ಯಾವುದೇ ಒಬ್ಬ ಕ್ರಿಕೆಟ್ ಆಟ ಗಾರನ ಸಾಮರ್ಥ್ಯವನ್ನು ಅವನಾಡುವ ಟೆಸ್ಟ್ ಕ್ರಿಕೆಟ್ ಪಂದ್ಯಗಳಿಂದ ಮಾತ್ರ ನಿರ್ಧರಿಸಲು ಸಾಧ್ಯ ಅನ್ನುತ್ತಾರೆ.ಇಡೀ ಪ್ರಪಂಚದಾದ್ಯಂತ ಟೆಸ್ಟ್ ಪಂದ್ಯಗಳೆ ಕ್ರಿಕೆಟ್ ಆಟಗಾರನಿಗೆ ನಿಜವಾದ ಟೆಸ್ಟ್ ಆಗಿರುವುದು.
ಅನೇಕ ರೀತಿಯ ಚರ್ಚೆ ಹಾಗೂ ವಾದ ವಿವಾದಗಳ ನಡುವೆ ಅನಿಲ್ ಕುಂಬ್ಳೆಯನ್ನು ಭಾರತೀಯ ಕ್ರಿಕೆಟ್ ತಂಡದ ಕೋಚ್ ಎಂದು ಆಯ್ಕೆ ಮಾಡಲಾಗಿತ್ತು.ನಮ್ಮ ತಂಡದ ಆಟಗಾರರಿಗೆ ಕುಂಬ್ಳೆ ನೀಡಿದ ವಿಶೇಷ ಒಂದು ಘಂಟೆಯ ಸವಾಲನ್ನು ನೋಡಿದ ಮೇಲಂತೂ ಕ್ರಿಕೆಟ್ ಅಡ್ವೈಸರಿ ಕಮಿಟಿ ಕೋಚ್ ಆಯ್ಕೆಯಲ್ಲಿ ತಾಳಿದ ನಿಲುವು ನಿಜಕ್ಕೂ ಪ್ರಶಂಸಾರ್ಹವಾದದ್ದು ಎಂದು ನಮಗನ್ನಿಸುತ್ತದೆ.ನಮ್ಮ ಕೋಚ್ ಸಾಹೇಬರ ಆ ವಿಶೇಷ ಸವಾಲನ್ನು ಕೇಳಿದಲ್ಲಿ,ನೀವೂ ಅವರ ಬುದ್ದಿವಂತಿಕೆಗೆ ತಲೆದೂಗುವುದು ಗ್ಯಾರಂಟಿ.
ಬೆಳಗ್ಗಿನ ಯೋಗ ಸೆಷನ್ ಮುಗಿಯುತ್ತಿದ್ದಂತೆ ಕುಂಬ್ಳೆಯು ತಂಡದ ಆಟಗಾರರನ್ನು ಬೆಂಗಳೂರಿನಿಂದ 40 ಕಿ.ಮೀ ದೂರದಲ್ಲಿರೋ ಆಲೂರ್ ಕಡೆ ಕರೆದೊಯ್ದಿದ್ದಲ್ಲದೆ ಅವರಿಗೊಂದು ವಿಶೇಷ ಸವಾಲನ್ನೊಡ್ಡಿದರು.
ಏನದು ಸವಾಲು?
ಉತ್ತರ ತೀರಾ ಸರಳವಾದದ್ದು.
ಬ್ಯಾಟ್ಸ್ ಮ್ಯಾನ್ ,ಔಟಾಗದೇ 1 ಘಂಟೆ ಆಡಬೇಕು.
