ಪಿಎಫ್ ಐ ಕಾರ್ಯಕರ್ತರು ಪ್ರತಿಭಟನೆ

Date:

ಬೆಂಗಳೂರಿನಲ್ಲಿರುವ ಪಿಎಫ್‌ಐ ನ್ಯಾಷನಲ್ ಸೆಕ್ರೆಟರಿ ನಿವಾಸದ ಮೆಲೆ ಎನ್‌ಐಎ ದಾಳಿ ಮಾಡಿರುವ ಹಿನ್ನೆಲೆ ಪಿಎಫ್ ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪುಲಿಕೇಶಿನಗರ ಪಿಎಫ್ ಐ ಕಚೇರಿ ಮುಂದೆ ಐವತ್ತು ಹೆಚ್ಚು ಜನರಿಂದ ಪ್ರತಿಭಟನೆ ನಡೆಸಿದ್ದು, ಗೋ ಬ್ಯಾಕ್ ಎನ್ ಐ ಎ ಎಂದು ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಇನ್ನೂ ಭಯೋತ್ಪಾದಕ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿರುವ ಗಂಭೀರ ಆರೋಪಗಳ ಮೇರೆಗೆ ಮಂಗಳೂರು, ಬೆಂಗಳೂರು ಸೇರಿದಂತೆ ಪಿಎಫ್‌ಐನ ಎಂಟು ನಾಯಕರ ನಿವಾಸ ಹಾಗೂ ಕಚೇರಿಗಳಲ್ಲಿ ಪರಿಶೀಲನೆ ನಡೆಯುತ್ತಿದೆ. ಬೆಂಗಳೂರಿನ ರಿಚ್​ಮಂಡ್ ರಸ್ತೆಯಲ್ಲಿ ಅಪಾರ್ಟ್​ಮೆಂಟ್​ವೊಂದರಲ್ಲಿ ವಾಸವಾಗಿರುವ ಪಿಎಫ್‌ಐ ರಾಷ್ಟ್ರೀಯ ಕಾರ್ಯದರ್ಶಿ ಮೊಹಮ್ಮದ್ ಸಾಕಿಬ್, ಪಾದರಾಯನಪುರದಲ್ಲಿ ವಾಸವಾಗಿರುವ ಪಿಎಫ್​ಐ ರಾಜ್ಯ ಘಟಕದ ಅಧ್ಯಕ್ಷ ನಾಸೀರ್ ಪಾಷಾ, ಪುಲಕೇಶಿನಗರ, ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ವಾಸವಾಗಿರುವ ಸಂಘಟನೆಯ ಇತರೆ ಸದಸ್ಯರ ಮನೆಗಳ ಮೇಲೆ ದಾಳಿ ಮಾಡಿರುವ ಎನ್‌ಐಎ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ. ಈ ಹಿನ್ನೆಲೆ ಪಿಎಫ್ ಐ ಕಾರ್ಯಕರ್ತರು NIA ದಾಳಿ ಖಂಡಿಸಿ ಪ್ರತಿಭಟನೆ ಮಾಡಿದ್ದಾರೆ.

Share post:

Subscribe

spot_imgspot_img

Popular

More like this
Related

ಐಪಿಎಲ್ 2026 ಹಿನ್ನೆಲೆ: ಮೆಟ್ರೋ ಸೇವೆ ರಾತ್ರಿ 2ರವರೆಗೆ ವಿಸ್ತರಣೆ

ಐಪಿಎಲ್ 2026 ಹಿನ್ನೆಲೆ: ಮೆಟ್ರೋ ಸೇವೆ ರಾತ್ರಿ 2ರವರೆಗೆ ವಿಸ್ತರಣೆ ಬೆಂಗಳೂರು: 2026ರ...

IPL ಆರಂಭಕ್ಕೂ ಮುನ್ನ CSK ಗೆ ಶಾಕ್: ಧೋನಿ ಆರಂಭಿಕ ಪಂದ್ಯಗಳಿಂದ ಔಟ್?

IPL ಆರಂಭಕ್ಕೂ ಮುನ್ನ CSK ಗೆ ಶಾಕ್: ಧೋನಿ ಆರಂಭಿಕ ಪಂದ್ಯಗಳಿಂದ...

ಇಂಧನ ಕೊರತೆ ಇಲ್ಲ, ದೇಶದಲ್ಲಿ ಲಾಕ್‌ ಡೌನ್ ಇಲ್ಲ: ಕೇಂದ್ರ ಸಚಿವರ ಸ್ಪಷ್ಟನೆ

ಇಂಧನ ಕೊರತೆ ಇಲ್ಲ, ದೇಶದಲ್ಲಿ ಲಾಕ್‌ ಡೌನ್ ಇಲ್ಲ: ಕೇಂದ್ರ ಸಚಿವರ...

ತೈಲಬೆಲೆ ಇಳಿಕೆ; ಭಾರತ ಸರ್ಕಾರ ಕೊಲೆ ಮಾಡುತ್ತಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

ತೈಲಬೆಲೆ ಇಳಿಕೆ; ಭಾರತ ಸರ್ಕಾರ ಕೊಲೆ ಮಾಡುತ್ತಿದೆ: ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಗಳೂರು:ಭಾರತ...