ಬೆಳೆವ ಸಿರಿ ಮೊಳಕೆಯಲ್ಲಿ
ಅನ್ನೋಹಾಗೆ ಸಂಸ್ಕಾರ ಒಂದು ಉತ್ತಮವಾಗಿದ್ರೆ ಆ ಮಕ್ಕಳು ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗೊದ್ರಲ್ಲಿ ಯಾವುದೇ ಸಂದೇಹವಿಲ್ಲ . ಅದಕ್ಕೆ ಉತ್ತಮ ಉದಾಹರಣೆಯೊಂದು ಇಲ್ಲಿದೆ .
ಮುಖ್ಯಪೇದೆ ನಾಗರಾಜಪ್ಪ
ಒಬ್ಬ ನಿಷ್ಠಾವಂತ ಪೊಲೀಸಪ್ಪನ ಮಗಳು ಹೌದು, ಬೆಂಗಳೂರಿನ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಮುಖ್ಯಪೇದೆ ನಾಗರಾಜಪ್ಪಾ ಅವರ ಮಗಳ ಕತೆ ಇದು .
ಮುಖ್ಯಪೇದೆ ಮಗಳು ನಾಗಲಕ್ಷ್ಮಿ
ನಾಗರಾಜಪ್ಪ ಎನ್ ಹೊಸದುರ್ಗ ಮೂಲದವರು . ಅವರ ಮಗಳು ನಾಲ್ಕನೇ ತರಗತಿ ವ್ಯಾಸಂಗ ಮಾಡುತ್ತಿರುವ ನಾಗಲಕ್ಷ್ಮಿ ಇವತ್ತಿನ ಮೈನ್ ಅಟ್ರ್ಯಾಕ್ಷನ್. ನಾಗಲಕ್ಷ್ಮಿ ಅಂತದ್ದೇನು ಮಾಡಿದ್ದಾಳೆ ಅಂದ್ರೆ ಶಿವಮೊಗ್ಗದ ಜ್ಞಾನದೀಪ ಶಾಲೆಯಲ್ಲಿ ಓದುತ್ತಿರೋ ನಾಗಲಕ್ಷ್ಮಿ , ಮನೆಕಡೆ ನಡೆದು ಬರ್ತಿದ್ದ ವೇಳೆ ಲೇಡಿಸ್ ಪರ್ಸ್ ಕಣ್ಣಿಗೆ ಕಾಣಿಸಿದೆ. ಅದು ಏನು ಅಂತ ನೋಡಿ ಬೆಂಗಳೂರಿನಲ್ಲಿದ್ದ ತಂದೆ ನಾಗರಾಜಪ್ಪರಿಗೆ ತಾಯಿಯ ಮುಖಾಂತರ ಕರೆ ಮಾಡಿಸಿದ್ದಾಳೆ . ಪೊಲೀಸ್ ಕೆಲಸದಲ್ಲಿರೋ ನಾಗರಾಜಪ್ಪ ಪರ್ಸನಲ್ಲಿ ಯಾವುದಾದ್ರು ಅಡ್ರೆಸ್ ಇದ್ಯಾ ಎಂದು ಕೇಳಿದ್ದಾರೆ .
ಪರ್ಸನ್ನ ಮಂಜುಳಾರವರ ಸಂಬಂಧಿ
ಅದರಂತೆ ಪರ್ಸ್ ನಲ್ಲಿ ಸಿಕ್ಕ ಗೌರಿ ಎಂಬ ಹೆಸರು ಬರೆದಿರೋ ಸ್ಕೂಲ್ ಫೀಸ್ ರಿಸಿಪ್ಟ್ ಹಿಡಿದು ಫೋನ್ ಮಾಡಲಾಗಿದೆ . ಈ ವೇಳೆ ಆ ರಿಸಿಪ್ಟ್ ಸೈಂಟ್ ಜೋಸೆಫ್ ಸ್ಕೂಲಿನದ್ದು ಎಂಬುದು ಖಚಿತವಾಗಿತ್ತು.
ನಂತರ ವಿದ್ಯಾರ್ಥಿನಿ ಗೌರಿಯ ಪೋಷಕರಾದ ಮಂಜುಳಾ ಎಂಬರಿಗೆ ಕರೆ ಮಾಡಿ ಕಳೆದುಕೊಂಡಿದ್ದ ಪರ್ಸ್ ಬಗ್ಗೆ ತಿಳಿಸಿದ್ದರು ಪೊಲೀಸಪ್ಪ ನಾಗರಾಜ್. ಕಳೆದುಹೋದ ಪರ್ಸ್ ನಲ್ಲಿ ಮೂರು ಹೆಲ್ತ್ ಕಾರ್ಡ್, ಎರಡು ಎಟಿಎಂ ಹಾಗೂ ಎರಡುವರೆಸಾವಿರ ಹಣವಿತ್ತಂತೆ.
ಇಲ್ಲಿ ಹಣ,ವಸ್ತುವಿನ ಎಷ್ಟಿತ್ತು ಎಂಬುದರ ವಿಚಾರವಲ್ಲ. ಅಪ್ಪ ಕಳ್ಳತನವಾದ ವಸ್ತುಗಳನ್ನ ಹುಡುಕಿ ಕೊಡೋ ನಿಷ್ಠಾವಂತ ಪೊಲೀಸ್. ಆ ಅಪ್ಪನ ಪೊಲೀಸ್ ವ್ಯಕ್ತಿತ್ವ ಅರಿತ ಮಗಳೂ ತಂದೆಯ ಹಾದಿಯಲ್ಲಿ ಸಾಗುತ್ತಿರುವ ಹೆಮ್ಮೆಯ ಪೊಲೀಸ್ ಮಗಳು .