ಯಾವಾಗ್ಲೂ ನಗು ನಗುತಾ ಮಾತಾಡೋ ಹುಡ್ಗಿ. ತುಂಬಾ ಮಾತಾಡೋ ಮಾತಿನ ಮಲ್ಲಿ. ಮೀಡಿಯಾಕ್ಕೆ ಬಂದಿದ್ದಾಳಂತ ಎಷ್ಟೋ ಹತ್ತಿರದ ಸಂಬಂಧಿಗಳೇ ಈಕೆಯನ್ನು ಮಾತಾಡಿಸ್ತಿಲ್ಲ…! ಈಕೆಯ ಸಾಧನೆಯ ಹಿಂದಿನ ಶಕ್ತಿ ಅಮ್ಮ. ಶ್ರೀ ಕ್ಷೇತ್ರ ಹೊರನಾಡ ಚೆಲುವೆ. ಸ್ನೇಹಿತ್ರು ಅನ್ನಪೂಣೇಶ್ವರಿ ಅಂತಾರೆ. ಇವರೇ ಪ್ರಜಾ ಟಿವಿಯ ನಿರೂಪಕಿ ಪ್ರಜ್ವಲ ಹೊರನಾಡು.
ಇವತ್ತು ಭಾರಿ ದೊಡ್ಡ ಸಾಧನೆ ಮಾಡಿದ್ದಾರಂತ ಇವರ ಬಗ್ಗೆ ಬರೆಯುತ್ತಿಲ್ಲ. ಬದಲಾಗಿ ಅವಮಾನಗಳನ್ನು, ಅಡೆತಡೆಗಳನ್ನು ಎದುರಿಸಿದ ಇಷ್ಟದ ಕ್ಷೇತ್ರದಲ್ಲಿ ಬದುಕುಕಟ್ಟಿಕೊಂಡ ಛಲವಂತೆ ಎಂಬ ಕಾರಣಕ್ಕೆ ಬರೆಯಲೇ ಬೇಕಿದೆ.
ಇವರ ತಂದೆ ದಿ. ಗುರು ಪ್ರಕಾಶ್, ತಾಯಿ ಪುಷ್ಪ, ತಂಗಿ ಶುಭಶ್ರೀ. ಇವರು ಹುಟ್ಟಿದ್ದು ತಾಯಿಯ ತವರು ಹೊರನಾಡಿನಲ್ಲಿ. ಬೆಳೆದಿದ್ದೆಲ್ಲಾ ರಾಜಧಾನಿ ಬೆಂಗಳೂರಲ್ಲಿ. ಉದಯ ಪಬ್ಲಿಕ್ ಸ್ಕೂಲ್ ನಲ್ಲಿ ಪ್ರಾಥಮಿಕ ಶಿಕ್ಷಣ, ಶೇಷಾದ್ರಿ ಪುರಂ ಕಾಲೇಜಿನಲ್ಲಿ ಪ್ರೌಢ, ಪದವಿ ಪೂರ್ವ ಹಾಗೂ ಪದವಿ (ಬಿಕಾಂ) ವ್ಯಾಸಂಗ ಮಾಡಿದ್ರು.
ಶಾಲಾ-ಕಾಲೇಜು ದಿನಗಳಿಂದಲೂ ಪಠ್ಯೇತರ ಚಟುವಟಿಕೆಯಲ್ಲಿ ಎಲ್ಲಿಲ್ಲದ ಆಸಕ್ತಿ ಇವರಿಗೆ. ಡ್ಯಾನ್ಸ್ ಕ್ಲಾಸ್ ಗೆ ಹೋಗ್ತಿದ್ರು. ಆಗ ನಾನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಿತ್ತಿದ್ದ ಅಮ್ಮ ನಿರೂಪಕರನ್ನು ನೋಡಿ ನನ್ನ ಮಗಳೂ ಸಹ ನಿರೂಪಕಿ ಆಗ್ಬೇಕು ಅಂತ ಕನಸು ಕಂಡಿದ್ದರು.
