗಣಪತಿ ವಿಸರ್ಜನಾ ಸಮಯದ ದುರಂತದಲ್ಲಿ 12 ಮಂದಿ ಕಣ್ಣೆದುರೇ ಮುಳುಗಿದ ಹೃದಯವಿದ್ರಾವಕ ವಿಡಿಯೋ…