ಪಾಕ್‍ನ ಬಾಲಕಿಯ ದೇಹಕ್ಕೆ ನೂರು ಬಾರಿ ಆಪರೇಷನ್…! ಈಗ ಆಕೆ ಹೇಳುವ ಮಾತೇನು..?

Date:

ಈಗೆಲ್ಲಾ ಒಂದು ಸಾರಿ ಆಪರೇಷನ್ ಮಾಡಿಕೊಂಡವರು ಸುಮಾರು ಐದಾರು ತಿಂಗಳು ಕಾಲ ಬೆಡ್‍ರೆಸ್ಟ್ ನಲ್ಲಿದ್ದು ಚೇತರಿಸಿಕೊಳ್ಳುವಾಗ, ಪಾಕ್‍ನ ಬಾಲಕಿಯೊಬ್ಬಳಿಗೆ ಬರೋಬ್ಬರಿ 100 ಬಾರಿ ಆಪರೇಷನ್ ಮಾಡಿಕೊಂಡರೂ ಇನ್ನು ಜೀವಂತವಾಗಿದ್ದಾಳೆ..!
25ರ ಹರೆಯದ ಫೌಸಿಯಾ, ಮೂಲತಃ ಪಾಕ್‍ನ ಲಾಹೋರ್ ಮೂಲದವಳು. ತೀರಾ ಅಪರೂಪದ ಕಾಯಿಲೆಯಾದ ಒಂದು ಚರ್ಮ ರೋಗದಿಂದ ಬಳಲುತ್ತಿರುವ ಈಕೆ ತನ್ನ ಇಡೀ ಜೀವನವೇ ಆಸ್ಪತ್ರೆಯಲ್ಲೇ ಕಳೆದಿದ್ದಾಳೆ ನೋಡಿ.. ‘ಫೈಬ್ರೊಮಟೊಸಸ್’ ಎಂಬ ಅತೀ ವಿರಳವಾದ ಚರ್ಮ ಕಾಯಿಲೆಯಿಂದ ಬಳಲುತ್ತಿರುವ ಫೌಸಿಯಾ ಯೂಸುಫ್ ಲಾಹೋರ್‍ನ ಶೇಖ್ ಝಾಯೆದ್ ಆಸ್ಪತ್ರೆಯಲ್ಲಿ 100ನೇ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿಕೊಂಡಿದ್ದಾಳೆ. ಆದರೆ ಈಕೆ ಇನ್ನು ಮುಂದಿನ ದಿನಗಳಲ್ಲಿ ಬದುಕಬೇಕೆಂದರೆ ಆಕೆಯ ಎಡಗೈಯನ್ನು ಕತ್ತರಿಸಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ. ಅದಕ್ಕೆ ನಿರಾಕರಿಸಿರುವ ಈ ತರುಣಿ, ನಾನು ಎಂದಿಗೂ ಸಾವಿನ ಬಗ್ಗೆ ಹೆದರಿದವಳಲ್ಲ. ನಾನು ಇಲ್ಲಿಯವರೆಗು ಬದುಕಿದ್ದೇ ಒಂದು ದೊಡ್ಡ ಪವಾಡ ಎಂದಿರುವ ಆಕೆ, ನಾನು ಸಾಯಲು ಸಿದ್ದ ಆದ್ರೆ ಕೈಯನ್ನು ಮಾತ್ರ ಕಳೆದುಕೊಳ್ಳಲಾರೆ ಎಂದು ವೈದ್ಯರಿಗೆ ತಿಳಿಸಿದ್ದಾಳೆ…!
ನನ್ನ ಜೀವ ಉಳಿಯಬೇಕು ಎಂದರೆ ವೈದ್ಯರು ನನ್ನ ಕೈ ಕತ್ತರಿಸಬೇಕು ಎಂದು ಹೇಳಿದ್ದಾರೆ. ಯಾಕಂದ್ರೆ ಆ ಮಾರಣಾಂತಿಕ ಚರ್ಮದ ರೋಗವು ನನ್ನ ಎಡಗೈ ಭಾಗದಿಂದ ನನ್ನ ಕುತ್ತಿಗೆ ಸೇರಿದಂತೆ, ದೇಹದ ಹಲವು ಭಾಗಗಳಿಗೆ ಹರಡಿದೆ. ನನಗೆ ಹೋರಾಟ ಅಂದರೆ ಬಲು ಇಷ್ಟ. ನಾನೋರ್ವ ಹುಟ್ಟು ಹೋರಾಟಗಾರ್ತಿ ಎಂದಿದ್ದಾಳೆ. ಮನಬಿಚ್ಚಿ ಹೇಳುತ್ತೇನೆ ನನಗೆ ಸಾವು ಎಂದರೆ ಭಯವಿಲ್ಲ. ಅದೇ ರೀತಿ ನಾನೋರ್ವ ಅಂಗವೈಕಲ್ಯಳಾಗಿ ಬದುಕಲು ಇಷ್ಟ ಪಡುವುದಿಲ್ಲ. ನನ್ನ ಪ್ರಾಣ ಹೋದರೂ ಚಿಂತೆ ಮಾಡೆನು ಆದರೆ ನನ್ನ ಕೈಯನ್ನು ಮಾತ್ರ ಕತ್ತರಿಸಲು ಅನುಮತಿ ನೀಡೋದಿಲ್ಲ ಎಂದಿದ್ದಾಳೆ…! ತನ್ನ ಎಂಟನೇ ವಯಸ್ಸಿನಲ್ಲೇ ಮೊದಲ ಶಸ್ತ್ರ ಚಿಕಿತ್ಸೆಗೆ ಒಳಗಾದ ಫೌಜಿಯಾ, ಎರಡನೇ ತರಗತಿ ಓದುತ್ತಿದ್ದಾಗಲೇ ಆಸ್ಪತ್ರೆಗೆ ಸೇರಿದವಳು. ಐವರು ಮಕ್ಕಳಲ್ಲಿ ಎರಡನೇ ಮಗಳಾದ ಈಕೆ ತನ್ನ ಚಿಕಿತ್ಸೆಗಾಗಿ ತಿಂಗಳಿಗೆ 15 ಸಾವಿರಕ್ಕೂ ಅಧಿಕ ಹಣ ಖರ್ಚಾಗುತ್ತದೆ ಎಂದಿದ್ದಾಳೆ. ದಾನಿಗಳ ಸಹಾಯದಿಂದ ನಾನಿನ್ನೂ ಬದುಕಿದ್ದೇನೆ ಅವರಿಗೆಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾಳೆ.

