ತಮಿಳುನಾಡಿಗೆ ನೀರು ಬಿಡಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಹಿನ್ನಲೆಯಲ್ಲಿ ಮೈಸೂರು- ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನಾಕಾರರ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತಿದ್ದು ನಾಳೆ ಸೆ. 9ರಂದು ಕರೆ ನೀಡಿರುವ ಕರ್ನಾಟಕ ಬಂದ್‍ಗೆ ನಾನಾ ಕಡೆಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ನಾಳೆ ಪ್ರತಿಭಟನೆಯ ಮುನ್ನಚ್ಚರಿಕಾ ಕ್ರಮವಾಗಿ ಸರ್ಕಾರ ಬಿಗಿ ಬಂದೋಬಸ್ತ್ ಏರ್ಪಡಿಸಲಾಗುತ್ತಿದೆ. ಈಗಾಗಲೇ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಪ್ರತಿಭಟನೆಯ ಕಾವು ಹೆಚ್ಚಾಗಿದ್ದು, ಸತತ ಮೂರು ದಿನಗಳಿಂದ ಈ ಭಾಗದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
ನಾಳೆ ಕರ್ನಾಟಕ ಬಂದ್‍ಗೆ ವಾಹನ ಚಾಲಕರು ಮತ್ತು ಮಾಲಿಕರು, ರಾಜ್ಯ ಚಲನಚಿತ್ರ ಮಂಡಳಿ, ಕೇಬಲ್ ನೆಟ್‍ವರ್ಕ್ ಮಾಲಿಕರು, ಆಟೋ ಚಾಲಕರ ಸಂಘ ಹಾಗೂ 900ಕ್ಕೂ ಅಧಿಕ ಕನ್ನಡ ಪರ ಸಂಘಟನೆಗಳು ಬಂದ್‍ಗೆ ಬೆಂಬಲ ವ್ಯಕ್ತಪಡಿಸಿರುವ ಹಿನ್ನಲೆಯಲ್ಲಿ ಸಾರಿಗೆ ಸಂಚಾರ ಬಂದ್ ಆಗುವ ಸಂಭವವಿದೆ. ಬಂದ್‍ಗೆ ಪೆಟ್ರೋಲ್ ಬಂಕ್ ಮಾಲಿಕರೂ ಬೆಂಬಲ ಸೂಚಿಸಿದ್ದು, ಅಗತ್ಯ ವಸ್ತುಗಳು ಹೊರತುಪಡಿಸಿ ಸಾರಿಗೆ ಬಸ್, ಟ್ಯಾಕ್ಸಿ, ಪೆಟ್ರೋಲ್ ಬಂಕ್, ಅಂಗಡಿ, ಮಾಲ್ ಹಾಗೂ ಚಿತ್ರ ಮಂದಿರಗಳು ಸಂಪೂರ್ಣ ಬಂದ್ ಆಗಲಿದೆ. ಬೆಳಿಗ್ಗೆ 6 ರಿಂದ ಆರಂಭವಾಗುವ ಮುಷ್ಕರ ಸಂಜೆ 6ರ ವರೆಗೆ ನಡೆಯಲಿದೆ.
POPULAR STORIES :
ರಕ್ತದಲ್ಲಿ ಕಾವೇರಿ ಎಂದು ಬರೆದುಕೊಂಡ ಕರವೇ ಕಾರ್ಯಕರ್ತ..!
ಕಾವೇರಿ ಎಫೆಕ್ಟ್: ರಸ್ತೆಯಲ್ಲಿ ಅಡುಗೆ ಮಾಡಿಕೊಂಡ ಪ್ರತಿಭಟನಾಕಾರರು..!
ಶುಕ್ರವಾರ ತಮಿಳು ಚಾನೆಲ್ಸ್ ಬಂದ್…!
ಇನ್ಮುಂದೆ ಡ್ರೈವ್ ಮಾಡಲು ಡಿಎಲ್,ಆರ್‍ಸಿ, ಡಿಜಿಲಾಕರ್‍ನಲ್ಲಿದ್ದರೆ ಸಾಕು..!