ಬೌಲರ್ ಸ್ ಎಷ್ಟು ಸಾಧ್ಯಾನೋ ಅಷ್ಟು ವಿಕೆಟ್ ಪಡಕೊಳ್ಳಬೇಕು.ಇವಿಷ್ಟೇ ನಮ್ಮ ಕೋಚ್ ಸವಾಲು,ನಿಜ! ಬ್ಯಾಟ್ಸ್ ಮ್ಯಾನ್ ಗಳಿಗೆ ಇದು ತೀರಾ ಸಾಧಾರಣ ವಿಷ್ಯ, ಯಾಕಂದ್ರೆ ಅವ್ರೀಗಾಗ್ಲೇ ಟೆಸ್ಟ್ ಪಂದ್ಯಗಳಲ್ಲಿ ಗಂಟೆಗಟ್ಟಲೆ ಬ್ಯಾಟಿಂಗ್ ಮಾಡಿ ಅನುಭವ ವಿರೋವ್ರು.ಅದ್ರೆ ಫಲಿತಾಂಶ ಸ್ವಲ್ಪ ಆಶ್ಚರ್ಯದಾಯಕವಾಗಿದ್ರೂ ಪರ್ವಾಗಿಲ್ಲ ಅನ್ಸ್ತು.
ಕೇವಲ್ ಒಬ್ಬನೇ ಒಬ್ಬ ಬ್ಯಾಟ್ಸ್ ಮ್ಯಾನ್ ಮಾತ್ರ ಒಂದು ಘಂಟೆಯ ತನಕ ತನ್ನ ಕರ್ತವ್ಯ ನಿಭಾಯಿಸಿದನು.ಈ ತರನಾದ ಒಂದು ಪರೀಕ್ಷೆಯಿಂದ ನಮ್ಮ ಬ್ಯಾಟಿಂಗ್ ನಲ್ಲಿರುವ ದೋಷಗಳನ್ನು ಸರಿಪಡಿಸುವುದಷ್ಟೇ ಅಲ್ಲ ಬದಲಾಗಿ ನಮ್ಮ ತಂಡವನ್ನುಇನ್ನೂ ಪ್ರಬಲ ತಂಡವನ್ನಾಗಿಸಲು ಯಾವ ತಯಾರಿ ಮಾಡಬೇಕೆಂಬುದನ್ನು ತಿಳಿದಂತಾಗುತ್ತದೆ.
ಫಲಿತಾಂಶ ಹೀಗಿದೆ.
ವಿರಾಟ್ ಕೋಹ್ಲಿ 1 ಘಂಟೆಯ ಅವಧಿಯಲ್ಲಿ 2 ಸಲ ಔಟ್ ಆದ್ರು.
ರವೀಂದ್ರ ಜಡೇಜಾರವರೇ ಕೊಹ್ಲಿಯವರನ್ನು 2 ಸಂದರ್ಭಗಳಲ್ಲೂ ಔಟ್ ಮಾಡಿದವರು.
ಓಪನರ್ ಶಿಕರ್ ಧಾವನ್ ಸಹ 2 ಸಲ ಸ್ಟಂಪ್ ಔಟ್ ಆದ್ರು.
ಶಿಕರ್ ಧವನ್ ಜೊತೆಗೆ ಬಂದ ಇನ್ನೊಬ್ಬ ಬ್ಯಾಟಿಂಗ್ ಪಾರ್ಟ್ನರ್ ಮುರಳಿ ವಿಜಯ್ ಗೂ ಸಹ ತನ್ನವಿಕೆಟ್ನ್ ಕಾಪಾಡಲಾಗಲಿಲ್ಲ.ಅವ್ರೂ ತನ್ನ ವಿಕೆಟ್ 2 ಬಾರಿ ಕಳಕೊಂಡ್ರು.
2 ಸಂದರ್ಭದಲ್ಲೂ ಇಶಾಂತ್ ಶರ್ಮ ಅವ್ರನ್ನು ಔಟ್ ಮಾಡಿದರು.
ಕೆ.ಎಲ್.ರಾಹುಲ್ ಮತ್ತು ಚೆತೇಶ್ವರ್ ಪೂಜರ್ ಇಬ್ರೂ ರನ್ ಔಟ್ ಆದ್ರು.
