ಬಾತ್ ರೂಂನಲ್ಲಿ, ಬೆಡ್ ರೂಂನಲ್ಲಿ, ಇಂಟರ್ ನೆಟ್ ಕೆಫೆಗಳಲ್ಲಿ ಎಲ್ಲೆಂದರಲ್ಲಿ ಹಿಡನ್ ಕೆಮೆರಾ ಇಟ್ಟು ಕದ್ದು ಮುಚ್ಚಿ ಅಶ್ಲೀಲ ದೃಶ್ಯಗಳನ್ನು ಸೆರೆ ಹಿಡಿಯುವುದರಿಂದ ಹಿಡಿದು ಅವಕಾಶ ಸಿಕ್ಕಾಗೆಲ್ಲಾ ಅಶ್ಲೀಲ ದೃಶ್ಯಾವಳಿಗಳನ್ನು ಕದ್ದುಮುಚ್ಚಿ ಸೆರೆ ಹಿಡಿಯುವ ಮಹಾನ್ ಹರಾಮಿಗಳ ವಿರುದ್ಧ ಮೊದಲಿಗೆ ಗರಂ ಆಗಿದ್ದು, ಹೈದ್ರಾಬಾದ್ ಮೂಲದ ಎನ್.ಜಿ.ಓ.
ಬೇಕಾದ್ರೇ ಗೂಗಲ್ ನಲ್ಲಿ ಪರೀಕ್ಷಿಸಿ ನೋಡಿ, ಯಾವುದಾದರೂ ಲೈಂಗಿಕ ವಿಚಾರಗಳನ್ನು ತಿಳಿದುಕೊಳ್ಳಲು ಅದಕ್ಕೆ ಸಂಬಂಧಪಟ್ಟ ಶಬ್ಧಗಳಲ್ಲಿ ಹುಡುಕಿ ನೋಡಿ, ಕೂಡಲೇ ಒಂದಷ್ಟು ಎಕ್ಸ್ ಕ್ಲೂಸಿವ್ ಹೆಸರಿನಲ್ಲಿ ಎಂಎಂಎಸ್ ಸ್ಕ್ಯಾಂಡಲ್ ಗಳು, `ನಮ್ಮನ್ನು ತೆರೆಯಿರಿ.. ನಮ್ಮನ್ನು ತೆರೆಯಿರಿ’ ಎಂದು ಹಾವಳಿಯಿಡುತ್ತದೆ. ಯಾರೇ ಆದರೂ ಕುತೂಹಲಕ್ಕಾದರೂ ಆ ವೆಬ್ ಸೈಟನ್ನು ಓಪನ್ ಮಾಡುತ್ತಾರೆ. ಅಲ್ಲಿ ಲಕ್ಷಾಂತರ ಎಂಎಂಎಸ್ ಕ್ಲಿಪ್ಪಿಂಗ್ ಗಳು ಇಟ್ಟಾಡುತ್ತವೆ. ಎಷ್ಟರಮಟ್ಟಿಗೆ ಯಾವೆಲ್ಲಾ ವೆರೈಟಿಯಲ್ಲಿ ಎಂಎಂಎಸ್ ಗಳು ಅಲ್ಲಿ ಸಿಗುತ್ತವೆಂದರೇ ಪರಮ ಅಸಹ್ಯವನ್ನು ಮೂಡಿಸುತ್ತದೆ. ಪಡ್ಡೆಗಳಿಗೆ ಮಾತ್ರ ಅದು ಮೃಷ್ಟಾನ್ನ ಸವಿದಷ್ಟೇ ಸೊಗಸು. ವೀವರ್ಸ್ ಗಳು ಹೆಚ್ಚಾದಷ್ಟು ಇನ್ಕಂ ದುಪ್ಪಟ್ಟಾಗುತ್ತದೆ. ಆ ತೆರನಾದ ವೆಬ್ ಸೈಟ್ ಗಳು ಎಷ್ಟಿವೆ ಅಂತ ಹುಡುಕಿದ್ರೇ- ಅದರ ಸಂಖ್ಯೆಯೇ ಲಕ್ಷವನ್ನು ಮೀರುತ್ತದೆ.
