ಬೆಂಗಳೂರಿನ ಜೆಪಿ ನಗರ ಪಾರ್ಕ್ ನಲ್ಲಿ ಕಾಮುಕನೊಬ್ಬ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಪೊಲೀಸರ ಅತಿಥಿಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಫೆಬ್ರವರಿ 21ರಂದು ಗೃಹಿಣಿಯೊಬ್ಬರು ಬೆಳಗ್ಗೆ 11.30ರ ಸುಮಾರಿಗೆ ಪಾರ್ಕ್ ನ ಒಳಭಾಗದಲ್ಲಿ ವಾಯುವಿಹಾರ ಮಾಡುತ್ತಿದ್ದರು.
ಈ ವೇಳೆ ಆರೋಪಿ ಶ್ಯಾಮ್ ಬಂದು ಏಕಾಏಕಿ ಅವರ ಕೈಹಿಡಿದು ಪೊದೆಯೊಳಗೆ ಎಳೆದುಕೊಂಡು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಸಾರ್ವಜನಿಕರು ಮಹಿಳೆಯ ರಕ್ಷಣೆಗೆ ದೌಡಾಯಿಸಿ ಆರೋಪಿಗೆ ಹಿಗ್ಗಾಮುಗ್ಗ ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಶ್ಯಾಮ್ ಪೊಲೀಸರ ಅತಿಥಿಯಾಗಿದ್ದಾನೆ.







