ರಾಕಿಂಗ್ ಸ್ಟಾರ್‍ಗೆ ಅಭಿಮಾನಿಯ ಬಹಿರಂಗ ಪತ್ರ

Date:

 

ಪ್ರೀತಿಯ ಯಶ್ ಅವರಿಗೆ,

ಕಿರಾತಕನಿಂದ ಹಿಡಿದು ಮಾಸ್ಟರ್ ಪೀಸ್ ಚಿತ್ರದವರೆಗೂ ನಿಮ್ಮ ಸಾಕಷ್ಟು ಸಿನಿಮಾಗಳ ನೋಡಿದ್ದೇನೆ. ನಿಮ್ಮ ಅಭಿನಯಕ್ಕೆ ಮನಸೋತು ಸ್ನೇಹಿತರ ಜೊತೆ ಚರ್ಚೆ ನಡೆಸಿದ್ದೇನೆ.
ಇದೀಗ ನೀವು ರೈತರ ಬಗ್ಗೆ ಕಾಳಜಿಯ ಮಾತನಾಡಿರುವುದು ನಿಜಕ್ಕೂ ಖುಷಿಯ ವಿಚಾರವೇ ಸರಿ…,
ರೈತರ ಬಗ್ಗೆ ನಿಮಗಿರುವ ಕಾಳಜಿ ನೈಜ್ಯತೆಯಿಂದ ಕೂಡಿದ್ದರೆ, ನಿಮಗೆ ನನ್ನದೊಂದು ಸೆಲ್ಯೂಟ್…,
ಯಶ್ ಅವರೇ ದಯವಿಟ್ಟು ಈ ಮುಂದಿನ ಸಾಲನ್ನು ತಪ್ಪದೆ ಓದಿ…, ನಾನು ತುಮಕೂರು ಜಿಲ್ಲೆ ನಿವಾಸಿ.
ನಮ್ಮ ಜಿಲ್ಲೆಯಲ್ಲಿ ಪಾವಗಡ ಅನ್ನೋ ಶಾಪಗ್ರಸ್ಥ ತಾಲೂಕು ಇದೆ. ಈ ಭಾಗದಲ್ಲಿ ಮಳೆ ಬಂದು ಅದೇಷ್ಟೋ ವರ್ಷಗಳಾಗಿವೆ..,
ಸಾವಿರಾರು ಅಡಿ ಕೊಳವೆ ಬಾವಿ ಕೊರೆದರು ನೀರು ಸಿಗುವುದೇ ಕಷ್ಟ…, ಒಂದ್ವೇಳೆ ಸಿಕ್ಕರೆ ನೀರು ಪ್ಲೋರೈಡ್ ಮಯವಾಗಿರುತ್ತದೆ.
ಮಳೆ ಬಾರದ ಪರಿಣಾಮ ಸಾವಿರಾರು ರೈತ ಕುಟುಂಬಗಳು ಬೆಂಗಳೂರಿನಂತಹ ಮಹಾನಗರಗಳಿಗೆ ವಲಸೆ ಹೋಗಿ ನೆಲಸಿವೆ.
ರೈತ ಕುಟುಂಬದ ಮಕ್ಕಳು ವ್ಯವಸಾಯವನ್ನೇ ಮರೆತು ಹೋಗಿದ್ದಾರೆ. ಹೀಗಾಗಿ ಸಾವಿರಾರು ಎಕರೆ ಕೃಷಿ ಮಾಡದೆ ಪಾಳು ಬಿದಿದ್ದೆ..,
ಬಡತನಕ್ಕೆ ಸಿಲುಕಿರುವ ಅದೇಷ್ಟೋ ಕುಟುಂಬಗಳು ತಮ್ಮ ಮಕ್ಕಳನ್ನು
ಸಾಕಲಾರದೆ ಮಾರಾಟ ಮಾಡುವ ಅಥವಾ ಮಕ್ಕಳನ್ನು ಬೆಳೆಸಿ ಎಂದು ಸರ್ಕಾರಕ್ಕೆ ನೀಡುವ ಉದಾಹರಣೆಗಳಿಗೆ ಲೆಕ್ಕವೇ ಇಲ್ಲ..,
ಇದು ಈ ಭಾಗದ ಸಮಸ್ಯೆ…, ಈವರೆಗೂ ರಾಜಕೀಯ ನಾಯಕರು ಪಾವಗಡಕ್ಕೆ ಯಾವುದಾದರು ನದಿ ಮೂಲಕ ನೀರು ಹರಿಸುತ್ತೇವೆಂದು ಭರವಸೆ ನೀಡಿ ಮತ ಪಡೆದು ಕಣ್ಮರೆಯಾಗಿದ್ದಾರೆ…,
ಎತ್ತಿನಹೊಳೆ ಏತನೀರಾವರಿ ಯೋಜನೆ…,
ತುಂಗಭದ್ರ ನದಿ ಮೂಲದಿಂದ ಈ ತಾಲೂಕಿಗೆ ನೀರು ಹರಿಸುವ ಯೋಜನೆಗಳು ಇನ್ನು ಕಾಗದದ ಮೇಲೆಯೇ ಇವೇ ಹೊರತು..,
ಭೂಮಿಯ ಮೇಲೆ ಬಂದಿಲ್ಲ…, ಯಾವುದಾದರು ನದಿ ಮೂಲದಿಂದ ನೀರು ಹರಿಸಿ ಎಂದು ತಾಲೂಕಿನ 8 ಸಾವಿರಕ್ಕೂ ಹೆಚ್ಚು ಮಕ್ಕಳು ಪ್ರಧಾನಿಗೆ ಹಾಗೂ ಮುಖ್ಯಮಂತ್ರಿಗೆ ಸಾಮೂಹಿಕವಾಗಿ
ಪತ್ರ ಬರೆದರು.., ಫಲಿತಾಂಶ ಶೂನ್ಯ…, ಇಂತಹ ಪ್ರಯತ್ನಗಳಿಗೆ ನಿಮ್ಮಂತಹ ಸ್ಟಾರ್ ನಟ ಬೆಂಬಲ ಸಿಕ್ಕರೇ ನಿಜಕ್ಕೂ ಹೋರಾಟ ತೀವ್ರತೆ ಪಡೆದುಕೊಳ್ಳುತ್ತದೆ.
ಬೆಂಗಳೂರಿನಲ್ಲಿ ಕೇವಲ ಮಾಧ್ಯಮಗಳ ಎದುರು ನೀವು ಸವಾಲ್ ಹಾಕುವ ಬದಲು ಇಂತಹ ಪ್ರದೇಶಗಳಿಗೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಹುಡುಕಿ…,
ನಿಮ್ಮೊಂದಿಗೆ ನನ್ನಂತಹ ಸಾವಿರಾರು ಅಭಿಮಾನಿಗಳು ಕೈ ಜೋಡಿಸುತ್ತೇವೆ.., ತಾಲೂಕಿನ ಸಾವಿರಾರು ಜನರ ಬೆಂಬಲ ನಿಮ್ಮ ಪಾಲಿಗೆ ಸಿಗಲಿದೆ…,
ಇದೊಂದು ಸಮಸ್ಯೆಯನ್ನು ಸವಾಲ್ ಆಗಿ ಸ್ವೀಕರಿಸಿ ಸಮಸ್ಯೆ ಬಗೆ ಹರಿಸಿ…,

