ಬೇಸಿಗೆ ಕಾಲ ಬಂದರೆ ಸಾಕು ಮನೆಯೆಲ್ಲಾ ಧಗೆ ಧಗೆ. ಆದ್ದರಿಂದ `ಥೂ ಯಾಕಾದ್ರೂ ಇಷ್ಟು ಬಿಸಿಲು ಬರುತ್ತೋ..?’ ಅನ್ನುವವರು ಇದ್ದಾರೆ. ಅದೇ ವೇಳೆಗೆ ವಿದ್ಯುತ್ ಕೈಕೊಟ್ಟು ಫ್ಯಾನ್ ಗೂ ಕೆಲಸ ಇಲ್ಲದಂತಹ ಪರಿಸ್ಥಿತಿ ಎದುರಾಗಿರುತ್ತದೆ. ಆಗ ಅದೇ ಬಿಸಿಲನ್ನು ಉಳಿಸಿಕೊಂಡು ಬೆಳಗ್ಗೆಯಿಂದ ರಾತ್ರಿ ಪೂರ್ತಿ ವಿದ್ಯುತ್ ಬಳಕೆ ಮಾಡುವ ತಂತ್ರಜ್ಞಾನ ಬಂದರೆ ಹೇಗಿರುತ್ತೆ..? ಎನ್ನುವಷ್ಟರಲ್ಲಿ ಇಲ್ಲೋರ್ವ ವ್ಯಕ್ತಿ ಬಿಯರ್ ಕ್ಯಾನ್ ನಿಂದಲೇ ವಿದ್ಯುತ್ ಉಳಿಸುವ ತಂತ್ರಜ್ಞಾನ ಕಂಡುಹಿಡಿದಿದ್ದಾನೆ..!
ಯೆಸ್.. ಯೂರೋಪ್ ನ ಡಾರ್ಕೋ ಮಿಲಿಸೇವಿಕ್ ಎಂಬ ವ್ಯಕ್ತಿ ಸೋಲಾರ್ ಪವರ್ ಬಳಸಿ ಉತ್ಪಾದಿಸುವ ವಿದ್ಯುತ್ ನ್ನು ಬಿಯರ್ ಕ್ಯಾನ್ ಗಳಲ್ಲಿ ಉಳಿಸುವ ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾನೆ..! ಒಟ್ಟು 44 ಕ್ಯಾನ್ ಗಳನ್ನು ಬಳಸಿಕೊಂಡು 3.5 ಫೀಟ್ ಉದ್ದದ ಬಿಯರ್ ಕ್ಯಾನ್ ಪ್ಯಾನೆಲ್ ನ್ನು ಈತ ಸೃಷ್ಟಿಸಿದ್ದಾನೆ. ಅಲ್ಲದೇ ಬಿಯರ್ ಕ್ಯಾನ್ ಗಳಿಗೆ ಕಪ್ಪು ಬಣ್ಣ ಬಳಿಯಲಾಗಿದ್ದು, ಅದರ ಸಹಾಯದಿಂದ ಸೂರ್ಯನ ಕಿರಣಗಳನ್ನು ಹೀರಿಕೊಳ್ಳುವ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ಇದಕ್ಕೆ 3600 ರೂಪಾಯಿ ಮಾತ್ರ ಖರ್ಚಾಗಿದ್ದು, ವರ್ಷಕ್ಕೆ 36000 ರೂಪಾಯಿ ಮೊತ್ತದ ವಿದ್ಯುತನ್ನು ಉಳಿಸಬಹುದು..! ಅಲ್ಲದೇ ಅಗತ್ಯದ ಸಮಯದಲ್ಲೆಲ್ಲಾ ಬಳಸಿಕೊಳ್ಳಬಹುದು.
ಈಗ ಈ ವಿಧಾನ ದೊಡ್ಡ ಮಟ್ಟದಲ್ಲಿ ಸುದ್ದುಯಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಿಂದ ಪ್ರತಿದಿನ ಹತ್ತಾರು ಜನರು ಡಾರ್ಕೋ ಮಿಲಿಸೇವಿಕ್ ಮನೆಗೆ ಬಂದು ಈ ತಂತ್ರಜ್ಞಾನ ಬಳಸಿಕೊಳ್ಳಲು ಆಸಕ್ತಿ ತೋರಿಸುತ್ತಿದ್ದಾರೆ.
ಇಷ್ಟು ದಿನ ಕುಡಿದು ಬಿಸಾಕುತ್ತಿದ್ದ ಬಿಯರ್ ಕ್ಯಾನ್ ಗಳು ಇಷ್ಟೊಂದು ಉಪಯೋಗಕ್ಕೆ ಬರುತ್ತವೆ ಎಂದು ಯಾರೂ ಕೂಡಾ ಊಹಿಸಿರಲಿಲ್ಲ. ಆದರೆ ಇದೀಗ ಬಿಯರ್ ಕ್ಯಾನ್ ಗಳಿಂದಲೇ ವಿದ್ಯುತ್ ಉತ್ಪಾದಿಸುವ ತಂತ್ರಜ್ಞಾನ ಬಂದ ಮೇಲೆ ಬಿಯರ್ ಗಿಂತ ಕ್ಯಾನ್ ಗೇ ಹೆಚ್ಚು ಬೆಲೆ ಬರಬಹುದೇನೋ..?
- ರಾಜಶೇಖರ ಜೆ
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಈ ವೀಡಿಯೋ ನೋಡುವಾಗ ನಿಮ್ಮ ಬೆರಳನ್ನು `ಸ್ಕ್ರೀನ್’ ಮೇಲೆ ಇಟ್ಕೊಳ್ಳಿ..!
ಅಂದು ಇಡೀ ವಿಶ್ವವೇ ಭಾರತಕ್ಕೆ ತಲೆಬಾಗಿತ್ತು..!
ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!