ಬಿಗ್ ಬಾಸ್ ಖ್ಯಾತಿಯ ಒಳ್ಳೆಯ ಹುಡುಗ ಪ್ರಥಮ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರ್ತಾರೆ. ತಮ್ಮದೇ ಕ್ಯಾಚಿ ಲೈನ್ ಗಳನ್ನು ಗೀಚುವ ಪ್ರಥಮ್ ಈಗ ಯಶ್ ಮತ್ತು ರಾಧಿಕ ಪಂಡಿತ್ ಅವರ ಬಗ್ಗೆ ಬರೆದಿದ್ದಾರೆ…!
ಯಶ್ ಅಭಿನಯದ ಕೆಜಿಎಫ್ ಚಿತ್ರದ ಹಾಡೊಂದರಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಭಟಿಯಾ ಹಾಡೊಂದರಲ್ಲಿ ಕಾಣಿಸಿಕೊಳ್ತಿರೋದು ಗೊತ್ತೇ ಇದೆ. ಯಶ್ ಮತ್ತು ತಮನ್ನಾ ಫೋಟೋವನ್ನು ಫೇಸ್ ಬುಕ್ ನಲ್ಲಿ ಹಾಕಿಕೊಂಡಿರುವ ಪ್ರಥಮ್ ತಮ್ಮ ಎಂದಿನ ಶೈಲೀಲಿ ನಾಲ್ಕು ಸಾಲು ಬರೆದಿದ್ದಾರೆ.
” ಈ ವ್ಯಕ್ತಿ ಕನ್ನಡ ಇಂಡಸ್ಟ್ರಿಯನ್ನು ನೆಕ್ಸ್ಟ್ ಲೆವೆಲ್ ಗೆ ತಗೊಂಡು ಹೋಗೋ ಸಾಮಾರ್ಥ್ಯ ಹೊಂದಿದ್ದಾರೆ. ನಂಗೆ ಈ ಯಪ್ಪನ ಆ್ಯಟಿಟ್ಯೂಡ್ ಇಷ್ಟ.
ಹೋದ ವರ್ಷ ಇವರ ಯಾವ ಸಿನಿಮಾ ಸಹ ರಿಲೀಸ್ ಆಗಿಲ್ಲ. ಆದ್ರೆ ಈ ವರ್ಷ ಯಶ್ ಅವರು ಕೆಜಿಎಫ್ ರಿಲೀಸ್ ಮಾಡಿದ್ರೆ, ನಮ್ಮ ರಾಧಿಕಾ ಪಂಡಿತ್ ಅವರು ಡಿಸೆಂಬರ್‍ಗೆ ವೈಜಿಎಫ್ ರಿಲೀಸ್ ಮಾಡುತ್ತಿದ್ದಾರೆ. ನನಗೆ ದುರಾಸೆ ಏನಿಲ್ಲ ಗುರು.. ಸಣ್ಣ ಆಸೆ ಅಷ್ಟೆ… ಕೆಜಿಎಫ್ ಭಾಗ 1 ಮತ್ತು 2 ಬರಲಿ.. ವೈಜಿಎಫ್ ಅವಳಿ-ಜವಳಿ ಹುಟ್ಟಲಿ. ಅಷ್ಟೇ.. ಇನ್ನೇನೂ ಆಸೆ ಇಲ್ಲ..! ಎಂದು ಬರೆದಿದ್ದಾರೆ.