ಚಿನ್ನಸ್ವಾಮಿ ಕ್ರಿಕೆಟ್ ಮೈದಾನ ಎಷ್ಟೊ ರೊಚಕ ಪಂದ್ಯಗಳಿಗೆ ಸಾಕ್ಷಿಯಾದ ನೆಲ. ಯಾವುದೆ ಅಂತಾರಾಷ್ಟ್ರೀಯ ಕ್ರಿಕೆಟ್ ನಡೆದ್ರು ಜನ ಕಿಕ್ಕಿರಿದು ತುಂಬಿರುತ್ತಾರೆ. ಚಿನ್ನಸ್ವಾಮಿಯಲ್ಲಿನ ಪ್ರತಿ ಕ್ರೀಡೆಯು ಪ್ರಕ್ಷಕರನ್ನು ಕಾದಿರಿಸುತ್ತೆ.ಅಂತಃ ಕ್ರೀಡಾಂಗಣಕ್ಕೆ ಈಗ ಒಂದು ವರ್ಷ ಬಿಡುವು. ಹೌದು ಚಿನ್ನಸ್ವಾಮಿ ಕ್ರಿಕೆಟ್ ಮೈದಾನ ರಾಜ್ಯ ಕ್ರಿಕೆಟ್ ಸಂಸ್ಥೆಯ ಹಿರಿಮೆ. ಸತತವಾಗಿ ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಹಗಲು ರಾತ್ರಿ ಅನ್ನದೆ ನಡೆಸಿಕೊಟ್ಟ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಒಂದು ವರ್ಷ ಬಿಡುವುಸಿಕ್ಕಂತಾಗಿದೆ. ಈ ಬಿಡುವಿಗೆ ಕಾರಣ ಒಂದು ಮುಖ್ಯ ಕಾರಣವಿದೆ.
ಚಿನ್ನಸ್ವಾಮಿ ಕ್ರಿಕೆಟ್ ನಿರ್ಮಾಣವಾಗಿ ಹಲವಾರು ವರ್ಷ ಕಳೆದಿದೆ ಆದರೂ ಕೂಡ ಅದರ ಸುಧಾರಣೆ ಆಗಬೇಕಿದೆ….ಹೌದು ಕಳೆದ ಬಾರಿಯಷ್ಟೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸೊಲಾರ್ ವಿದ್ಯುತ್ ಅಳವಡಿಸಿ ಅದನ್ನು ಉತ್ತುಂಗಕ್ಕೆ ಏರುವಂತೆ ಮಾಡಲಾಗಿತ್ತು. ಇದೀಗ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದ ಮಣ್ಣು ತನ್ನ ಸತ್ವವನ್ನು ಕಳೆದುಕೊಂಡಿದೆ.
ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿನ ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಂಡಿದೆ. ಇದಕ್ಕೆ ಕಾರಣ ಕಳೆದ 46 ವರ್ಷದ ಮಣ್ಣಿಗೆ ಪ್ರತಿವರ್ಷ ನೀರು ಗೊಬ್ಬರ ಹಾಕಿ ಹುಲ್ಲು ಬೆಳೆಸುತ್ತಿರುವುದು. ಹೌದು ಪ್ರತಿ ಬಾರಿಯ ಕ್ರಿಕೆಟ್ ಪಂದ್ಯದ ಸರಣಿ ನಡೆಯೋಕು ಮುನ್ನ ಮೈದಾನ ಸುಧಾಕಣೆ ಆಗೆತ್ತೆ. ಹಾಗಾಗಿ ಇಂತ್ತಿಷ್ಟು ದಿನಕ್ಕೆ ಮೈದಾನದಲ್ಲಿ ಗ್ರಾಸ್ ಕಟ್ಟಿಂಗ್ ಹಾಗೆ ಅದಕ್ಕೆ ವಾಟರ್ ಸ್ಪ್ರಿಂಕ್ಲಿಂಗ್ ನಡೆಯುತ್ತೆ. ಯಾಕಂದ್ರೆ ಪ್ರತಿ ಬಾರಿಯ ಮ್ಯಾಚ್ ಗೆ ಪಿಚ್ ಹಾಗೆ ಗ್ರೌಂಡ್ ಚನ್ನಾಗಿರಬೇಕು. ಹೀಗಿದ್ದಲ್ಲಿ ಮಾತ್ರ ಆಟಗಾರರಿಗೆ ಪಂದ್ಯವನ್ನು ಆಡೊಕೆ ಸಾಧ್ಯ..