POPULAR  STORIES :

ಸರ್ಕಾರ ಬಿದ್ದರೂ 20ರ ನಂತರ ನೀರು ಬಿಡೆನು: ಸಿಎಂ ಸಿದ್ದರಾಮಯ್ಯ ಗುಡುಗು..!

ಚೀನಾ ತನ್ನ ದೇಶದ 6 ವರ್ಷದ ಮಕ್ಕಳನ್ನು ಭವಿಷ್ಯದ ಒಲಿಂಪಿಕ್ ದಿಗ್ಗಜರನ್ನು ಮಾಡಲು ಕೊಡುವ ಕಠಿಣ ತರಬೇತಿ..!

ತಿಂಗಳಲ್ಲಿ ಎರಡನೇ ಬಾರಿ ಪೆಟ್ರೊಲ್ ದರ ಏರಿಕೆ…!

ತಾಮ್ರದ ಪಾತ್ರೆಯಲ್ಲಿ ಕೂಡಿಟ್ಟ ನೀರನ್ನು ಸೇವಿಸುವುದು ಉತ್ತಮ ಯಾಕೆ..?

ಪತಂಜಲಿಯ ಸಿ.ಇ.ಒ ಆಚಾರ್ಯ ಬಾಲಕೃಷ್ಣ , ಈಗ ದೇಶದ ಅತ್ಯಂತ ಶ್ರೀಮಂತರಲ್ಲಿ ಒಬ್ಬರು..!

ಸಿರಿಯಾ ದೇಶದ ಮಹಿಳೆಯರನ್ನು ಲೈಂಗಿಕ ಗುಲಾಮಗಿರಿಯಿಂದ ರಕ್ಷಿಸಲು ಪಣ ತೊಟ್ಟು ನಿಂತ ದಿಟ್ಟ ಮಹಿಳೆ.

ಬಿಎಸ್‍ಎನ್‍ಎಲ್ ಜೊತೆ ಜಿಯೋ ಒಪ್ಪಂದ…!

Share post:

Subscribe

spot_imgspot_img

Popular

More like this
Related

ರೌಡಿಗಳನ್ನು, ಗೂಂಡಾಗಳನ್ನು ಬಿಟ್ಟು ಜನರ ಆಸ್ತಿಗಳನ್ನು ಲಪಟಾಯಿಸುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

ರೌಡಿಗಳನ್ನು, ಗೂಂಡಾಗಳನ್ನು ಬಿಟ್ಟು ಜನರ ಆಸ್ತಿಗಳನ್ನು ಲಪಟಾಯಿಸುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ ಬೆಂಗಳೂರು: ರೌಡಿಗಳನ್ನು,...

World Cup 2025: ಇಂದು ಭಾರತ- ಆಫ್ರಿಕಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯ! ಎಲ್ಲಿ ನಡೆಯಲಿದೆ?

World Cup 2025: ಇಂದು ಭಾರತ- ಆಫ್ರಿಕಾ ನಡುವಿನ ವಿಶ್ವಕಪ್ ಫೈನಲ್...

ನಿಮ್ಮ ಮುಖಕ್ಕೆ ಬಳಸುವ ರೋಸ್​ ವಾಟರ್​ನಿಂದಲೂ ಇದೆ ಅಪಾಯ; ಬಳಸೋ ಮುನ್ನ ಎಚ್ಚರ!

ನಿಮ್ಮ ಮುಖಕ್ಕೆ ಬಳಸುವ ರೋಸ್​ ವಾಟರ್​ನಿಂದಲೂ ಇದೆ ಅಪಾಯ; ಬಳಸೋ ಮುನ್ನ...

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ!

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ! ನವದೆಹಲಿ:- ದೇಶದಲ್ಲಿ ಪ್ರತಿ...