ನನ್ನನ್ನು ಕೆರಳಿಸಿದ್ರೆ ಹುಷಾರ್ ಅಂದ ಬಿಗ್ ಬಾಸ್ ಪ್ರಥಮ್..! ಕೆ.ಜಿ ಹಳ್ಳಿ ಗಲಭೆ ವಿಚಾರವಾಗಿ ‘ಒಳ್ಳೇ ಹುಡ್ಗ’ ಹಾಕಿದ ಪೋಸ್ಟ್ ಏನ್ ಗೊತ್ತಾ?
ಬೆಂಗಳೂರಿನ ಕೆ.ಜಿ ಹಳ್ಳಿ ಗಲಭೆ ವಿಚಾರವಾಗಿ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಸಿಡಿದಿದ್ದಾರೆ..! ಖಾರವಾಗಿ ಫೇಸ್ ಬುಕ್ ಫೋಸ್ಟ್ ಗಳನ್ನು ಹಾಕಿದ್ದಾರೆ..!
ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ನಡೆದ ಗಲಭೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು. ಬಳಿಕ ಅವರಿಗೆ ಪ್ರಾಣ ಬೆದರಿಕೆ ಕರೆಗಳು ಬರುತ್ತಿವೆಯಂತೆ. ಇದಕ್ಕೆ ಪ್ರಥಮ್ ಸೋಶಿಯಲ್ ಮೀಡಿಯಾದಲ್ಲಿಯೇ ಖಾರವಾದ ಉತ್ತರ ನೀಡಿದ್ದಾರೆ …
ಇದನ್ನು ಮನವಿ ಅಥವಾ ವಾರ್ನಿಂಗ್ ಏನಾದ್ರೂ ಅಂದುಕೊಳ್ಳಿ. ನನಗೆ ಕನ್ನಡದ ಜ್ಞಾನ ಬಹಳ ಚೆನ್ನಾಗಿದೆ. ನಾನು ಬಳಸಿರುವ ಪದಗಳ ಬಗ್ಗೆ ಅರಿವೂ ಇದೆ. ತುಂಬಾ ಜನ ಮುಸ್ಲಿಂ ಸ್ನೇಹಿತರ ಮಾತಿಗೆ ಬೆಲೆ ಕೊಟ್ಟು ನನ್ನ ಪೋಸ್ಟ್ ಡಿಲಿಟ್ ಮಾಡಿದ್ದೇನೆ. ಆದರೂ ಸಹ ಬಹಳಷ್ಟು ವಿಕೃತ ವಾಟ್ಸಪ್ ಮೆಸೇಜ್‌ಗಳು ನಮ್ಮ ಅಧಿಕೃತ ನಂಬರ್‌ಗೆ ಬರುತ್ತಿವೆ. ನಾನು ಮುಸ್ಲಿಂ ಸ್ನೇಹಿತರ ಮಾತಿಗೆ ಬೆಲೆಕೊಟ್ಟು ಡಿಲಿಟ್ ಮಾಡಿದ್ದು, ಯಾವುದೇ ಭಯದಿಂದಾಗಲಿ ಅಲ್ಲ. ಹೆಚ್ಚುಕಮ್ಮಿ 200 ಜನರ ಅಸಭ್ಯ ಸ್ಕ್ರೀನ್‌ಶಾಟ್ಸ್, ಆಡಿಯೋ ಮೆಸೇಜ್‌ಗಳಿಂದ ನಮ್ಮ ಆಫೀಸ್ ನಂಬರ್ ತುಂಬಿಹೋಗಿದೆ. ನೀವು ಹೀಗೇ ನನಗೆ ಹಾಗೂ ನನ್ನ ಸಿನಿಮಾ ಗೆ ತೊಂದರೆ ಕೊಡುವುದು ಮುಂದುವರೆಸಿದರೆ ನಾಳೆ ಬೆಳಿಗ್ಗೆ ಗೃಹ ಮಂತ್ರಿಗಳ ಭೇಟಿ ಮಾಡ್ತೀನಿ.