ಅಷ್ಟಕ್ಕೂ ಇಂತಹ ವಿಡಿಯೋಗಳನ್ನು ಸೆರೆ ಹಿಡಿಯುವ ಬಗೆ ಹೇಗೇ ಇರಲಿ, ಅದನ್ನು ಅಂತರ್ಜಾಲಕ್ಕೆ ಹಾಕಿ ದೊಡ್ಡ ಮಟ್ಟದ ಕ್ರೈಂ ಮಾಡುತ್ತಿರುವವರು ಯಾರು? ಹೀಗೊಂದು ಪ್ರಶ್ನೆ ಮೂಡುತ್ತದೆ. ಮೂಡಲೇಬೇಕು. ಯಾಕಂದ್ರೆ ಯಾವುದೇ ವಿಡಿಯೋ ಅಂತಾರ್ಜಾಲಕ್ಕೆ ಅಪ್ ಲೊಡ್ ಆದ ಮೇಲೇಯೇ ಅದು ಜಗತ್ತಿನಾದ್ಯಂತ ಸದ್ದು ಮಾಡುತ್ತದೆ. ವೀವರ್ಸ್ ಗಳನ್ನು ಹೆಚ್ಚಿಸಿಕೊಳ್ಳುತ್ತದೆ. ಕೆಲವರು ಇಂತಹ ಕೆಲಸಕ್ಕೆ ಸೀಮಿತವಾಗಿದ್ದಾರೆ. ಅಶ್ಲೀಲ ವಿಡಿಯೋಗಳನ್ನು ಕಲೆ ಹಾಕುವುದೇ ಅವರ ವೃತ್ತಿ, ಪ್ರವೃತ್ತಿಯಾಗಿರುತ್ತದೆ. ಈ ಅಶ್ಲೀಲ ತಾಣದಲ್ಲಿ ಇರುವ ಇನ್ಕಂ ಬಗ್ಗೆ ಅವ್ರಿಗೆ ಸಂಪೂರ್ಣ ಸ್ಟಡಿ ಇರುವುದರಿಂದ, ಖುದ್ದಾಗಿ ಅಂತಹ ವಿಡಿಯೋ ಚಿತ್ರೀಕರಣಕ್ಕೆ ಮುಂದಾಗುತ್ತಾರೆ. ಅದಕ್ಕೆ ಟೀಂ ರೆಡಿ ಮಾಡುತ್ತಾರೆ. ಕೆಲವು ಕಡೆ ವೃತ್ತಿಪರರನ್ನೇ ಎಂಎಂಎಸ್ ರೂಪದಲ್ಲಿ ಬಳಸಿಕೊಳ್ಳಲಾಗುತ್ತದೆ. ತೀರಾ ನ್ಯಾಚುರಲ್ ಎನಿಸುವಂತೆ ಚಿತ್ರೀಕರಣ ನಡೆಸುತ್ತಾರೆ. ಅದಕ್ಕೆ, ಗುಪ್ತ ಕೆಮೆರಾ, ಮೊಬೈಲ್ ಕೆಮೆರಾಗಳನ್ನು ಬಳಸುತ್ತಾರೆ.
ತೀರಾ ಕೈಗೆ ಸಿಗುವ ವಸ್ತುವಿಗಿಂತ ಸಿಗದೇ ಇರುವ ವಸ್ತುವಿನ ಕಡೆ ಮನಸು ಹೆಚ್ಚಾಗಿ ವಾಲುತ್ತದೆ. ಎ ಗ್ರೇಡ್, ಎರೋಟಿಕ್ ಸಿನಿಮಾಗಳಿಗಿಂತ ಕದ್ದುಮುಚ್ಚಿ ಮಾಡಿದ ಅಶ್ಲೀಲ ವಿಡಿಯೋಗಳತ್ತ ಪಡ್ಡೆಗಳು ಹೆಚ್ಚು ಆಕಷರ್ಿತರಾಗುತ್ತಾರೆ. ಹಾಗಾಗಿ ಅದನ್ನೆ ಎನ್ ಕ್ಯಾಶ್ ಮಾಡಿಕೊಂಡು ಇಂಥ ವಿಡಿಯೋಗಳನ್ನು ಚಿತ್ರೀಕರಿಸಿ, ನಿಷೇಧಿತ ವೆಬ್ ಸೈಟ್ ಲಿಂಕನ್ನು ಕುದುರಿಸಿಕೊಂಡು ಅವರ ಜೊತೆ ವ್ಯವಹಾರಕ್ಕಿಳಿಯುತ್ತಾರೆ. ವಿಡಿಯೋ ಅಪ್ಲೋಡ್ ಆಗತೊಡಗುತ್ತದೆ. ಸವಿವರವಾಗಿ ಹೇಳುವುದಾದರೇ ಅದು ದೊಡ್ಡ ಮಟ್ಟದ ಡೀಲಿಂಗ್. ಕೋಟಿಗಳ ಲೆಕ್ಕಾಚಾರ.
ಹೈದ್ರಾಬಾದ್ ಮೂಲದ ಎನ್.ಜಿ.ಓ, ಅಂತಾರ್ಜಾಲದಲ್ಲಿ ವ್ಯಾಪಕವಾಗಿ ಇಟ್ಟಾಡುತ್ತಿದ್ದ ಅಶ್ಲೀಲ ಎಂಎಂಎಸ್ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ಒತ್ತಾಯಿಸಿ ಸುಪ್ರಿಂ ಕೋರ್ಟ್ ಗೆ ಕೆಲ ತಿಂಗಳ ಹಿಂದೆ ಪತ್ರ ಬರೆದಿತ್ತು. ಒಂಬತ್ತು ಅಶ್ಲೀಲ ಚಿತ್ರಗಳ ಪೆನ್ ಡ್ರೈವ್ ಅನ್ನು ಕೋಟರ್್ಗೆ ಒದಗಿಸಿತ್ತು. ಸುಪ್ರಿಂ ಕೋರ್ಟ್ ನ್ಯಾಯಾಧೀಶ ದತ್ತು ಆ ಪತ್ರವನ್ನು ಗಂಭೀರವಾಗಿ ಪರಿಗಣಿಸಿ, ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ತನಿಖೆ ನಡೆಸುವಂತೆ ಸಿಬಿಐಗೆ ಆದೇಶ ನೀಡಿದ್ದರು. ಬೆಂಗಳೂರಿನ ಸಿಸಿಬಿ ಅಧಿಕಾರಿಗಳು ಸುಪ್ರಿಂ ಕೋರ್ಟ್ ಆದೇಶದ ಅನುಸಾರ ತನಿಖೆ ನಡೆಸಿತ್ತು. ಸಿಬಿಐ ಅಧಿಕಾರಿಗಳಿಗೆ ವಿಡಿಯೋ ಅಪ್ಲೋಡ್ ಆಗುತ್ತಿರುವ ಮೂಲ ಕಂಡುಹಿಡಿಯುವುದು ಭಾರೀ ಸವಾಲಾಗಿತ್ತು. ಯಾವುದೇ ವಿಡಿಯೋದಲ್ಲೂ ಎನ್.ಜಿ.ಓ ಒದಗಿಸಿದ ವಿಡಿಯೋದ ಅಶ್ಲೀಲ ದೃಶ್ಯಗಳಿರುವ ಘಟನೆಯ ಯುಆರ್ಎಲ್ ಪತ್ತೆಯಾಗಲಿಲ್ಲ.
ಆಧುನಿಕ ತಂತ್ರಜ್ಞಾನದ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡ ಸಿಬಿಐ ಅಧಿಕಾರಿಗಳ ತಂಡಕ್ಕೆ ಅದರ ಮೂಲ ಪತ್ತೆ ಹಚ್ಚುವುದು ಹೇಗೆಂದು ತಿಳಿಯದೇ ನಿಜಕ್ಕೂ ತಲೆ ಕೆಡಿಸಿಕೊಂಡರು. ಆಮೇಲೆ ಅವರು ಅತ್ಯಾಧುನಿಕ ಸೈಬರ್ ಫಾರೆನ್ಸಿಕ್ ಸಾಫ್ಟ್ವೇರ್ ಬಳಸಿ ಪ್ರಯತ್ನಿಸಿದ್ದಾರೆ. ಆ ಸಾಫ್ಟ್ ವೇರ್ ಅನ್ನು ಆ ಕಾರಣಕ್ಕೆ ಅವರೇ ಪತ್ತೆ ಹಚ್ಚಿದ್ದರು. ಈ ಪ್ರಯತ್ನದಲ್ಲಿ ಸಿಬಿಐ ಅಧಿಕಾರಿಗಳು ಯಶಸ್ವಿಯಾದರು. ಸೈಬರ್ ಫಾರೆನ್ಸಿಕ್ ಸಾಫ್ಟ್ವೇರ್ ಮೂಲಕ ಆ ಪೆನ್ಡ್ರೈವ್ನಲ್ಲಿದ್ದ ವಿಡಿಯೋಗಳ ಪೈಕಿ ಮೂರು ವಿಡಿಯೋಗಳು ಅಪ್ಲೋಡ್ ಮಾಡಿರುವುದು ಒರಿಸ್ಸಾ ಮೂಲದ ಕೌಶಿಕ್ ಎಂಬುದು ಗೊತ್ತಾಗಿತ್ತು. ಕೂಡಲೇ ಅವನನ್ನು ಟ್ರ್ಯಾಪ್ ಮಾಡಿ ಎತ್ತಾಕ್ಕೊಂಡು ಬಂದಿದ್ದರು. ಕೌಶಿಕ್ ಬಳಸುತ್ತಿದ್ದ ಇಂಟರ್ನೆಟ್ ಐಪಿ ಅಡ್ರೆಸ್ ಹಾಗೂ ಇಂಟರ್ನೆಟ್ ಸರ್ವೀಸ್ ಪ್ರೊವೈಡರ್ಗಳು ನೀಡಿದ ಮಾಹಿತಿಯಿಂದ ಅವನನ್ನು ಪತ್ತೆ ಹಚ್ಚುವುದು ಸುಲಭವಾಗಿತ್ತು. ಕೌಶಿಕ್ ಬೆಂಗಳೂರಿನ ಬಸವನಗುಡಿಯ ಮನೆಯಲ್ಲಿ ಕುಂತೇ ಈ ಕೆಲಸವನ್ನು ಮಾಡುತ್ತಿದ್ದ. ಅದಕ್ಕೆ ಬೇಕಾದ ಸಾಮಾಗ್ರಿಗಳನ್ನು ಶೇಖರಿಸಿಟ್ಟುಕೊಂಡಿದ್ದ. ವಿಡಿಯೋ ಅಪ್ಲೋಡ್ ಮಾಡಲು ಬೇಕಾದ ಎಲ್ಲಾ ಪರಿಕರಣಗಳು ಅವನ ಬಳಿಯಿತ್ತು. ವಿಡಿಯೋ ಎಡಿಟಿಂಗ್ ಸಾಫ್ಟ್ವೇರ್, ರಹಸ್ಯ ಕೆಮೆರಾ ಎಲ್ಲವೂ ಅವನ ಬಳಿಯಿತ್ತು.
ನಿಜಕ್ಕೂ ಅಶ್ಲೀಲ ಎಂಎಂಎಸ್ ಮಾಫಿಯಾ ಆತಂಕವನ್ನು ಸೃಷ್ಟಿ ಮಾಡುತ್ತದೆ. ಕೆಲವು ಇಂಟೆನ್ಶನ್ ಬಿಸಿನೆಸ್ಗಳಾದ್ರೆ, ಹಲವು ಎಂಎಂಎಸ್ ಗುಪ್ತವಾಗಿ ಚಿತ್ರೀಕರಣವಾಗಿದ್ದಾಗಿರುತ್ತದೆ. ಗೊತ್ತೋ ಗೊತ್ತಿಲ್ಲದೇ ಎಡವುವರ ತಪ್ಪುಗಳನ್ನು ಗುಪ್ತವಾಗಿ ಸೆರೆಹಿಡಿದು ಅದನ್ನು ಅಂತರ್ಜಾಲದಲ್ಲಿ ಅಪ್ ಲೋಡ್ ಮಾಡುವುದರಿಂದ ಅನೇಕರ ಬದುಕು ಬೀದಿಗೆ ಬಂದಿದೆ. ಎಷ್ಟೋ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ..!! ಹಾಗಂತ ಎಲ್ಲವೂ ಬೇರೆ ಯಾರೋ ಅಪ್ ಲೋಡ್ ಮಾಡ್ತಾರೆ ಅಂತಲ್ಲ. ಪ್ರೇಮಿಗಳು, ವೇಶ್ಯಾಗೃಹಕ್ಕೆ ತೆರಳುವವರು ಕದ್ದುಮುಚ್ಚಿ ವಿಡಿಯೋ ಮಾಡಿ ಅದನ್ನು ಸಾಮಾಜಿಕ ತಾಣ, ವಾಟ್ಸ್ಅಪ್ ಮುಂತಾದ ಕಡೆ ಹರಿದು ಹಂಚಿಬಿಡ್ತಾರೆ. ಒಂದರ್ಥದಲ್ಲಿ ಇದು ಮುಗಿದು ಹೋಗದ ಸಮಾಚಾರ.
ಅಶ್ಲೀಲ ಎಂಎಂಎಸ್ ಸ್ಕ್ಯಾಂಡಲ್ ಗಳನ್ನು ಕೇವಲ ಸೀಮಿತ ಖದೀಮರು ಮಾತ್ರ ಅಪ್ ಲೋಡ್ ಮಾಡೋದಿಲ್ಲ. ದುಡುಕುವ ಪ್ರೇಮಿಗಳು, ವೇಶ್ಯೆಯರ ಜೊತೆ ಸಂಗ ಮಾಡುವ ಕಿಡಿಗೇಡಿಗಳು ತಮ್ಮ ಜೀಕಾಟಗಳನ್ನು ರೆಕಾರ್ಡ್ ಮಾಡಿಕೊಂಡು ಅದನ್ನು ಅಂತರ್ಜಾಲಕ್ಕೆ ಅಪ್ಲೊಡ್ ಮಾಡುವ ಚಾಳಿಯನ್ನು ರೂಢಿಸಿಕೊಂಡಿದ್ದಾರೆ. ಕಾರಿನಲ್ಲಿ, ಬೈಕಿನಲ್ಲಿ, ಪಾರ್ಕ್ ನಲ್ಲಿ, ರೂಂನಲ್ಲಿ, ಹೋಟೆಲ್ನಲ್ಲಿ, ಬೆಟ್ಟದ ಸಂಧಿಗೊಂಧಿಗಳಲ್ಲಿ- ಎಲ್ಲೆಂದರಲ್ಲಿ ಇಟ್ಟಾಡುವ ಎಂಎಂಎಸ್ ಸ್ಕ್ಯಾಂಡಲ್ಗಳಲ್ಲಿ ಬಹುತೇಕ ಎಂಎಂಎಸ್ಗಳನ್ನು ಕದ್ದು ಮುಚ್ಚಿ ಶೂಟ್ ಮಾಡಿರುತ್ತರಾದರೂ, ಅದನ್ನು ಮೂರನೆ ವ್ಯಕ್ತಿಗಳು ಮಾಡಿರುವುದಿಲ್ಲ. ಅವು ಸ್ವವಿಕೃತಿಗಳಾಗಿರುತ್ತವೆ.
ಹೆಚ್ಚು ಕಮ್ಮಿ ಹರೆಯದವರ ನಡುವೆ ಅಶ್ಲೀಲ ದುಡುಕುಗಳು ನಡೆಯುತ್ತವೆ. ಅದನ್ನ ಕೆಲವೊಮ್ಮೆ ಸಮ್ಮತದಿಂದ, ಕೆಲವೊಮ್ಮೆ ಪುಸಲಾಯಿಸುವಿಕೆಯಿಂದ ಸೆರೆ ಹಿಡಿಯಲಾಗುತ್ತದೆ. ಕೆಲವರಿಗೆ ಇದೇ ರೀತಿಯ ಅನೇಕ ವಿಕೃತಿಗಳಿರುತ್ತವೆ. ತಮ್ಮ ದುಡುಕುಗಳನ್ನು ಚಿತ್ರೀಕರಿಸಿ ನೋಡುವ ಚಟ. ಅವರಲ್ಲಿ ಕೆಲವರು ವಿಕೃತಿ ತಣಿದ ನಂತರ ಡಿಲೀಟ್ ಮಾಡುತ್ತಾರೆ. ಆದರೆ ಕೆಲ ಹರಾಮ್ಕೋರ್ಗಳು ಅದನ್ನು ಅಂತರ್ಜಾಲದಲ್ಲಿ ಅಪಲೋಡ್ ಮಾಡಿಬಿಡುತ್ತಾರೆ. ಸೋಶಿಯಲ್ ನೆಟ್ವರ್ಕ್, ವಾಟ್ಸಾಪ್ ಗಳಲ್ಲಿ ಆ ತುಣುಕುಗಳು ಹರಿದಾಡುತ್ತವೆ. ದುರಂತವೆಂದ್ರೇ ಈ ಕೆಲಸವನ್ನು ಗಂಡು ಹೈಕಳು ಹೆಚ್ಚಾಗಿ ಮಾಡುತ್ತಾರೆ. ಹೆಣ್ಣುಮಕ್ಕಳು ಹೀಗೆಲ್ಲಾ ವಿಕೃತ ಮೆರೆಯೋದು ತೀರಾ ಕಡಿಮೆ. ಹಾಗಾಗಿ ಇಂಥ ಅಪಸವ್ಯಗಳಿಗೆ ಹೆಚ್ಚಾಗಿ ಹೆಣ್ಣುಮಕ್ಕಳು ಬಲಿಯಾಗುತ್ತಾರೆ. ಎಷ್ಟೋ ಜನರ ಬದುಕು ಇಂಥ ಕಾರಣಗಳಿಂದ ಹಾಳಾಗಿದೆ. ಆದರೆ ಇವುಗಳ್ಯಾವುದೂ ಬೆಳಕಿಗೆ ಬಂದಿಲ್ಲ. ಹೆಚ್ಚುಕಮ್ಮಿ ಬರೋದಿಲ್ಲ ಎನ್ನಬಹುದು. ಯಾಕಂದ್ರೆ ಇದೇನು ವೈಭವದ ವಿಚಾರವಲ್ಲ.
