ಬೆಂಗಳೂರಿನ ಸಿ.ವಿ.ರಾಮನ್ ನಗರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಪಿ.ರಮೇಶ್ ಇತ್ತೀಚೆಗೆ ತಮ್ಮ ಆಪ್ತರಿಗಾಗಿ, ತಮ್ಮ ಪ್ರೀತಿಪಾತ್ರರಿಗಾಗಿ ‘ಸ್ನೇಹಕೂಟ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಇಂದಿರಾನಗರ ಡಿಫೆನ್ಸ್ ಕಾಲೋನಿ ಗ್ರೌಂಡ್‍ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಪ್ರಾರಂಭವಾಗುತ್ತಿದಂತೆ ಜನಸಾಗರವೇ ಹರಿದುಬಂದಿತು. ಸುಮಾರು 3 ಸಾವಿರಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಲ್ಲಿ ನೋಡಿದ್ರೂ ಜನರು ತಮ್ಮ ಪ್ರೀತಿಯ ಜನ ನಾಯಕನಿಗೆ ಜಯಕಾರ ಕೂಗಿದರು. ಈ ವೇಳೆ ಪಿ.ರಮೇಶ್ ಅವರು ವೇದಿಕೆಯಲ್ಲಿ ಆಸಿನರಾಗದೆ ತಮ್ಮ ಜನರ ಜೊತೆಗೆಯಲ್ಲಿ ಕುಳಿತುಕೊಂಡಡಿದ್ದು ಆಶ್ಚರ್ಯಕರವಾಗಿತ್ತು. ಜೊತೆಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನರಿಗೆ ತಾವೇ ಊಟ ಬಡಿಸಿದ್ದು ವಿಶೇಷವಾಗಿತ್ತು. ಇದೇ ವೇಳೆ ತಮ್ಮ ರಾಜಕೀಯ ಮುಂದಿನ ನಿಲುವುಗಳನ್ನು ಜನರಿಗೆ ತಿಳಿಸಿದರು.