ಹೌದು!ಇದು ಕೇವಲ ಅನಿಲ್ ಕುಂಬ್ಳೆಗೆ ಮಾತ್ರವಲ್ಲ ಬದಲಾಗಿ ನಾವೂ ತೀರ ಕಾಳಜಿವಹಿಸಬೇಕಾಗಿರೋ ವಿಷ್ಯ.ನಮ್ಮ ನಾಡಲ್ಲೇ,ನಮ್ಮಪಂದ್ಯದ ಬೌಲರ್ ವಿರುದ್ದವೇ ಕೇವಲ 1 ಘಂಟೆಯೂ ಬ್ಯಾಟಿಂಗ್ ಮಾಡಲು ಇವರಿಗೆ ಅಸಾಧ್ಯವೆನಿಸಿದರೆ,ಇನ್ನು ವೆಸ್ಟ್ ಇಂಡೀಸ್ ಪಿಚ್ಚ್ ಗೆ ಯಾವ ರೀತಿಯಾಗಿ ಇವರು ಬ್ಯಾಟಿಂಗ್ ಮಾಡಬಹುದೆಂದು ನಾವು ಊಹಿಸಲು ಸಾಧ್ಯ?ಹೋಗ್ಲಿ ಬಿಟ್ಟ್ ಬಿಡಿ.ಇದು ಆಫ಼್ಟರ್ ಆಲ್ ಒಂದು ಪ್ರಾಕ್ಟೀಸ್ ಸಮಯ,ನಾವು ಯಾವತ್ತೂ ಅಂದ್ ಕೊಳ್ಳೋತರ Failure is the stepping stone to success” ನಮ್ಮ ಬ್ಯಾಟ್ಸ್ ಮ್ಯಾನ್ ಗಳು ಇನ್ನಾದರೂ ಎಚ್ಚೆತ್ತು ಕೊಂಡು ಇನ್ನೂ ಚೆನ್ನಾಗಿ ಆಟ ಆಡಬಹುದು ಎಂದು ಕೊಳ್ಳೋಣ.
ಇನ್ನು ನೀವೆಲ್ಲಾ ಕುತೂಹಲದಿಂದ ಕಾಯುತ್ತಿರೋ ಆ ಸವಾಲಿನಲ್ಲಿ ಗೆದ್ದು ಬಂದ ಒಬ್ಬನೇ ಒಬ್ಬನಾದ ಆ ಪಂದ್ಯ ಶ್ರೇಷ್ಟ ಬ್ಯಾಟ್ಸ್ ಮ್ಯಾನ್ ಯಾರು ಗೊತ್ತೆ??ಊಹಿಸಿದ್ದೀರಾ???
ನಮ್ಮ ಬೌಲರ್ ಗಳ ಕಠಿಣ ಎಸೆತಗಳನ್ನು ತಡೆದವನು,ಅವನೇ ಹೊಸ ಮುಖ.
ಅವನ್ಯಾರೆಂದರೆ ಅಜಿಂಕ್ಯ ರಹಾನೆ.ಇವನೇ ನಮ್ಮ ಕೋಚ್ ನ 1 ಘಂಟೆಯ ಸುಧೀರ್ಘ ಪರೀಕ್ಷೆಯನ್ನು ಪಾಸು ಮಾಡಿದವನು.
ಆ ವಿಡಿಯೋ ಇಲ್ಲಿದೆ ನೋಡಿ :
https://www.youtube.com/watch?v=Eqaa1VRYH-k
- ಸ್ವರ್ಣಲತ ಭಟ್
POPULAR STORIES :
ನೋಡ್ರಿ ಇಲ್ಲಿದೆ ಕೋಟಿಗೊಬ್ಬ2 ಟ್ರೇಲರ್..! ಒಂದಲ್ಲ ಎರಡೆರಡು ಟ್ರೇಲರ್ ಒಂದು ಕನ್ನಡ ಇನ್ನೊಂದು?
ದಿ ನ್ಯೂ ಇಂಡಿಯನ್ ಟೈಮ್ಸ್ ಮೊದಲ ವಾರ್ಷಿಕೋತ್ಸವ
ನೀವೂ ಯೂಟ್ಯೂಬ್‍ನಲ್ಲಿ ವಿಡಿಯೋ ನೋಡ್ತೀರಾ..? ಇಲ್ಲಿವೆ 15 ಯೂಟ್ಯೂಬ್ ಟ್ರಿಕ್ಸ್..!
ಮುಂಬೈನ ಮರೀನ್ ಡ್ರೈವ್‍ನಲ್ಲಿರೋ ಕಲ್ಲುಗಳೇಕೆ ಹೀಗಿವೆ ಗೊತ್ತಾ.?