ಅಷ್ಟೆ ಅಲ್ಲಾ ಮೈದಾನ ಸುಧಾರಣೆಗು ತನ್ನದೆ ಆದ ಆಯಾಮ ಇದೆ. ವರ್ಷಕ್ಕೆ 12 ತಿಂಗಳಂತೆ ಪ್ರತಿ ತಿಂಗಳು ಕೂಡ ಒಂದೊಂದು ರೀತಿಯ ಪೊಷಣೆಯನ್ನು ಮೈದಾನದ ಹುಲ್ಲಿಗೆ ಹಾಕಿ ಪಿಚ್ ಸುಧಾರಣೆ ಮಾಡಲಾಗುತ್ತೆ. ಉದಾಹರಣೆಗೆ ಮಳೆಗಾಲದಲ್ಲಿ ಒಂದು ರೀತಿಯಾದರೆ ಬೇಸಿಗೆಯಲ್ಲಿ ಮತ್ತೊಂದು ರೀತಿಯಾದ ಸುಧಾರಣೆ.ಒಂದು ಪಂದ್ಯ ನಡೆಯೋಕು ಮುನ್ನ ಮೈದಾನವನ್ನು ಸಂಪೂರ್ಣ ವ್ಯವಸ್ಥಿತವಾಗಿ ಇರಿಸಲಾಗುತ್ತೆ.. ಪಂದ್ಯಕ್ಕು ಮುನ್ನ ದಿನಗಳಲ್ಲಿ ಗ್ರಾಸ್ ಕಟ್ಟಿಂಗ್, ಪಿಚ್ ಸರಿಯಾಗಿ ಬೀಳುವಂತೆ ಸುಗಮಗೊಳಿಸುವುದು, ಕ್ರೀಡಾಂಗಣ ಸ್ವಚ್ಛಗೊಳಿಸುವುದು ಹೀಗೆ ಹಲವಾರು ತಯಾರಿಗಳನ್ನು ಮಾಡಲಾಗುತ್ತೆ.
ಈ ಎಲ್ಲಾ ಸುಧಾರಣೆಗಳು ಕಳೆದ 46 ವರ್ಷದಿಂದ ನಡೆಯತ್ತಾ ಬಂದಿದೆ. ಹೀಗಾಗಿ ಕಳೆದ 46 ವರ್ಷದ ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಂಡಿದೆ.ಇನ್ನು ಈ ಕ್ರೀಡಾಂಗಣ ನಿರ್ಮಿಸಿ 46 ವರ್ಷ ಕಳೆದಿದೆ. ಅಷ್ಟು ವರ್ಷಗಳಿಂದ ಇದರ ಮಣ್ಣು ಬದಲಾವಣೆಯಾಗಿಲ್ಲಾ. ಈ ಕಾರಣದಿಂದ ಅಂತಾರಾಷ್ಟ್ರೀಯ ಮಾನದಂಡಕ್ಕನುಗುಣವಾಗಿ ಹುಲ್ಲು ಬೆಳೆಸಲು ಮತ್ತು ಕಟಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ಇದು ಆಟಗಾರರಿಗು ಮುಂದೆ ಸಮಸ್ಯಯಾಗತ್ತೆ ಅನ್ನೊ ಕಾರಣಕ್ಕೆ ಮೈದಾನದ ಮಣ್ಣು ಬದಲಾವಣೆಗೆ ಕೆ ಎಸ್ ಸಿ ಎ ತಿರ್ಮಾನಿಸಿದೆ
ಒಟ್ಟಾರೆ ಇನ್ನು ಒಂದು ವರ್ಷ ಅಂದ್ರೆ 29ರಂದು ಐಪಿಎಲ್ ಫೈನಲ್ ನ ಕೊನೆಯ ಪಂದ್ಯವಾದ ನಂತ್ರ ಚಿನ್ನಸ್ವಾಮಿ ಕ್ರಿಕೆಟ್ ಮೈದಾನ ಸೈಲೆಂಟ್ ಆಗಲಿದೆ. ಮತ್ತೆ ನಾವು ಚಿನ್ನಸ್ವಾಮಿಯಲ್ಲಿ ಸೌಂಡ್ ಕೇಳ್ಬೇಕು ಅಂದ್ರೆ 1 ವರ್ಷ ಕಾಯಲೆಬೇಕು.
- ಶ್ರೀ
POPULAR STORIES :
ಸಿಸಿ ಟಿವಿಯಲ್ಲಿ ಸೆರೆಯಾದ ನಟ ರಿತೇಶ್ ದೇಶ್ ಮುಖ್ ಕಳ್ಳತನ..!
ವೆಸ್ಟ್ ಇಂಡೀಸ್ ಆಟಗಾರರಿಗೆ `ಸೆಕ್ಸ್’ ಅಂದ್ರೆ ಅಷ್ಟಿಷ್ಟಾನಾ..? ಕ್ರಿಸ್ ಗೇಲ್ ಬ್ಯಾಟು.. ಪತ್ರಕರ್ತೆಯ ಎರಡು ಕೈ..!!
ಪ್ರತಿ 10 ನಿಮಿಷಕ್ಕೆ ಶುರುವಾಗುತ್ತೆ ಹೊಸ ಜೀವನ..!! ಇದು ರೀಲ್ ಅಲ್ಲ ರಿಯಲ್ ಗಜನಿಯ ಕಥೆ..!!!
ಪ್ರಿಯಕರನಿಗೆ ಕಾಯುತ್ತಾ ಬಸ್ಟ್ಯಾಂಡ್‍ನಲ್ಲಿ ನಿಂತಿದ್ದಳು..!? ಆಟೋಡ್ರೈವರ್‍ಗಳು ಏನ್ ಮಾಡಿದ್ರು ಗೊತ್ತಾ..!?
ಚೀನಾ-ಪಾಕ್ ಗೆ ಖಡಕ್ಕು ಸಂದೇಶ..! ನರೇಂದ್ರ ಮೋದಿ ಗೇಮ್ ಸ್ಟಾರ್ಟ್..!
ಹುಚ್ಚ ವೆಂಕಟ್ ಗೆ ಮಡಿಕೇರಿಯಲ್ಲಿ ಸಿಕ್ಕಳು ಹುಡುಗಿ..! `ಕೋಟಿ’ ಬೇಕಾದರೂ ಖರ್ಚಾಗಲಿ ಎಂದರಂತೆ..!?