ನಟ ಪ್ರಭಾಸ್ ಒಂದೇ ಒಂದು ಸೆಲ್ಫಿಯಿಂದ ಸುದ್ದಿಯಾಗಿದ್ದಾರೆ. ಬಾಹುಬಲಿ ಸಿನಿಮಾ ಬಳಿಕ ದೇಶದಾದ್ಯಂತ ಅಭಿಮಾನಿಗಳ ಬಳಗವನ್ನು ಹೆಚ್ಚಿಸಿಕೊಂಡ ಪ್ರಭಾಸ್ ಈ ಬಾರಿ ಸಿನಿಮಾದಿಂದಾಚೆಗೆ ಸುದ್ದಿಯಲ್ಲಿದ್ದಾರೆ.
ಪ್ರಭಾಸ್ ಅಭಿಮಾನಿಗಳನ್ನು ತುಂಬಾನೇ ಪ್ರೀತಿಸ್ತಾರೆ, ಗೌರವಿಸ್ತಾರೆ. ಅವರ ಆಸೆಯನ್ನು ಈಡೇರಿಸ್ತಾರೆ. ಇತ್ತೀಚೆಗೆ ಕಾರ್ಯಮವೊಂದರಲ್ಲಿ ಅಂಗವಿಕಲ ಅಭಿಮಾನಿಯನ್ನು ಪ್ರಭಾಸ್ ಭೇಟಿ ಮಾಡಿದ್ದಾರೆ. ಆ ಅಭಿಮಾನಿಗೆ ಪ್ರಭಾಸ್ ಜೊತೆ ಸೆಲ್ಫಿ ತೆಗೆಸಿಕೊಳ್ಳಬೇಕೆಂಬ ಆಸೆ.

ಆದರೆ ನಿಲ್ಲಲು ಕಾಲುಗಳಿಲ್ಲ…! ಅದನ್ನು ಗಮನಿಸಿದ ಪ್ರಭಾಸ್ ಮೊಣಕಾಲನ್ನು ನೆಲಕ್ಕೆ ಊರಿ ಸೆಲ್ಫಿ ನೀಡಿ ಅಭಿಮಾನಿಯನ್ನು ಸಂತೋಷಪಡಿಸಿದ್ದಾರೆ. ಈ ಫೋಟೋ ವೈರಲ್ ಆಗಿದ್ದು, ಈ ಮೂಲಕ ಪ್ರಭಾಸ್ ಸುದ್ದಿಯಲ್ಲಿದ್ದಾರೆ.

With fan ❤️#MAXBPForPrabhas #PrabhasFansMeet #Prabhas pic.twitter.com/09itcxnGRA
— Prabhas⏺ (@ActorPRABHA) March 27, 2018






