Parameshwar: ತುಮಕೂರಿಗೂ ಮೆಟ್ರೋ ಅಗತ್ಯವಿದೆ: ಗೃಹ ಸಚಿವ ಜಿ. ಪರಮೇಶ್ವರ್!
ಬೆಂಗಳೂರು:- ತುಮಕೂರಿಗೂ ಮೆಟ್ರೋ ಅಗತ್ಯವಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ತುಮಕೂರು ನ್ಯಾಷನಲ್ ಹೈವೆಯಲ್ಲಿ ತುಮಕೂರು ಪ್ರಾರಂಭದಲ್ಲಿ ಆರ್ಚ್ ಹಾಕಬೇಕು ಅಂತ ಸ್ಮಾರ್ಟ್ ಸಿಟಿಯಲ್ಲಿ ಹಣ ಹೊಂದಿಸಿದ್ದೇವೆ. ಇದಕ್ಕೆ ಕೇಂದ್ರ ಸರ್ಕಾರದ ಅನುಮತಿ ಆಗಬೇಕು. ಇದಕ್ಕಾಗಿ ಸೋಮಣ್ಣ ಅವರನ್ನ ಭೇಟಿಯಾಗಿ ಗಡ್ಕರಿ ಅವರಿಗೆ ಮಾತಾಡಿ ಅನುಮತಿ ಕೊಡಿಸೋಕೆ ಕೇಳೋಕೆ ಹೋಗಿದ್ದೆ. ಕುಡಿಯೋ ನೀರಿನ ಅನೇಕ ಯೋಜನೆ ಕೇಂದ್ರ ಸರ್ಕಾರಕ್ಕೆ ಹೋಗಿದೆ. ಅದನ್ನು ಕೊಡಿಸಬೇಕು ಅಂತ ಮನವಿ ಮಾಡಿದ್ದೇನೆ ಎಂದರು.
ತುಮಕೂರಿಗೆ ಮೆಟ್ರೋ ಯೋಜನೆ ರಾಜ್ಯದ ತೀರ್ಮಾನ ಏನಾಗುತ್ತೆ ನೋಡಿಕೊಂಡು ಕೇಂದ್ರದವರ ಬಳಿ ಮಾತಾಡ್ತೀವಿ. ಮೆಟ್ರೋ ಅಗತ್ಯವಿದೆ ಅಂತ ಸೋಮಣ್ಣ ಹೇಳಿದ್ದಾರೆ. ಜೊತೆಗೆ ಸಬ್ ಅರ್ಬನ್ ಕೂಡ ಆಗಬೇಕು ಅಂತ ಇದೆ. ಎರಡೂ ಆಗಲಿ, ತುಮಕೂರು ಅತಿವೇಗವಾಗಿ ಬೆಳೆಯುತ್ತಿದೆ. ಇಂಡಸ್ಟ್ರಿ ಹಬ್ ಬೆಳೆಯುತ್ತಿದೆ. ಬೆಂಗಳೂರು ವಿಸ್ತರಣೆ ಮಾಡಿದಂತೆ ತುಮಕೂರು ವಿಸ್ತರಣೆ ಮಾಡಬೇಕು ಅಂತ ಅನೇಕರು ಹೇಳ್ತಿದ್ದಾರೆ. ಅದರ ಬಗ್ಗೆ ಚರ್ಚೆ ಆಗ್ತಿದೆ ಎಂದರು
ಇನ್ನೂ ತುಮಕೂರನ್ನ ಗ್ರೇಟರ್ ಬೆಂಗಳೂರಿಗೆ ಸೇರಿಸಬೇಕು. ರಾಮನಗರವನ್ನ ಬೆಂಗಳೂರು ದಕ್ಷಿಣ ಅಂತ ಮಾಡಿ ಗ್ರೇಟರ್ ಬೆಂಗಳೂರಿಗೆ ಸೇರಿಸಿದ್ದಾರೆ. ತುಮಕೂರು ಬೆಂಗಳೂರಿಗೆ 70 ಕಿಮೀ ದೂರ ಇರೋದು. ನಮ್ಮನ್ನು ಬೆಂಗಳೂರಿಗೆ ಸೇರಿಸಿಕೊಂಡ್ರೆ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದಾಗುತ್ತದೆ. ಹೀಗಾಗಿ ಗ್ರೇಟರ್ ಬೆಂಗಳೂರಿಗೆ ನಮ್ಮನ್ನ ಸೇರಿಸಬೇಕು ಅಂತ ನಾವು ಪ್ರಸ್ತಾವನೆ ಕೊಡ್ತೀವಿ ಅಂತ ತಿಳಿಸಿದರು.