ಮಗಳು ಡ್ಯಾನ್ಸರ್ ಆಗೋಕ್ಕಿಂತ ಹೆಚ್ಚಾಗಿ ಒಳ್ಳೆಯ ಆ್ಯಂಕರ್ ಆಗಲಿ ಎಂಬುದು ಅಮ್ಮನ ಆಸೆಯಾಗಿತ್ತು. ಅವರ ಆಲೋಚನೆಯಂತೆ ಮಗಳು ಪ್ರಜ್ವಲಗೂ ನಿರೂಪಕಿ ಆಗೋ ಆಸೆ ಮನಸ್ಸಲ್ಲಿ ಚಿಗುರೊಡೆದಿತ್ತು.
ಆದರೆ, ಅಪ್ಪಗೆ ಹಾಗೂ ಸಂಬಂಧಿಕರಾರಿಗೂ ಪ್ರಜ್ವಲ ನಿರೂಪಕಿ ಆಗುವುದು ಇಷ್ಟವಿರಲಿಲ್ಲ. ಭವಿಷ್ಯದ ಕಥೆ ಸಧ್ಯಕ್ಕೆ ಬೇಕಿಲ್ಲ, ಮುಂದೇನಾಗುತ್ತೋ ಆಗಲಿ. ಈಗ ಬಿಕಾಂ ಮಾಡೋಣ ಅಂತ ಪ್ರಜ್ವಲ ಬಿಕಾಂ ವ್ಯಾಸಂಗ ಮಾಡಿದ್ರು.
ಪದವಿ ಮುಗಿಯುತ್ತಿದ್ದಂತೆ ಕ್ಯಾಂಪಸ್ ಇಂಟರ್‍ವ್ಯೂ ನಲ್ಲಿ ಪಾಸಾಗಿ ಕೆಲವು ಕಂಪನಿಗಳಿಂದ ಆಫರ್ ಕೂಡ ಬಂದಿತ್ತು. ಕೇವಲ ಸಂಬಳಕ್ಕಾಗಿ ಸಿಕ್ಕ ಕೆಲಸವನ್ನು ಮಾಡ್ಕೊಂಡು ಕಳೆದೋಗೋದು ಪ್ರಜ್ವಲಗೆ ಇಷ್ಟವಿರಲಿಲ್ಲ. ಕನಸು ಕಾಣ್ತಾ ಇದ್ರೆ ಆಗಲ್ಲ, ಕಂಡ ಕನಸುಗಳನ್ನು ನನಸಾಗಿಸಿಕೊಳ್ಳೋಕೆ ಮುಂದಡಿ ಇಡಲೇ ಬೇಕೆಂದು ಮಾಧ್ಯಮ ರಂಗಕ್ಕೆ ಎಂಟ್ರಿ ಕೊಡಲು ನಿರ್ಧರಿಸಿಯೇ ಬಿಟ್ಟರು.
ಮಾಧ್ಯಮ ಕ್ಷೇತ್ರದ ಬಗ್ಗೆ ಇವತ್ತಿಗೂ ಕೆಟ್ಟ ಕಲ್ಪನೆಗಳನ್ನು ಇಟ್ಕೊಂಡಿರೋ ಕೆಲವು ಸಂಬಂಧಿಕರು ಪತ್ರಕರ್ತೆ ಆಗಲು ಹೊರಟ ಪ್ರಜ್ವಲ ಅವರೊಡನೆ ಮಾತಾಡೋದನ್ನೇ ನಿಲ್ಲಿಸಿದ್ರು…! ಅಪ್ಪನಿಗೂ ಮಗಳು ಮೀಡಿಯಾಕ್ಕೆ ಹೋಗೋದ್ ಇಷ್ಟವಿರ್ಲಿಲ್ಲ.
ಯಾರ್ ಮಾತು ಬಿಟ್ರು ತೊಂದ್ರೆ ಇಲ್ಲ. ಸಂಬಂಧಿಕರು ಮಾತಾಡಿದರೇನು ಬಿಟ್ಟರೇನು? ನಿನ್ನ ಜೊತೆ ನಾವಿರ್ತೀವಿ. ಏನ್ ಮಾಡ್ಬೇಕು ಅಂತಿದ್ಯ ಅದನ್ನು ಮಾಡು ಅಂತ ಅಮ್ಮ ಮತ್ತು ತಂಗಿ ಪ್ರಜ್ವಲ ಅವರ ಸಪೋರ್ಟ್‍ಗೆ ನಿಂತ್ರು. ಬೆನ್ನುತಟ್ಟಿ ಮುಂದೆ ದಬ್ಬಿದ್ರು.
ಪ್ರಜ್ವಲಗೆ ಇಷ್ಟು ಸಾಕಿತ್ತು…! ಅಮ್ಮನಿಗಿಂತ ದೊಡ್ಡ ಶಕ್ತಿ ಯಾರಿದ್ದಾರೆ…? 2015ರಲ್ಲಿ ಮೀಡಿಯಾ ಪಯಣ ಶುರುಮಾಡಿದ್ರು. ‘ಇಂಚರ’ ಎಂಬ ಕೇಬಲ್ ಚಾನಲ್ ಪ್ರಥಮ ಅವಕಾಶ ಕೊಡೋ ಮುಖೇನ ಪ್ರಜ್ವಲೆಗೆ ಮಾಧ್ಯಮ ರಂಗಕ್ಕೆ ಪ್ರೀತಿಯ ಸ್ವಾಗತ ಕೋರಿತು.
ಕೆಲವು ತಿಂಗಳ ಬಳಿಕ ಹೊಸದಾಗಿ ಆರಂಭವಾದ ಬಿಎನ್ ಟಿವಿ ಪ್ರಜ್ವಲ ಅವರನ್ನು ತನ್ನ ಬಳಗಕ್ಕೆ ಸೇರಿಸಿಕೊಂಡಿತು. ಇಲ್ಲಿ ‘ದೈವಾರಾಧನೆ’ ಇವರು ನಡೆಸಿಕೊಡುತ್ತಿದ್ದ ಜನಪ್ರಿಯ ಕಾರ್ಯಕ್ರಮ. ಬೆಂಗಳೂರಿನ ದೇವಾಲಯಗಳ ಬಗ್ಗೆಯೇ ಹೆಚ್ಚಿನ ಪರಿಚಯ ಈ ಕಾರ್ಯಕ್ರಮದಲ್ಲಿತ್ತು. ಆದ್ದರಿಂದ ಬೆಂಗಳೂರಿನಲ್ಲಿ ಸಾಕಷ್ಟು ಮಂದಿಗೆ ಪ್ರಜ್ವಲ ಪರಿಚಿತರಾದ್ರು. ದೇವಸ್ಥಾನಗಳಿಗೆ ಪ್ರಜ್ವಲ ಹೋದಾಗ ಜನ ಗುರುತು ಹಿಡಿದು ಮಾತಾಡಲಾರಂಭಿಸಿದ್ರು.
ಕೆಲವು ತಿಂಗಳ ಬಳಿಕ ಜನಶ್ರೀ ಕುಟುಂಬಕ್ಕೆ ಪ್ರಜ್ವಲ ಮನೆಮಗಳಾದರು. ಅನಂತಚಿನಿವಾರ ಅವರು ತುಂಬಾ ಪ್ರೋತ್ಸಾಹ ನೀಡಿ ಪ್ರಜ್ವಲ ಅವರ ಬೆಳವಣಿಗೆಗೆ ನೆರವಾದ್ರು. ಜನಶ್ರೀ ಫೋಕಸ್ ಕಾರ್ಯಕ್ರಮವನ್ನು ನಡೆಸಿಕೊಡೋ ಅವಕಾಶ ಯುವ ನಿರೂಪಕಿ ಪ್ರಜ್ವಲ ಅವರದ್ದಾಯಿತು.
ಜನಶ್ರೀ ಪರದೆಯನ್ನು ಪ್ರಜ್ವಲ ಅವರು ಅಲಂಕರಿಸಿದಾಗ ಮಾಧ್ಯಮ ಕ್ಷೇತ್ರವೇ ಬೇಡ ಮಗಳೇ ಎಂದಿದ್ದ ತಂದೆಯೂ ಹೆಮ್ಮೆಪಟ್ಟಿದ್ದರು. ಸ್ನೇಹಿತರಿಗೆಲ್ಲಾ ಸಿಹಿ ಹಂಚಿ ಸಂಭ್ರಮಿಸಿದ್ದರು. ನನ್ನ ಮಗಳು ಮೀಡಿಯಾದಲ್ಲಿ ದೊಡ್ಡಮಟ್ಟಕ್ಕೆ ಬೆಳೆಯಬೇಕು ಅಂತ ಕನಸು ಕಂಡ್ರು. ಪ್ರಜ್ವಲ ಒಂದೊಂದೇ ಮೆಟ್ಟಿಲು ಏರುತ್ತಾ ಬೆಳೆಯುತ್ತಿದ್ದಾರೆ. ಆದ್ರೆ ಈ ಯಶಸ್ಸು ಕಣ್ತುಂಬಿ ಕೊಳ್ಳೋಕೆ ತಂದೆ ಇಲ್ಲ…! ಪ್ರಜ್ವಲ ಜನಶ್ರೀ ಗೆ ಸೇರಿ 2 ತಿಂಗಳಾಗುವಷ್ಟರಲ್ಲಿ ತಂದೆ ವಿಧಿವಶರಾದ್ರು.
ಜನಶ್ರೀ ಬಳಿಕ ವೃತ್ತಿ ಬದುಕಿನ ಅನಿವಾರ್ಯ ಬದಲಾವಣೆ ಬಯಸಿ 2017ರಲ್ಲಿ ಪ್ರಜ್ವ ಪ್ರಜಾ ಟಿವಿ ಸೇರಿದ್ರು. ಇಲ್ಲಿ ಮನೋಜ್ ಮತ್ತು ಸುರೇಶ್ ಸರ್ ತುಂಬಾ ಪ್ರೋತ್ಸಾಹ ನೀಡ್ತಾರೆ ಎನ್ನುತ್ತಾರೆ ಪ್ರಜ್ವಲ. ಇಲ್ಲಿ ‘ಲಾಕಪ್’ ಕಾರ್ಯಕ್ರಮ ನಡೆಸಿಕೊಡೋದು ಇವರೇ. ಜೊತೆಗೆ ಸಿನಿಮಾ, ರಾಜಕೀಯ, ಪ್ರಚಲಿತ ವಿದ್ಯಮಾನ ಸೇರಿದಂತೆ ಯಾವುದೇ ಡಿಸ್ಕಷನ್ಸ್, ಕಾರ್ಯಕ್ರಮಗಳನ್ನೂ ಸಹ ಪ್ರಜ್ವಲ ನಡೆಸಿಕೊಡ್ತಾರೆ.
ಆರಂಭದ ದಿನಗಳಲ್ಲಿ ನ್ಯೂಸ್ ಗೆ ಸೀನಿಯರ್ಸ್ ಹತ್ತಿರವೆಲ್ಲಾ ಕೇಳ್ಕೊಂಡು, ರೆಡಿಯಾಗಿ ಇನ್ನೇನು ಸ್ಟೋಡಿಯೋದಲ್ಲಿ ಕುಳಿತು ನ್ಯೂಸ್ ರೀಡ್ ಮಾಡ್ಬೇಕು ಅನ್ನುವಷ್ಟರಲ್ಲಿ, ಬೇರೆ ಏನೋ ಮುಖ್ಯ ಘಟನೆ ನಡೆದಿದೆ ಅಂತ ಪ್ರಜ್ವಲ ಅವರನ್ನು ವಾಪಸ್ಸು ಕರೆಸಿ, ಬೇರೆಯವರನ್ನು ಕೂರಿಸಿದ್ದೂ ಇದೆ. ಆ ಕ್ಷಣಗಳಲ್ಲಿ ಪ್ರಜ್ವಲ ತುಂಬಾ ನೊಂದುಕೊಂಡಿದ್ದಾರೆ. ಇವತ್ತೂ ಅದೇ ಪ್ರಜ್ವಲ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ನಡೆಸಿಕೊಡಬಲ್ಲರು…! ಕಾಲವೇ ಎಲ್ಲದಕ್ಕೂ ಉತ್ತರಿಸುತ್ತೆ, ಪ್ರತಿಭೆಗೆ ಜಯ ಸಿಕ್ಕೇ ಸಿಗುತ್ತೆ ಅನ್ನೋದಕ್ಕೆ ಇದೇ ಸಾಕ್ಷಿ ಅಲ್ವೇ…?
