ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ‘ಆಪರೇಷನ್ ತ್ರಿಬಲ್ ರೈಡಿಂಗ್’ ಶುರುವಾಗಿದೆ. ಬೈಕ್ಗಳಲ್ಲಿ ತ್ರಿಬಲ್ ರೈಡ್ ಮಾಡುವವರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆ ಪೊಲೀಸರು ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಡಿಸಿಪಿ ಗೀತಾ ಪ್ರಸನ್ನ ಮಾರ್ಗದರ್ಶನದಲ್ಲಿ ನವೆಂಬರ್ 20 ರಿಂದ 28ರವರೆಗೆ ತ್ರಿಬಲ್ ರೈಡ್ ಕಾರ್ಯಾಚರಣೆ ನಡೆಯಲಿದೆ. ಮೊದಲ ದಿನವೇ ಪೊಲೀಸರು 150 ಪ್ರಕರಣಗಳನ್ನ ದಾಖಲಿಸಿದ್ದಾರೆ. ಇನ್ನ ದ್ವಿಚಕ್ರ ವಾಹನದಲ್ಲಿ ಮೂವರು ಪ್ರಯಾಣಿಸೋದು ಕಾನೂನು ಉಲ್ಲಂಘನೆ.
ಬೈಕ್ಗಳಲ್ಲಿ ತ್ರಿಬಲ್ ರೈಡ್ ಮಾಡುವವರನ್ನು ಹಿಡಿದು ದಂಡ ಹಾಕುವಂತೆ ಮೈಸೂರು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಸೂಚನೆ ನೀಡಿದ್ದಾರೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ‘ಆಪರೇಷನ್ ತ್ರಿಬಲ್ ರೈಡಿಂಗ್’
Date: