ಕೆಲವರು ಚಿಕ್ಕವರಾಗಿದ್ರೂ ತುಂಬಾ ಏಜ್ ಆಗಿರುವವರಂತೆ ಕಾಣ್ತಾರೆ..! ಮತ್ತೆ ಕೆಲವರು ತುಂಬಾ ಏಜ್ ಆಗಿದ್ರೂ ಚಿಕ್ಕವರಂತೆ ಕಾಣ್ತಿರ್ತಾರೆ..! ಹಾಗಾಗಿ ಒಬ್ಬ ವ್ಯಕ್ತಿಯನ್ನು ನೋಡಿ ಇಂತಿಷ್ಟೇ ವರ್ಷದವ ಎಂದು ಹೇಳೋದು ಸ್ವಲ್ಪ ಕಷ್ಟವೇ..!
ಇಲ್ಲೋರ್ವ ಮಹಿಳೆ ತುಂಬಾ ಚಿಕ್ಕ ವಯಸ್ಸಿನವಳಂತಿರುವುದರಿಂದ ಮಗನ ಜೊತೆ ಹೋದ್ರೆ ಗರ್ಲ್‍ಫ್ರೆಂಡ್ ಅಂತ ಜನ ಅನ್ಕೊಳೋ ಪರಿಸ್ಥಿತಿ ಬಂದಿದೆ.
ಜಕಾರ್ತಾದ ಪುಷ್ಪ ದೇವಿಗೆ 50 ವರ್ಷ ಆಗಿದ್ದರೂ ಇನ್ನೂ ಯುವತಿ ಅಂತಿದ್ದಾರೆ..! ಇವರು ಮಗನ ಜೊತೆ ಹೋದ್ರೆ ಜನ ಗರ್ಲ್‍ಫ್ರೆಂಡ್ ಅಂತ ತಿಳ್ಕೊಳ್ತಾ ಇದ್ದಾರೆ..! ಇವರಿಗೆ 50 ವರ್ಷ ಆಗಿದೆ.. ಜೊತೆಗಿರೋದು ಮಗ ಅಂದ್ರೂ ಜನ ನಂಬೋ ಸ್ಥಿತಿಯಲ್ಲಿಲ್ಲ..!
ಇವರ ಹದಿಜೆನಟಿಕ್ಸ್ ಅನ್ನೋ ಯೂ ಟ್ಯೂಬ್ ಚಾನೆಲ್‍ಗೆ 2.5 ಲಕ್ಷಕ್ಕೂ ಹೆಚ್ಚಿನ ಫಾಲೋವರ್ಸ್‍ಗಳಿದ್ದಾರೆ. 50 ವರ್ಷ ದಾಟಿದರೂ 20ರ ಯುವತಿಯರೇ ನಾಚುವಂತಿರೋ ಇವರಿಗೆ ತಾನು ಇಷ್ಟೊಂದು ಚಿಕ್ಕವಳಂತೆ ಕಾಣೋದು ತುಂಬಾ ಇಷ್ಟವಾಗಿದೆಯಂತೆ. ವಯಸ್ಸದಂತೆ ಯಂಗ್ ಆಗಿರುವಂತೆ ಕಾಣುತ್ತೇನೆ ಅಂತ ಜನ ಹೇಳುವಾಗ ಇವರಿಗಾಗೋ ಸಂತೋಷಕ್ಕೆ ಪಾರವೇ ಇಲ್ಲ. ಆರೋಗ್ಯಕರ ಆಹಾರವೇ ಇವರ ಆರೋಗ್ಯದ ಗುಟ್ಟಂತೆ..!