ಉರಿ ದಾಳಿ ಪ್ರತಿಕಾರವಾಗಿ ನಮ್ಮ ಸೈನಿಕರು ನಡೆಸಿದ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆಯ ನಂತರ ಭಾರತೀಯ ಸೈನಿಕರು ಮನಸ್ಸು ಮಾಡುದ್ರೆ ಯಾವುದೂ ಅಸಾಧ್ಯ ಅಲ್ಲ ಅಂತ ಪಾಕ್‍ಗೆ ಎಚ್ಚರಿಕೆ ಸಂದೇಶ ನೀಡುತ್ತಿದ್ದಂತೆಯೇ ಇದೀಗ ಪಾಕ್ ಸೈನಿಕರು ಭಾರತದ ವಿರುದ್ದ ಕೆಂಡ ಉಗುಳುತ್ತಿದ್ದಾರೆ. ಅಷ್ಟೇ ಅಲ್ಲ ಉಭಯ ರಾಷ್ಟ್ರಗಳ ಗಡಿ ಭಾಗಗಳಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವ ಜೊತೆಯಲ್ಲೇ ಈಗ ಮತ್ತೊಂದು ಎಚ್ಚರಿಕೆಯ ಸಂದೇಶ ಭಾರತೀಯ ಸೈನಿಕರನ್ನು ಕೆರಳಿಸಿದೆ. ಪಾಕ್ ಗಡಿ ಭಾಗದಿಂದ ಬಂದ ಪಾರಿವಾಳವೊಂದು ಭಾರತೀಯ ಸೈನಿಕರಿಗೆ ಸಿಕ್ಕಿದ್ದು ಅದರ ಕಾಲಿಗೆ ಒಂದು ಎಚ್ಚರಿಕೆಯ ಪತ್ರವನ್ನು ಬರೆದು ಕಳುಹಿಸಲಾಗಿದೆ. ಬಮಿಯಾಲ್ ಸೆಕ್ಟಾರ್‍ನ ಸಿಂಬಾಲ್ ಠಾಣೆಯಲ್ಲಿ ಗಡಿ ಭದ್ರತಾ ಪಡೆಗಳ ವಶದಲ್ಲಿರುವ ಈ ಪಾರಿವಾಳ ಜೊತೆ ಉರ್ದುವಿನಲ್ಲಿ ಬರೆಯಲ್ಪಟ್ಟ ಸಂದೇಶವೊಂದು ಪ್ರಧಾನಿ ಮೋದಿ ಅವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮೋದಿಜೀ 1971 (ಇಂಡೋ ಪಾಕ್ ಯುದ್ದ ಸಂದರ್ಭ)ರಲ್ಲಿದ್ದ ಜನರು ಈಗಿರೋದು ಅಂತ ತಿಳ್ಕೊಳ್ಬೇಡಿ. ಈಗ ನಾವು ಸಾಕಷ್ಟು ಬಲಿಷ್ಟರಾಗಿದ್ದೇವೆ. ಈಗ ನಾವೆಲ್ಲಾ ನಿಮ್ಮ ವಿರುದ್ಧ ಹೋರಾಡಲು ಸಿದ್ದರಾಗಿದ್ದೇವೆ ಎಂದು ಸಂದೇಶದಲ್ಲಿ ಬರೆಯಲಾಗಿತ್ತು. ಇನ್ನು ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಅತ್ತಾರಿ ಗಡಿಯಲ್ಲಿ ಪ್ರತಿ ದಿನ ನಡೆಯುವ ಮುಸ್ಸಂಜೆ ಸ್ನೇಹ ಕವಾಯತುವಿನ ವೇಳೆ ಪಾಕ್ ಪ್ರಜೆಗಳು ಭಾರತ ಗ್ಯಾಲರಿಗಳತ್ತ ಕಲ್ಲು ತೂರಾಟ ನಡೆಸಿದ ಘಟನೆಯೂ ನಡೆದಿದೆ. ವಿಐಪಿ ಗ್ಯಾಲರಿಗಳಿಗೆ ಕಲ್ಲು ಬಂದು ಬಿದ್ದಿದ್ದು ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಇನ್ನು ಅಲ್ಲಿದ್ದ ಪಾಕಿಸ್ತಾನಿ ಪ್ರಜೆಗಳು ಭಾರತದ ವಿರುದ್ದ ಘೋಷಣೆಗಳನ್ನು ಕೂಗುತ್ತಿದ್ರು ಎನ್ನಲಾಗಿದೆ.
Like us on Facebook The New India Times
POPULAR STORIES :
24ರ ಹರೆಯದ ಯುವತಿ 68ರ ತಾತನ ಅಚ್ಚರಿಯ ಜುಗಲ್‍ಬಂಧಿ…!
ಲೋಧಾ ಶಿಫಾರಸ್ಸು ಉಲ್ಲಂಘನೆ: 3ನೇ ಟೆಸ್ಟ್ ಪಂದ್ಯ ನಡೆಯೋದು ಬಹುತೇಕ ಡೌಟ್..?
ಪಾಕ್ ವಿರುದ್ದದ ಆನ್ಲೈನ್ ಅರ್ಜಿಯನ್ನು ಆರ್ಕೈವ್ ಪಟ್ಟಿಗೆ ಹಾಕಿ ತನ್ನ ದ್ವಂದ್ವ ನಿಲುವು ಪ್ರದರ್ಶಿದ ಅಮೇರಿಕಾ..!
ಚೆನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿರೋ ಜಯಲಲಿತಾ ಈಗ ಹೇಗಿದ್ದಾರೆ?
ಸಲ್ಮಾನ್, ಶಾರುಖ್, ಅಮೀರ್ ಖಾನ್ ಪಾಕಿಸ್ತಾನಕ್ಕೆ ಹೋಗಲಿ : ಸಾದ್ವಿ ಪ್ರಾಚಿ
ಮಹಾಜನಗಳೇ.. ದಸರಾಗೆ ಹೋಗಿ ‘ಆಕಾಶ ಅಂಬಾರಿ’ಯಲ್ಲಿ..!
ವ್ಯಕ್ತಿಯೋರ್ವನ ನಸೀಬು ಬದಲಾಯಿಸಿದ ವಾಂತಿ..!
ಈ ಕ್ರೂರ ಮುಖದ ಶಿಕ್ಷಕನ ಶಿಕ್ಷೆ ನೋಡುದ್ರೆ ನೀವೇ ದಂಗಾಗಿ ಹೋಗ್ತೀರಾ..!