ನನ್ನನ್ನು ಸಿಎಂ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸಿದ್ರು: ಪನ್ನೀರ್ ಸೆಲ್ವಂನ ಹೊಸ ಬಾಂಬ್..!

Date:

ಮಾಜಿ ಮುಖ್ಯಮಂತ್ರಿ ತಮಿಳುನಾಡಿನ ಅಮ್ಮಾ ಜೆ. ಜಯಲಲಿತಾ ಮರಣ ಹೊಂದಿದ ನಂತ್ರ ತಮಿಳುನಾಡು ರಾಜಕೀಯ ವ್ಯವಸ್ಥೆಯಲ್ಲಿ ಸಾಕಷ್ಟು ಹೈ ಡ್ರಾಮಾಗಳು ನಡೀತಾ ಇದೆ. ಎಐಡಿಎಂಕೆ ಪಕ್ಷದಲ್ಲಿ ಯಾರು ಏನೇ ಹೇಳಿದ್ರು ಅದಕ್ಕೆ ತಲೆಯಲ್ಲಾಡಿಸಿ ಮರು ಮಾತೆ ಆಡದ ಪನ್ನೀರ್ ಸೆಲ್ವಂ ಈಗ ಹೊಸ ಹೊಸ ಬಾಂಬ್ ಹಾಕೋಕೆ ಶುರು ಮಾಡಿದ್ದಾರೆ. ಜಯಾ ಅವರ ಪರಮಾಪ್ತೆಯಾಗಿದ್ದ ಶಶಿಕಲಾ ನಟರಾಜನ್ ಅವರಿಗೆ ಯಾವ ರಾಜಕೀಯ ಅನುಭವ ಇಲ್ಲದೆ ಇದ್ದರೂ ಅವರಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದಾಗಲೂ ಏನೂ ಮಾತನಾಡದ ಸೆಲ್ವಂ ಈಗ ಮುಖ್ಯಮಂತ್ರಿ ಕುರ್ಚಿಯನ್ನೆ ಕಸಿದುಕೊಂಡಾಗ ಕೆಂಡಾ ಮಂಡಲರಾಗಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ಮರುದಿನವೇ ಬಂಡಾಯವೇಳಲು ಶುರು ಮಾಡಿದ ಸೆಲ್ವಂ ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸಲಾಗಿದೆ ಎಂದೇಳುವ ಮೂಲಕ ರಾಜ್ಯ ರಾಜಕೀಯ ವ್ಯವಸ್ಥೆಯನ್ನೆ ಅಲ್ಲೋಲ ಕಲ್ಲೋಲವಗುವಂತೆ ಮಾಡಿದ್ದಾರೆ..! ಅಷ್ಟೆ ಅಲ್ಲದೆ ತಾನು ಕೊಟ್ಟ ರಾಜಿನಾಮೆ ಪತ್ರವನ್ನು ವಾಪಸ್ ಪಡೆಯೋಕೆ ಸಿದ್ದನಿದ್ದೇನೆ ಎಂದೇಳಿದ್ದಾರೆ.
ಇನ್ನು ಪನ್ನೀರ್ ಸೆಲ್ವಂ ಬೆಂಬಲಕ್ಕೆ ಕೆಲವು ಶಾಸಕರು ಮುಂದಾಗಿದ್ದರೂ ಶಶಿಕಲಾ ಬೆಂಬಲಿಗರು ಚಿನ್ನಮ್ಮಾ ಅವರಿಗೆ 134 ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ. ಒಟ್ನಲ್ಲಿ ಇಷ್ಟು ವರ್ಷ ಯಾವುದೇ ಗೊಂದಲಕ್ಕೆ ಅವಕಾಶ ಕೊಡದೆ ಉತ್ತಮ ರೀತಿಯಲ್ಲಿ ಅಡಳಿತ ನಡೆಸಿದ್ದ ಜಯಾ ರಾಜಕೀಯ ಪಕ್ಷದಲ್ಲೀಗ ಭಾರಿ ಹೈಡ್ರಾಮಗಳು ನಡಿತಾ ಇದೆ. ಇನ್ನು ಬೆಳಿಗ್ಗೆ 11ರ ಸುಮಾರಿಗೆ ಪೋಯಸ್ ಗಾರ್ಡನ್‍ನಲ್ಲಿ ಪಕ್ಷದ ಶಾಸಕರು ಹಾಗೂ ಸಚಿವರು ಸಭೆ ಕರೆಯಲಾಗಿದ್ದು ಪನ್ನೀರ್ ಸೆಲ್ವಂ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡುವ ಹಾಗೂ ಶಾಸಕರ ಬಲ ಪ್ರದರ್ಶಿಸುವ ನಿರ್ಣಯ ಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ. ಈ ಮಧ್ಯೆ ಎಐಡಿಎಂಕೆ ಪಕ್ಷದ ನಾಯಕರೊಬ್ಬರು ಇಂದು ಪನ್ನೀರ್ ಸೆಲ್ವಂ ಅವರನ್ನು ಭೇಟಿ ನೀಡಿ ಶಶಿಕಲಾ ನಟರಾಜನ್ ಪರ ರಾಜಿ ಸಂಧಾನಕ್ಕೆ ಮಾತುಕತೆ ನಡೆಸಿರುವುದಾಗಿಯೂ, ನಂತರ ಪನ್ನೀರ್ ಸೆಲ್ವಂ ಅದಕ್ಕೆ ಒಪ್ಪಿಗೆ ಸೂಚಿಸಿರುವುದಾಗಿಯೂ ತಿಳಿದು ಬಂದಿದೆ. ಒಟ್ನಲ್ಲಿ ಅಮ್ಮಾ ಕಟ್ಟಿದ ಕೋಟೆಯಲ್ಲಿ ಅಲಲ್ಲಿ ಬಿರುಕುಗಳು ಕಾಣಿಸಿಕೊಳ್ತಾ ಇರೋದಂತೂ ಸತ್ಯ. ಇದು ಎಲ್ಲಿಗೆ ಬಂದು ನಿಲ್ಲುತ್ತೋ..? ಮುಂದೆ ಗೊತ್ತಾಗಲಿದೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಆಡಿದ್ದು 72 ಬಾಲ್ ಗಳಿಸಿದ್ದು 300 ರನ್..! ಲಾರಿ ಚಾಲಕನ ಮಗನ ಬ್ಯಾಟಿಂಗ್ ಕಮಾಲ್..

