ಕೆಲವೊಂದು ಹಾಡನ್ನು ಕೇಳಿದಾಗ ನಮ್ಮ ಮೈ ಮನ ಸಂತೋಷದಿಂದ ನವಿರೇಳುತ್ತದೋ,ಅದೇ ಇನ್ನೂ ಕೆಲವೊಂದು ಹಾಡುಗಳು ನಮಗೆ ದುಃಖ ತರಿಸುವುದೂ ಉಂಟು,ಆದ್ರೆ ಈ ಹಾಡನ್ನು ಕೇಳಿದ್ರೆ ನೀವು ಸಾಯಲೂ ಬಹುದು ಎಂದು ನಾವು ಹೇಳಿದಲ್ಲಿ ನಿಮಗೇನನ್ನಿಸಬಹುದು?ನಿಜ! ಈಗ ನಾವು ಹೇಳುತ್ತಿರುವುದು 1933 ರ ಗ್ಲೂಮಿ ಸಂಡೇ ಎಂಬ ಹಾಡಿನ ಬಗ್ಗೆ,ಇದರ ರಚನಾಕಾರ ಹಂಗೇರಿಯನ್ ಪಿಯಾನಿಸ್ಟ್ ರೆಜ್ಸೋ ಸೆರೆಸ್.ಇದನ್ನು ಹಂಗೇರಿಯನ್ ಸುಸೈಡ್ ಸೋಂಗ್ ಎಂದೂ ಕರೆಯಲಾಗುತ್ತದೆ.ಈ ಹಾಡಿನೊಂದಿಗೆ ಅನೇಕ ದಂತ ಕಥೆಗಳು ಸೃಷ್ಟಿಯಾಗಿವೆ.ಈ ಹಾಡನ್ನು ಕೇಳುತ್ತಿರೋವಾಗ ಓರ್ವ ಹೆಣ್ಣು ತನ್ನನ್ನ ತಾನೇ ಸಾಯಿಸಿದಳಂತೆ,ಶಾಪ್ ಮಾಲೀಕನೊಬ್ಬ ಆತ್ಮಹತ್ಯೆ ಮಾಡಿಕೊಂಡು ತನ್ನ ಡೆತ್ ನೋಟ್ನಲ್ಲಿ ಈ ಹಾಡಿನ ಶಬ್ದಗಳನ್ನು ಬರೆದಿದ್ದನಂತೆ.ಏನೀ ವಿಚಿತ್ರ! ಅದೇನಿದೆ ಅಂತಾದ್ದು ಈ ಹಾಡಿನಲ್ಲಿ ಎಂಬುದರ ಬಗ್ಗೆ ಪರೀಶೀಲಿಸಿದಾಗ ಈ ವಿಷಯಗಳು ಬೆಳಕಿಗೆ ಬಂದವಂತೆ.
ಜೀವನದಲ್ಲಿ ಎದುರಾದ ಅನೇಕ ತೊಂದರೆಗಳನ್ನು ಎದುರಿಸಿ ಅದರ ಜೊತೆಗೆ ಹೋರಾಡುವಾಗ,ರೆಜ್ಸೋ ಸೆರೆಸ್ ಈ ಹಾಡನ್ನು ರಚಿಸಿದನಂತೆ.ಈ ಹಾಡಿನ ಮೂಲ ಹೀಗಿದೆ ನೋಡಿ.ಅವನ ಪ್ರೇಯಸಿ ಅವನನ್ನು ತೊರೆದು ಹೋದ ಮೇಲೆ,ತೀವ್ರ ಖಿನ್ನತೆಗೊಳಗಾಗಿ,ತತ್ತರಿಸಿ ಹೋಗಿದ್ದ ಸೆರೆಸ್,ಆಗ ಆ ಸಮಯದಲ್ಲೇ ಈ ಹಾಡಿನ ರಾಗವನ್ನು ರಚಿಸಿದ,ಅದೇ ಗ್ಲೂಮಿ ಸಂಡೆ ಯಾಗಿ ಪ್ರಖ್ಯಾತಿಯನ್ನು ಪಡೆಯಿತು.ಈ ಹಾಡಿನ ಸಾಹಿತ್ಯವನ್ನು ಸೆರೆಸ್ಸ್ ನ ಸ್ನೇಹಿತನೂ ಕವಿಯೂ ಆಗಿರೋ ಲಾಸ್ಜ್ಲೋ ಜಾವರ್ ಎಂಬವನು ರಚಿಸಿರುತ್ತಾನೆ.ಇನ್ನೂ ಕೆಲವು ವದಂತಿಗಳ ಪ್ರಕಾರ ಇದು ಜಾವರ್ ನ ಪ್ರೇಯಸಿ ಬಿಟ್ಟು ಹೋದ ಕಾರಣ ಜಾವರ್ ಈ ಕವಿತೆಯನ್ನು ರಚಿಸಲು ಕಾರಣವಾಯಿತು ಎಂತಲೂ ಅನ್ನುತ್ತಾರೆ.ಆದರೆ ಉಳಿದವರು ಇದನ್ನು ಬಲವಾಗಿ ಖಂಡಿಸಿ ಇದರ ರಾಗವನ್ನು ಸೆರೆಸ್ ರಚಿಸಿರುವನು,ಹಾಗೂ ಇದೊಂದು ಯುದ್ದದಿಂದ ಸಂಭವಿಸಿದ ನಿರಾಶೆ ಹಾಗೂ ನೋವುಳ್ಳ ಕಥೆಯನ್ನೊಳಗೊಂಡ ಹಾಡಾಗಿದೆ,ಆದರೆ ಜೇವರ್ ಇದನ್ನು ಹೃದಯ ವಿದ್ರಾವಕ ಕಥೆಯ ಹಾಡಿನಂತೆ ಬಿಂಬಿಸಿದ್ದಾನೆಂದೂ ಹೇಳಲಾಗುತ್ತದೆ.
ಪಾಲ್ ಕುಮಾರ್ ನ ರೆಕಾರ್ಡೆಡ್ ವರ್ಷನ್ ಬಳಿಕ ಹಂಗೇರಿಯಲ್ಲಿ ನಡೆದ ಸಾವಿಗೂ ಇದಕ್ಕೂ ನಂಟಿದೆ ಎಂಬ ಮಾಹಿತಿ ಲಭ್ಯವಾಯಿತು.ಪ್ರೆಸ್ ಮಾಹಿತಿಗನುಗುಣವಾಗಿ,ಈ ಹಾಡಿಗೆ ಸಂಬಂಧಿಸಿದಂತೆ ಹಂಗೇರಿ ಹಾಗೂ ಯುನೈಟೆಡ್ ಸ್ಟೇಟ್ಸ್ ನಲ್ಲಿ ದಾಖಲಾದ 19 ಸುಸೈಡ್ ಸಾವಿಗೂ ಈ ಹಾಡಿಗೂ ಸಂಬಂಧವಿದೆ ಎನ್ನಲಾಯಿತು.ಈ ಹಾಡನ್ನು ತಡೆಹಿಡಿಯಲಾಯಿತು.1968 ರಲ್ಲಿ ಈ ಹಾಡಿನ ರಚನಾಕಾರ ತನ್ನ ಕಿಟಿಕಿಯಿಂದ ಕೆಳಕ್ಕೆ ಹಾರುವುದರ ಮೂಲಕ ಸಾವನ್ನಪ್ಪಿದ್ದನಂತೆ.ಈ ಹಾಡನ್ನು ಕೇಳುತ್ತಾ ಸುಮಾರು 100 ಕ್ಕೂ ಅಧಿಕ ಸಾವಿಗೆ ಉತ್ತೇಜನ ನೀಡಿದ ಕಾರಣದಿಂದ ಈ ಹಾಡಿಗೆ ಹಂಗೇರಿಯನ್ ಸುಸೈಡ್ ಸಾಂಗ್ ಎಂದು ಹೆಸರಿಡಲಾಯಿತು.
