ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ವಿಶ್ವದ ಶ್ರೀಮಂತ ಮಹಿಳಾ ಅಥ್ಲೀಟ್ ಗಳ ಪಟ್ಟಿಯಲ್ಲಿ ಟಾಪ್ 10 ರಲ್ಲಿ ಸ್ಥಾನಪಡೆದಿದ್ದಾರೆ.
ಕಳೆದ ಒಲಂಪಿಕ್ಸ್ ನಲ್ಲಿ ಸಿಂಧು ಬೆಳ್ಳಿ ಗೆದ್ದಿದ್ದರು.
ಸಿಂಧು ಅವರ ಆದಾಯ ಗಣನೀಯವಾಗಿ ಏರಿಕೆಯಾಗಿದ್ದು, ಫೋರ್ಬ್ಸ್ ಅಥ್ಲೀಟ್ ಗಳ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದ್ದಾರೆ. ಸಿಂಧು ಸದ್ಯ ಜಕಾರ್ತಾದಲ್ಲಿ ನಡೆಯುತ್ತಿರುವ ಏಷಿಯನ್ ಗೇಮ್ಸ್ ನಲ್ಲಿ ಭಾಗಿಯಾಗಲು ತೆರಳಿದ್ದಾರೆ.

ಇವರು 2017 ರ ಜೂನ್ 2018ರ ಅವಧಿಯಲ್ಲಿ ವಾರ್ಷಿಕ 59ಕೋಟಿ ರೂ ಗಳಿಸಿದ್ದಾರೆ. ವಾರ್ಷಿಕ 127ಕೋಟಿ ರೂ ಗಳಿಸಿರುವ ಟೆನ್ನಿಸ್ ತಾರೆ ಸೆರನಾ ವಿಲಿಯಮ್ಸ್ ಮೊದಲ ಸ್ಥಾನದಲ್ಲಿದ್ದಾರೆ.