ಈ ನಟನ ಪ್ರತಿ ತಿಂಗಳ ಖರ್ಚು 13.5 ಕೋಟಿ ಅಂತೆ

ತಮಿಳಿನ ಪೂಜೈ ರಿಮೇಕ್ ಚಿತ್ರದಲ್ಲಿ ಪುನೀತ್ ಹೀರೋ.

ಸತ್ರೂ ಲವ್ ಮ್ಯಾರೇಜ್ ಆಗಲ್ವಂತೆ ಈ ನಟಿ.

ಹಳ್ಳಿಡಾಕ್ಟ್ರು – ಇವರಿಂದಲೇ ಹಳ್ಳಿಯ ಸೊಗಡು ಇನ್ನು ಉಳಿದಿರೋದು.

ವಿಷ್ಣುದಾದರಿಂದ ಸೂಪರ್‍ಸ್ಟಾರ್ ಆದ್ರಂತೆ ಈ ನಟ..!

ಮ್ಯಾಟ್ರಿಮೋನಿ ವೆಬ್‍ಸೈಟ್‍ಗಳಲ್ಲಿ ನಂಬರ್ ಕೊಡೋಕು ಮುನ್ನ ಈ ಸ್ಟೋರಿನ ಮಿಸ್ ಮಾಡ್ದೆ ಓದಿ

Share post:

Subscribe

spot_imgspot_img

Popular

More like this
Related

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ. ಸುರೇಶ್ ವಾಗ್ದಾಳಿ

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ....

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ ಬೆಂಗಳೂರು:...

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ ಬೆಂಗಳೂರು:...

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ ಬಳಕೆ – ರಾಹುಲ್ ಆರೋಪ

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ...