ಪಂಜಾಬ್ ನಲ್ಲಿ ದೇಶ ದ್ರೋಹಿ ಆ್ಯಪಲ್ ಮಾರಾಟವಾಗುತ್ತಿದೆ ಎನ್ನಲಾಗಿದೆ.
ಪಾಕಿಸ್ತಾನ್ ಜಿಂದಾಬಾದ್, ಹಿಂದೂಸ್ತಾನ್ ಮುರ್ದಾಬಾದ್ ಎಂದು ಬರೆದಿರುವ ಸೇಬು ಹಣ್ಣುಗಳು ಪಂಜಾಬ್ ನ ಫರೀದ್ ಕೋಟ್ ನಲ್ಲಿ ಮಾರಾಟವಾಗ್ತಿದೆ ಎಂಬ ಆರೋಪ ಇದೆ.
ಇದಕ್ಕೆ ಸಾಕ್ಷಿ ಎಂಬಂತೆ ಹಿಂದೂ ವೆಲ್ ಫೇರ್ ಕಮಿಟಿಯ ಸದಸ್ಯರಾದ ನರೇಶ್ ಕುಮಾರ್ ಅವರು ಖರೀದಿಸಿದ ಆ್ಯಪಲ್ ಮೇಲೆ ಪಾಕಿಸ್ತಾನಕ್ಕೆ ಜಯವಾಗಲಿ , ಭಾರತಕ್ಕೆ ಧಿಕ್ಕಾರ (ಪಾಕಿಸ್ತಾನ್ ಜಿಂದಾಬಾದ್,ಹಿಂದೂಸ್ತಾನ್ ಮುರ್ದಾಬಾದ್) ಅಂತ ಬರೆದಿರುವುದು ಕಂಡು ಬಂದಿದೆ. ಈ ಹಣ್ಣಗಳು ಜಮ್ಮು ಕಾಶ್ಮೀರದಿಂದ ಬಂದಿರಬಹುದು ಎನ್ನಲಾಗಿದೆ. ಇವುಗಳನ್ನು ಪೊಲೀಸರಿಗೆ ಒಪ್ಪಿಸಲಾಗಿದೆ .