ಅನುಭವಿ ಪತ್ರಕರ್ತರಾದ ರಾಘವೇಂದ್ರ ಹಾಗೂ ನಂದಕುಮಾರ್ ಅವರು ನೀಡಿದ ಪ್ರೋತ್ಸಾಹ ಸಲಹೆಯನ್ನು ಪ್ರಜ್ವಲ ಸ್ಮರಿಸುತ್ತಾರೆ. ಇವರು ಬೇರೆ ಚಾನಲ್ ಗಳಲ್ಲಿದ್ದರೂ ಪ್ರಜ್ವಲಗೆ ಸಾಕಷ್ಟು ಪ್ರೋತ್ಸಾಹ ನೀಡಿ ಅವರ ಯಶಸ್ಸು ಎದುರು ನೋಡುತ್ತಿರೋ ಹಿರಿಯರು. ಆದ್ದರಿಂದ ಪ್ರಜ್ವಲ ಅವರಿಗೆ ಇವರಿಬ್ಬರ ಬಗ್ಗೆ ವಿಶೇಷ ಗೌರವ.
ಪ್ರಜ್ವಲ ಯಾವಾಗಲೂ ಹಾಡು ಗುನುಗುತ್ತಿರುತ್ತಾರೆ.ಸಂಸ್ಕೃತ ಶ್ಲೋಕಗಳನ್ನು ಓದೋದು, ಕೇಳೋದು, ಹೇಳೋದು ಇಷ್ಟ. ಫ್ರೆಂಡ್ಸ್ ಇದಕ್ಕಾಗಿಯೇ ಫ್ರೆಂಡ್ಸ್ ಇವರನ್ನು ಅನ್ನಪೂರ್ಣೇಶ್ವರಿ ಅನ್ನೋದು.
ಓದಿದ ಕಾಲೇಜು, ಹುಟ್ಟಿದ ಊರು ಸೇರಿದಂತೆ ನಾನಾ ಕಡೆಗಳಲ್ಲಿ ಪ್ರಜ್ವಲ ಅವರು ಸನ್ಮಾತಿರಾಗಿದ್ದಾರೆ. ಆಗಾಗ ಊರಿಗೆ ಹೋದಾಗ ಎಲ್ರೂ ಖುಷಿಯಿಂದ ಮಾತಾಡಿಸ್ತಾರೆ. ಒಂದ್ ಕಾಲದಲ್ಲಿ ಮಾತು ಆಡದೇ ಇರೋರು ಬಂದು ಮಾತಾಡಿಸಿದಾಗ ಪ್ರಜ್ವಲ ಪ್ರೀತಿಯ ನಗುಬೀರಿ ಸುಮ್ಮನಾಗುತ್ತಾರಷ್ಟೇ. ವಿಚಿತ್ರ ಅಂದ್ರೆ ಕೆಲವು ಸಂಬಂಧಿಕರು ಇವತ್ತಿಗೂ ಮಾತಡ್ತಿಲ್ಲವಂತೆ…!
ಮೀಡಿಯಾ ಬಗ್ಗೆ ಅಷ್ಟೊಂದು ತಪ್ಪು ಕಲ್ಪನೆಗಳಿರೋದೇಕೋ ದೇವರೇ ಬಲ್ಲ…! ಅಷ್ಟಕ್ಕೂ ಬೇರೆಯವರ ಇಷ್ಟದಂತೆಕೇ ಬದುಕ ಬೇಕಲ್ವೇ…? ಯಾರು ಮಾತಾಡಿದರೇನು, ಬಿಟ್ಟರೇನು. ನಿಜವಾದ ನಮ್ಮವರು ಕಷ್ಟದಲ್ಲೂ-ಸುಖದಲ್ಲೂ ನಮ್ಮೊಡನೆ ಇರ್ತಾರೆ ಎನ್ನುವ ಪ್ರಜ್ವಲ ಅವರ ಮಾತು 100ಕ್ಕೆ 100ರಷ್ಟು ಸತ್ಯ.
