ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಹೆಚ್ಚು ಸದ್ದು ಮಾಡಿರುವ ಪನಾಮ ಪೇಪರ್ ಬಹಿರಂಗದ ಕುರಿತಾದ ಸಿನಿಮಾ ನಿರ್ಮಿಸಲು ಹಾಲಿವುಡ್ ತಯಾರಿ ನಡೆಸಿದೆ. ಖ್ಯಾತ ಪತ್ರಕರ್ತ ಹಾಗೂ ಪುಲಿಟ್ಜೆರ್ ಪ್ರಶಸ್ತಿ ವಿಜೇತ ಜೇಕ್ ಬೆರ್ನ್‍ಸ್ಟೀನ್ ಬರೆದ `ಸಿಕ್ರೆಸಿ ವಲ್ರ್ಡ್’ ಎಂಬ ಪುಸ್ತಕದಲ್ಲಿ ಪನಾಮ ಪೇಪರ್ ಬಹಿರಂಗ ಕುರಿತಾಗಿ ಉಲ್ಲೇಖಿಸಲಾಗಿದೆ. ಅದನ್ನು ಆಧಾರವಾಗಿಟ್ಟುಕೊಂಡು ಹಾಲಿವುಡ್ ಸಿನಿಮಾ ಮಾಡಲು ಹೊರಟಿದೆ.
ವಿಶ್ವದ ಶ್ರೇಷ್ಠ ನಾಯಕರ ಹಾಗೂ ಸೆಲೆಬ್ರಿಟಿಗಳ ಆಸ್ತಿಗಳ ಒಳಗುಟ್ಟನ್ನು ಬಹಿರಂಗಪಡಿಸಿದ ಪನಾಮ ಬಹಿರಂಗ ಪ್ರಕರಣ ಹಾಲಿವುಡ್‍ನಲ್ಲಿ ಎಲ್ಲರ ಗಮನ ಸೆಳೆಯುವುದು ನಿಶ್ವಿತ ಎಂದು ಬೆರ್ನ್‍ಸ್ಟೀನ್ ಅವರ ಅಭಿಪ್ರಾಯವಾಗಿದೆ. ಸುಮಾರು 100 ಕ್ಕೂ ಹೆಚ್ಚು ಮಾಧ್ಯಮ ಸಮೂಹಗಳು ಒಟ್ಟಿಗೆ ಸೇರಿ ಸಂಶೋಧನೆ ನಡೆಸಿ ಈ ಹಗರಣವನ್ನು ಬಯಲಿಗೆ ತಂದಿದ್ದು, ಪತ್ರಿಕೋದ್ಯಮದ ಸಹಯೋಗದ ಬಲವನ್ನು ತೋರಿಸುತ್ತದೆ ಎಂದು ಅವರು ಹೇಳಿದರು. ಇತ್ತೀಚೆಗೆ ಪತ್ರಕರ್ತರು ಬಹಿರಂಗಪಡಿಸಿದ ಬಾಸ್ಟನ್ ಕ್ಯಾಥೋಲಿಕ್ ಚರ್ಚ್‍ನ ಸುಳ್ಳು ಸಂತರ (ಫೀಡೋಫೈಲ್ ಪ್ರೀಸ್ಟ್) ಗಳ ಕುರಿತು `ಸ್ಪಾಟ್‍ಲೈಟ್’ ಎಂಬ ಹೆಸರಿನ ಚಿತ್ರ ಈ ವರ್ಷದ ಅತ್ಯುತ್ತಮ ಚಿತ್ರ ಎನಿಸಿಕೊಂಡಿದ್ದಲ್ಲದೇ ಆಸ್ಕರ್ ಪ್ರಶಸ್ತಿಗೂ ಭಾಜನವಾಗಿತ್ತು. ಹೀಗಾಗಿ ಇದರ ಪ್ರಭಾವ ಮುಂಬರುವ ಚಿತ್ರದಲ್ಲೂ ಇರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಪುಸ್ತಕವು ಮುಂದಿನ ವರ್ಷದಲ್ಲಿ ಬಿಡುಗಡೆಯಾಗಲಿದೆ. ಆದರೆ, ಹಾಲಿವುಡ್‍ನ ಖ್ಯಾತ ನಿರ್ಮಾಪಕರು ಹಾಗು ಸ್ಟುಡಿಯೋ ಸಂಸ್ಥೆಗಳು ಲೇಖಕರನ್ನು ಸಂಪರ್ಕಿಸಿದ್ದು, ಇದರ ಕುರಿತಾಗಿ ಚಿತ್ರ ನಿರ್ಮಿಸುವ ಹಕ್ಕು ಪಡೆಯುವ ಪ್ರಯತ್ನ ಮಾಡಿದ್ದಾರೆ.
- ವಿಶ್ವನಾಥ್ ಶೇರಿಕಾರ್.
POPULAR STORIES :
ಪೆಟ್ರೋಲ್ ಬಂಕ್‍ನಲ್ಲಿ ಯಾವೆಲ್ಲಾ ಸೇವೆ, ಸೌಲಭ್ಯ ಉಚಿತವಾಗಿರಬೇಕು ಗೊತ್ತಾ?
ರಾಜೀನಾಮೆ ನಂತರ ಮೊದಲಬಾರಿಗೆ ಮೀಡಿಯಾ ಮುಂದೆ ಅನುಪಮಾ ಏನ್ ಹೇಳಿದ್ರು ಗೊತ್ತಾ?!
ಹೇರ್ ಟ್ರಾನ್ಸ್‍ಪ್ಲಾಂಟ್ ಮಾಡಿಸ್ಕೋತೀರಾ..!? ಸಾವು ಗ್ಯಾರಂಟಿ..!! ಹುಷಾರ್..!!?
ದೆಹಲಿಗೆ ಬಾಂಬಿಡ್ತಾನಂತೆ ದಾವೂದ್..! ನರರಾಕ್ಷಸನನ್ನು ಹಿಡಿಯೋ ತಾಕತ್ತಿಲ್ಲವೇ..!?
`ಭಾರತದಿಂದ ಮುಸ್ಲೀಮರನ್ನು ಓಡಿಸಬೇಕು..!?’ ಸಾದ್ವಿ ಪ್ರಾಚಿಯಿಂದ ಮತ್ತೊಂದು ವಿವಾದಾತ್ಮಕ ಹೇಳಿಕೆ #Video
ಅನುಪಮ ಶೆಣೈಗೆ ಬಿಜೆಪಿ ಟಿಕೆಟ್..! ಇದೀಗ ಬಂದ ಸುದ್ದಿ..!
`ಫೇಸ್’ಬುಕ್ ಆಟ ಮುಗಿದಿಲ್ಲವೇ..!? ತೆರೆಮರೆಯಿಂದ ಹೊರಬನ್ನಿ ಮೇಡಂ..!
ಚೀನಾದಲ್ಲಿ ರಂಜಾನ್ ನಿಷೇಧ..! ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಲು ನಿರ್ಧಾರ..!?
ಪಾಶುಪತಾಸ್ತ್ರ- ಟಿಪ್ಪು ಸುಲ್ತಾನನಿಗೂ ಇದಕ್ಕೂ ಇರುವ ನಂಟೇನು??????
ಇಪ್ಪತ್ತೊಂಬತ್ತು ಹೆಣದ ರಾಶಿ ಮೇಲೆ ಯುಪಿ ಸರ್ಕಾರ..! ಒಂದು ರೂಪಾಯಿಗೆ 40 ಲೀಟರ್ ಪೆಟ್ರೋಲ್..!!