ಎಂಎಂಎಸ್ ಸೆಕ್ಸ್ ಸ್ಕ್ಯಾಂಡಲ್ ಗಳು ಕಡಿವಾಣ ಹಾಕಿದಷ್ಟು ಮಿತಿಮೀರುತ್ತಿದೆ. ಮಾಹಿತಿಯ ಪ್ರಕಾರ ಪ್ರತಿದಿನ ಏನಿಲ್ಲವೆಂದರೂ ನೂರಾರು ಸೆಕ್ಸ್ ವಿಡಿಯೋಗಳು ಅಂತರ್ಜಾಲಕ್ಕೆ ಅಪ್ಲೋಡ್ ಆಗುತ್ತಿದೆ. ಸ್ವಯಂಕೃತಪರಾಧಗಳ ಜೊತೆಗೆ, ಉದ್ದೇಶಪೂರ್ವಕ ಸಂಚುಗಳು ನಡೆಯುತ್ತಿವೆ. ಎಲ್ಲಕ್ಕೂ ಪರಿಪೂರ್ಣ ಕಡಿವಾಣ ಹಾಕಬೇಕಾದ್ರೇ ಇಂತಹವಕ್ಕೆಲ್ಲಾ ಕಠಿಣ ಶಿಕ್ಷೆಗಳು ಜಾರಿಯಾಗಬೇಕಿದೆ.
- ರಾ ಚಿಂತನ್.
POPULAR STORIES :
ಮಿಸ್ಡ್ ಕಾಲ್ ಗೆಳೆಯ..! ಅವನ ಸಾವಿನ ಜೊತೆ ಇವಳು ಒಂದಾದಳು..!?
ಪ್ರಭಾಕರ್ ಸಾವಿಗೆ ಕಾರಣವಾಗಿದ್ದು ಆ ವೈದ್ಯ..!? ಅಮ್ಮನ ಕೈ ತುತ್ತು ತಿನ್ನದೆ ಮಲಗುತ್ತಿರಲಿಲ್ಲ ಈ ಜೀವ..!
ಅಂಗವೈಕಲ್ಯ ಗೆದ್ದ ಮಹಾನ್ ಸಾಧಕ..! ಅವ್ನು ಆತ್ಮಹತ್ಯೆಗೂ ಯತ್ನಿಸಿದ್ದ..!!
ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’
`ಚಾನೆಲ್ ಸಂಪಾದಕ ಜೈಲುಪಾಲು..!?’ ಯಾರು ಆ ಸಂಪಾದಕ..?
ಈ ವೀಡಿಯೋ ನೋಡಿದ್ರೆ ನಿಮ್ಮ ತಲೆ ಕೆಟ್ಟು ಹೋಗುತ್ತೆ..! ಇದು ರುಂಡ ಮುಂಡ ಬೇರೆಯಾದ ಜೀವಂತ ಮೀನಿನ ಕಥೆ…
ಉಗ್ರರಿಗೆ ಇಸ್ರೇಲ್, ಅಮೆರಿಕಾದಿಂದ ವೆಪನ್ಸ್ ಪೂರೈಕೆ..!? ಪುಟಿನ್ ಹೇಳಿದ ಬೆಚ್ಚಿಬೀಳಿಸುವ ಸತ್ಯ..!?
ಅಪಘಾತವನ್ನು ಮೊಬೈಲ್ನಲ್ಲಿ ವಿಡಿಯೋ ಮಾಡ್ತೀರಾ..? ಅಪಲೋಡ್ ಮಾಡಿದ್ರೇ ಜೈಲ್ ಗ್ಯಾರಂಟಿ..!?
ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’
ಸಿಯಾಚಿನ್ ಎಂಬ ಸಾವಿನ ಕಣಿವೆ..! ರಣಚಳಿಗೆ ದೇಹ ಮರಗಟ್ಟಿ ಪುಡಿಯಾಗುತ್ತದೆ..!