ಇವತ್ತು ಈ ಪ್ರಜಾ ಪ್ರಜ್ವಲ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ನೀವೂ ಕೂಡ ಪ್ರಜ್ವಲ ಅವರಿಗೆ ಶುಭ ಹಾರೈಸಿ. ಹುಟ್ಟುಹಬ್ಬದ ಶುಭಾಶಯಗಳು ಪ್ರಜ್ವಲ. ಶುಭವಾಗಲಿ ಎಂದು ಹಾರೈಸುತ್ತಾ…
-ಶಶಿಧರ್ ಎಸ್ ದೋಣಿಹಕ್ಲು
ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.
1) 10 ನವೆಂಬರ್ 2017 : ಈಶ್ವರ್ ದೈತೋಟ
2)11 ನವೆಂಬರ್ 2017 : ಭಾವನ
3)12 ನವೆಂಬರ್ 2017 : ಜಯಶ್ರೀ ಶೇಖರ್
4)13 ನವೆಂಬರ್ 2017 : ಶೇಷಕೃಷ್ಣ
5)14 ನವೆಂಬರ್ 2017 : ಶ್ರೀಧರ್ ಶರ್ಮಾ
6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ
7)16 ನವೆಂಬರ್ 2017 : ಅರವಿಂದ ಸೇತುರಾವ್
8)17 ನವೆಂಬರ್ 2017 : ಲಿಖಿತಶ್ರೀ
9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ
10)19 ನವೆಂಬರ್ 2017 : ಅಪರ್ಣಾ
11)20 ನವೆಂಬರ್ 2017 : ಅಮರ್ ಪ್ರಸಾದ್
12)21 ನವೆಂಬರ್ 2017 : ಸೌಮ್ಯ ಮಳಲಿ
13)22 ನವೆಂಬರ್ 2017 : ಅರುಣ್ ಬಡಿಗೇರ್
14)23ನವೆಂಬರ್ 2017 : ರಾಘವ ಸೂರ್ಯ
15)24ನವೆಂಬರ್ 2017 : ಶ್ರೀಲಕ್ಷ್ಮಿ
16)25ನವೆಂಬರ್ 2017 : ಶಿಲ್ಪ ಕಿರಣ್
17)26ನವೆಂಬರ್ 2017 : ಸಮೀವುಲ್ಲಾ
18)27ನವೆಂಬರ್ 2017 : ರಮಾಕಾಂತ್ ಆರ್ಯನ್
19)28ನವೆಂಬರ್ 2017 : ಮಾಲ್ತೇಶ್
20)29/30ನವೆಂಬರ್ 2017 : ಶ್ವೇತಾ ಆಚಾರ್ಯ [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ. ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]
21)30ನವೆಂಬರ್ 2017 : ಸುರೇಶ್ ಬಾಬು
22)01 ಡಿಸೆಂಬರ್ 2017 : ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)
23)02 ಡಿಸೆಂಬರ್ 2017 : ಶಶಿಧರ್ ಭಟ್
24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್
25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ
26)05 ಡಿಸೆಂಬರ್ 2017 : ಶ್ರುತಿ ಜೈನ್
27)06ಡಿಸೆಂಬರ್ 2017 : ಅವಿನಾಶ್ ಯುವನ್
28)07ಡಿಸೆಂಬರ್ 2017 : ಶಿಲ್ಪ ಕೆ.ಎನ್
29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ
30)09ಡಿಸೆಂಬರ್ 2017 : ಸಂದೀಪ್ ಕುಮಾರ್
31)10ಡಿಸೆಂಬರ್ 2017 : ಪ್ರತಿಮಾ ಭಟ್
32)11ಡಿಸೆಂಬರ್ 2017 : ಹರೀಶ್ ಪುತ್ರನ್