ನಿಮ್ಮ ಬರುವೆಕೆಯ ದಾರಿಗಾಗಿ ಕಾಯುತ್ತಿದ್ದೇವೆ..,

ಇಂತಿ ನಿಮ್ಮ ವಿಶ್ವಾಸಿ…,
ಮಹಂತೇಶ್ ಕುಮಾರ್
ನನ್ನ ಸಂಪರ್ಕ ನಂಬರ್ – 9986633008-9945574727

Like us on Facebook  The New India Times

POPULAR  STORIES :

2000 ಮುಖಬೆಲೆಯ ನೋಟು ಬರೀ ಸುಳ್ ಸುದ್ದಿ..?

ಟ್ರೈನ್ ಡೋರ್‍ನಲ್ಲಿ ಕಪಿಚೇಷ್ಟೆ ಆಡಿದ..! ಮುಂದೇನಾಯ್ತು ಈ ವೀಡಿಯೋ ನೋಡಿ.!

ವಿಲನ್ ಸಿನಿಮಾದ ಮತ್ತೊಂದು ಸ್ಪೆಷಾಲಿಟಿ ಏನ್ ಗೊತ್ತಾ..?

ಹಾಂಕಾಂಗ್ ಸ್ವಾತಂತ್ರ್ಯವನ್ನು ನಿರ್ಭಂಧಿಸುವ ಮಸೂದೆ ಅಂಗೀಕರಿಸಿದ ಚೀನಾ

ಇಂಡಿಯನ್ ಸ್ಟೀಲ್ ಮ್ಯಾನ್ ಸಾಹಸ ನೋಡುದ್ರೆ ಬೆಚ್ಚಿ ಬೀಳ್ತೀರ..!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...