ಈ ಹಾಡಿನ ಕನ್ನಡ ಭಾಷಾಂತರ ಹೀಗಿದೆ ನೋಡಿ…
“ನೂರು ಬಿಳಿ ಹೂವುಗಳು ನನ್ನ ಜೊತೆಯಲ್ಲಿರೋ ಒಂದು ಬೇಸರದ ಭಾನುವಾರ ದಿನ
ಒಂದು ಚರ್ಚ್ ಪ್ರಾರ್ಥನೆಯ ಜೊತೆಯಲ್ಲಿ ನಾನು ನಿನಗಾಗಿ ಕಾಯುತ್ತಿದ್ದೇನೆ,ನನ್ನ ಪ್ರೇಯಸಿಯೇ
ಆ ಕನಸನ್ನು ನನಸಾಗಿಸೋ ಭಾನುವಾರದ ಬೆಳಗಿನ ಸಮಯ
ನನ್ನ ದುಃಖದ ರಥ ನಿನ್ನ ಹೊರತಾಗಿ ಹಿಂತಿರುಗಿತು.
ಅಲ್ಲಿಂದ ಬಳಿಕ ಎಂದೆಂದಿಗೂ ಪ್ರತೀ ಭಾನುವರ ನನಗೆ ದುಃಖದ ದಿನ
ಕಣ್ಣೀರನ್ನು ನಾನು ಕುಡಿದು ದುಃಖವನ್ನು ತಿನ್ನುತ್ತಿದ್ದೇನೆ.
ದುಃಖದ ಭಾನುವಾರ
ಕೊನೇಯ ಭಾನುವಾರ ನನ್ನ ಪ್ರೇಯಸಿಯೇ,ದಯಮಾಡಿ ಮರಳಿ ಬಾ
ಅಲ್ಲಿ ಇನ್ನೂ ಫ಼ಾದರ್ ಜೊತೆಯಲ್ಲಿ ಶವ ಪೆಟ್ಟಿಗೆ,ಶವ ವೇದಿಕೆ,ಹಾಗೂ ಶವಕ್ಕೆ ಹಾಕೋ ಬಟ್ಟೆಯಿದೆ,
ಆದರೂ ಇಲ್ಲಿರೋ ಹೂವುಗಳು ನಿನಗಾಗಿ ಕಾಯುತ್ತಿವೆ,ಹೂವುಗಳು ಶವದ ಪೆಟ್ಟಿಗೆಯೂ,
ಹಂಗೇರಿಯನ್ ಮರದಿಂದ ಮೊಗ್ಗುಗಳು ಹೂವುಗಳಾಗಿ ಅರಳುವ ಸಮಯದಲ್ಲಿ
ನನ್ನ ಪಯಣ ಕೊನೆಗೊಳ್ಳುತ್ತದೆ.
ನನ್ನ ಕಣ್ಣುಗಳೆರಡು ತೆರೆದಿರುತ್ತದೆ,ನಿನ್ನನ್ನು ಇನ್ನೊಮ್ಮೆ ನೋಡುವ ಸಲುವಾಗಿ
ಅದನ್ನು ನೋಡಿ ನೀನು ಭಯಪಡದಿರು,ನನ್ನ ಸಾವಿನಲ್ಲೂ ನಾನು ನಿನಗೆ ಹಾರೈಸುತ್ತೇನೆ.
ಕೊನೇಯ ಭಾನುವಾರ.”