33)12ಡಿಸೆಂಬರ್ 2017 : ನಿಶಾ ಶೆಟ್ಟಿ
34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ
35)14ಡಿಸೆಂಬರ್ 2017 : ಹಬೀಬ್ ದಂಡಿ
36)15ಡಿಸೆಂಬರ್ 2017 : ಪ್ರಕಾಶ್ ಕುಮಾರ್ ಸಿ.ಎನ್
37)16ಡಿಸೆಂಬರ್ 2017 : ಜ್ಯೋತಿ ಇರ್ವತ್ತೂರು
38)17ಡಿಸೆಂಬರ್ 2017 : ಶಿಲ್ಪ ಐಯ್ಯರ್
39)18ಡಿಸೆಂಬರ್ 2017 : ನಾಝಿಯಾ ಕೌಸರ್
40) 19ಡಿಸೆಂಬರ್ 2017 : ಶ್ರುತಿಗೌಡ
41) 20ಡಿಸೆಂಬರ್ 2017 : ಎಂ.ಆರ್ ಶಿವಪ್ರಸಾದ್
42) 21ಡಿಸೆಂಬರ್ 2017 : ವೆಂಕಟೇಶ್ ಉಳ್ತೂರು (ವೆಂಕಟೇಶ್ ಅಡಿಗ)
43) 22ಡಿಸೆಂಬರ್ 2017 : ಶರ್ಮಿತಾ ಶೆಟ್ಟಿ
44) 23ಡಿಸೆಂಬರ್ 2017 : ಕಾವ್ಯ
45) 24ಡಿಸೆಂಬರ್ 2017 : ಹರ್ಷವರ್ಧನ್ ಬ್ಯಾಡನೂರು
46) 25ಡಿಸೆಂಬರ್ 2017 : ಸುಧನ್ವ ಖರೆ
47) 26ಡಿಸೆಂಬರ್ 2017 : ಸೌಜನ್ಯ ಕೀರ್ತಿ
48) 27ಡಿಸೆಂಬರ್ 2017 :ವಾಣಿ ಕೌಶಿಕ್
49) 28ಡಿಸೆಂಬರ್ 2017 : ಸುಗುಣ
50) 29ಡಿಸೆಂಬರ್ 2017 : ಜಯಪ್ರಕಾಶ್ ಶೆಟ್ಟಿ
ಡಿಸೆಂಬರ್ ೩೦ ಮತ್ತು ೩೧ ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ.
51) 01ಜನವರಿ 2018 :ಐಶ್ವರ್ಯ ಎ.ಎನ್
52) 02ಜನವರಿ 2018 :ಶ್ರೀಧರ್ ಆರ್
53) 03ಜನವರಿ 2018 : ದಿವ್ಯಶ್ರೀ
54) 04ಜನವರಿ 2018 : ಮಂಜುಳ ಮೂರ್ತಿ
55) 05ಜನವರಿ 2018 : ಅಭಿಷೇಕ್ ರಾಮಪ್ಪ
56) 06ಜನವರಿ 2018 : ರೋಹಿಣಿ ಅಡಿಗ
57) 07ಜನವರಿ 2018 :ಮಾದೇಶ್ ಆನೇಕಲ್
58) 08ಜನವರಿ 2018 :ಶ್ರುತಿ ಕಿತ್ತೂರು
59) 09ಜನವರಿ 2018 : ಕೆ.ಸಿ ಶಿವರಾಂ
ಜನವರಿ 10 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
60) 11ಜನವರಿ 2018 : ಮಾರುತೇಶ್
61) 12ಜನವರಿ 2018 :ನೀತಿ ಶ್ರೀನಿವಾಸ್
62) 13ಜನವರಿ 2018 :ರಕ್ಷಾ ವಿ
ಜನವರಿ 15 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
63) 15ಜನವರಿ 2018 : ಸುಮ ಸಾಲಿಯಾನ್
64) 16ಜನವರಿ 2018 : ಶಕುಂತಲ
ಜನವರಿ 17,18 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
65) 19 ಜನವರಿ 2018 : ವಸಂತ್ ಕುಮಾರ್ ಗಂಗೊಳ್ಳಿ
ಜನವರಿ 20 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
66) 21 ಜನವರಿ 2018 : ಮುದ್ದು ಮೀನ
67) 22 ಜನವರಿ 2018 : ಪ್ರಜ್ವಲ ಹೊರನಾಡು