ಭಾರತೀಯ ಸಂಸ್ಕ್ರತಿಯಲ್ಲಿ ಹತ್ತಾರು ಆಚರಣೆಗಳು , ಸಂಪ್ರದಾಯಗಳಿವೆ. ಪ್ರತಿಯೊಂದು ಆಚರಣೆಗಳಿಗೂ ತನ್ನದೇ ಆದ ಪ್ರಾಮುಖ್ಯತೆ ಇದೆ.
ಇಂಥಾ ಆಚರಣೆಗಳಲ್ಲಿ ಪಿತೃಪಕ್ಷದಲ್ಲಿ ಕಾಗೆಗೆ ಊಟ ನೀಡುವುದು ಕೂಡ ಒಂದು.
ನಮ್ಮ ಪೂರ್ವಿಕರಿಗೆ ಸಮಾಧಾನ ಪಡಿಸುವ ಉದ್ದೇಶದಿಂದ ಭಾದ್ರಪದ ತಿಂಗಳಿನ ಪ್ರತಿವರ್ಷ ಪಿತೃಪಕ್ಷ ಆಚರಿಸಲಾಗುತ್ತದೆ. ಪೂರ್ಣ ಚಂದ್ರೋದಯದಂದು ಇದು ಆರಂಭವಾಗುತ್ತದೆ.
ಅತೃಪ್ತಿಯಿಂದ ಮರಣವನ್ನಪ್ಪಿದ ಪೂರ್ವಿಕರಿಗೆ ಸಮಾಧಾನ ಮಾಡಿ, ಊಟ ಬಡಿಸಲಾಗುತ್ತದೆ. ಕಾರ್ಯಮಾಡಿ, ಆಹಾರವನ್ನು ಬಾಳೆ ಎಲೆಯಲ್ಲಿಟ್ಟು ಕಾಗೆಗೆ ಉಣಬಡಿಸಿತ್ತಾರೆ.
ಕಾಗೆ ಬಂದು ಆಹಾರ ತಿಂದಲ್ಲಿ ನಾವು ಮಾಡಿರೋದು ನಮ್ಮ ಪೂರ್ವಿಕರಿಗೆ ತೃಪ್ತವಾಗಿದೆ ಎಂದು ಅರ್ಥ. ಕಾಗೆ ಬಂದು ತಿನ್ನದೇ ಇದ್ದರೆ ಅದು ಪೂರ್ವಿಕರಿಗೆ ಸಮಾಧಾನ ಆಗಿಲ್ಲ ಎಂಬ ನಂಬಿಕೆ ಇದೆ.
ಅಗಲಿದೆ ಹಿರಿಯರಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿ, ಆಹಾರ ನೀಡಿ ನೆನೆಯುವುದು ಈ ಪಿತೃಪಕ್ಷದ ಉದ್ದೇಶ.
ಈ ವರ್ಷ ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 8ರವರೆಗೆ ಪಿತೃಪಕ್ಷ ಇರಲಿದೆ.