Suicide Song video :
ಈ ಹಾಡಿನ ಸುತ್ತಲೂ ಹೆಣೆಯಲಾಗಿರೋ ದಂತ ಕಥೆಗಳು ಈ ಹಾಡಿನ ಇನ್ನಷ್ಟು ಯಶಸ್ಸಿಗೆ ಕಾರಣವಾಯಿತು.ಇದರ ಬಗೆಗೆ ಆಳವಾಗಿ ಅಧ್ಯಯನ ನಡೆಸಲು ಅಸಾಧ್ಯವಾದರೂ ಈ ದುಃಖ ಭರಿತ ಕಥೆಯನ್ನೊಳಗೊಂಡ ಹಾಡು ಹಾಗೂ ಅದಕ್ಕೆ ಸಂಬಂಧಿಸಿದಂತೆ ನಡೆದ ಸುಸೈಡ್ ಪ್ರಕರಣಗಳು ಒಂದಕ್ಕೊಂದು ಬೆಸೆದಂತಿದ್ದು ವಾರ್ತಾ ಪತ್ರಿಕೆಯಲ್ಲೂ ಪ್ರಕಟವಾಗಿತ್ತಂತೆ.ಜೋಸೆಫ್ ಕೆಲ್ಲರ್ ಎಂಬ ಶೋಪ್ ಕೀಪರ್ ತನ್ನ ಸಾವಿನ ಸಂದರ್ಭದಲ್ಲಿ ಈ ಗ್ಲೂಮಿ ಸಂಡೇ ಲಿರಿಕ್ಸ್ ಬರೆದು ಸಾವಿಗೀಡಾಗಿದ್ದನಂತೆ,ಅದರಂತೆಯೇ ಲಂಡನ್ ನಲ್ಲಿ ಓರ್ವ ಮಹಿಳೆ ಈ ಹಾಡನ್ನು ಕೇಳುತ್ತಾ ಅತಿಯಾದ ಮಾತ್ರೆ ಸೇವಿಸಿ ಸತ್ತು ಹೋದಳಂತೆ.ಇನ್ನೆರಡು ಜನರು ಗ್ಲೂಮಿ ಸಂಡೇ ಬ್ಯಾಂಡ್ ಮೂಲಕ ಹಾಡನ್ನು ಕೇಳುತ್ತಲೇ ತಮಗೆ ತಾವೇ ಶೂಟ್ ಮಾಡಿಕೊಂಡು ಬಿಟ್ಟರಂತೆ.ದಾನುಬೆಯಲ್ಲಿ ಇನ್ನೂ ಹಲವರು ಇದೇ ರೀತಿ ಸತ್ತುಹೋಗಿದ್ದರಲ್ಲದೆ, ಅವರ ಕೈಯಲ್ಲಿ ಗ್ಲೂಮಿ ಸಂಡೇ ಯ ಹಾಡನ್ನು ಬರೆದ ಹಾಳೆ ದೊರಕಿತ್ತಂತೆ ಎಂದೂ ಹೇಳಲಾಗುತ್ತಿದೆ.
ಈ ಸಾವುಗಳಿಗೆಲ್ಲ ನಿಜವಾದ ಕಾರಣವೇನೆಂಬುದು ಇನ್ನೂ ನಿಗೂಢವಾಗಿ ಉಳಿದಿರೋ ಸತ್ಯ ಅನ್ನಬಹುದೇ???
- ಸ್ವರ್ಣಲತ ಭಟ್
POPULAR STORIES :
ದೇಶೀ ತಳಿ ಹಸುವಿನ ಸಗಣಿ ಸೇವಿದರೆ ನಾರ್ಮಲ್ ಡಿಲೆವರಿ…!
ಚಲಿಸುತ್ತಿರೋ ಟ್ರೈನ್ ನಲ್ಲಿದ್ದ R.B.I ನ 225 ಬಾಕ್ಸ್ ನಿಂದ 5.78 ಕೋಟಿ ರೂಪಾಯಿಗಳ ದರೋಡೆ ಮಾಡಿದ ಖದೀಮರು
ಒಲಿಂಪಿಕ್ಸ್ ನಲ್ಲಿ ಕಳ್ಳರ ಕಾಟ, ಭಯಭೀತರಾಗಿರುವ ಪ್ರವಾಸಿಗರು..! #Video
ಮೋದಿ ವಿರುದ್ದ ಲೀಗಲ್ ನೋಟಿಸ್ ಜಾರಿ…!
ಹನ್ನೆರಡು ವರ್ಷಗಳಿಂದ ಈ ಶಾಲೆಯಲ್ಲಿ ರಾಷ್ಟ್ರಗೀತೆಯೇ ಮೊಳಗಲಿಲ್ಲ…!
ತಲೆ ಇಲ್ಲ… ಆದ್ರೂ ನಡೆದಾಡುತ್ತೆ ಕೋಳಿ..?!
ಅಲ್ಲಾಹ್… ಅಂದಿದಕ್ಕೆ ವಿಮಾನದಿಂದ ಗೇಟ್ ಪಾಸ್ ಶಿಕ್ಷೆ…!
ವಿದ್ಯಾರ್ಥಿಗಳೊಂದಿಗೆ ಪ್ರಾಕ್ಟಿಕಲ್ ಕ್ಲಾಸ್ ತೆಗೆದ ಬಯಾಲಜಿ ಮೇಡಂ..!