https://www.facebook.com/719171738250468/posts/1586994814801485/
ಪೊಲೀಸ್ ಕಮಿಷನರ್‌ಗೆ ಎಲ್ಲಾ ಸಾಕ್ಷ್ಯಗಳನ್ನು ನೀಡಿ ದೂರು ನೀಡಿದರೆ, ಬಹಳಷ್ಟು ಜನರಿಗೆ ಕಾನೂನಿನ ಪಾಠ ಕಲಿಸಬೇಕಾಗುತ್ತದೆ ಎಂದು ಪ್ರಥಮ್ ಪೋಸ್ಟ್ ಮಾಡಿದ್ದಾರೆ.
https://www.facebook.com/719171738250468/posts/1587663878067912/
ಎಂಎಲ್‌ಎ ಶ್ರೀನಿವಾಸಮೂರ್ತಿಗಳ ಮನೆಗೆ ಬೆಂಕಿ ಹಚ್ಚಿರೋ ನೋವು ನಮಗೂ ಇದೆ. ಹಾಗಂತ ನೀವು ರಾತ್ರಿ-ಹಗಲೂ ಎನ್ನದೇ ನಮ್ಮ ಅಧಿಕೃತ ನಂಬರ್‌ಗೆ ಕರೆ ಮಾಡಿ ಬೆದರಿಕೆ ಒಡ್ಡಿದ್ರೆ ಸುಮ್ಮನೆ ಕೂರಲು ಆಗದು. ನನ್ನ ಮುಸ್ಲಿಂ ಸ್ನೇಹಿತರ ಮಾತಿಗೆ ಬೆಲೆಕೊಟ್ಟು ಸುಮ್ಮನಿದ್ದೇನೆ. ನೀವು ಕೆರಳಿಸುತ್ತಲೇ ಇದ್ರೆ ಗೃಹ ಮಂತ್ರಿಗಳಿಗೆ ಲಿಖಿತ ದೂರು ನೀಡಬೇಕಾಗುತ್ತದೆ. ನಿಮ್ಮ ಈ ಕೆಲಸ ಸೈಬರ್ ಕ್ರೈಂ ಅಡಿ ಬರುತ್ತವೆ. ನಾನು ದೂರು ಕೊಟ್ರೆ ನಿಮ್ಮ ಕುಟುಂಬದವರಿಗೆ ತೊಂದರೆ ಆಗುತ್ತೆ ಅನ್ನೋ ಕಾರಣಕ್ಕೆ ಸುಮ್ಮನಿದ್ದೇನೆ. ನೀವು ಪ್ರಾಣ ತೆಗೆಯುತ್ತೇನೆ ಅಂತ ಕಳಿಸಿರೋ ಮೆಸೇಜ್‌ಗಳಿಗೆ ರಾಷ್ಟ್ರ ಪ್ರಶಸ್ತಿ ಕೊಡ್ತಾರೆ ಅಂದುಕೊಂಡಿದ್ದೀರಾ? ನಾನು ದೂರು ದಾಖಲಿಸಿದರೆ ನಿಮ್ಮ ತಂದೆ-ತಾಯಿಗೆ ಕಷ್ಟ ಆಗತ್ತೆ. ನಮ್ಮ ಆಫೀಸ್ ನಂಬರ್‌ಗೆ ಅಸಭ್ಯ ಸಂದೇಶ, ವಾರ್ನ್ ಮಾಡೋದು, ನಮ್ಮ ಸಿನಿಮಾಗೆ ತೊಂದರೆ ಕೊಡೋದು ನಿಲ್ಲಿಸಿ ಎಂದಿದ್ದಾರೆ.
https://www.facebook.com/719171738250468/posts/1587334991434134/
200 ಜನ ವಾಟ್ಸಪ್ ಎಚ್ಚರಿಕೆ ನೀಡಿದ್ದಾರೆ. ಫೋನ್ ಮಾಡಿ ನಮ್ ಆಫೀಸ್‌ಗೆ ಧಮಕಿ ಹಾಕಿದ ಬಗ್ಗೆ ಲೆಕ್ಕವಿಲ್ಲ. ತೀರ ವಿಕೃತ ಧಮಕಿ ಲೆಕ್ಕವಿಲ್ಲ. ಇವೆಲ್ಲವೂ ಸೈಬರ್ ಕ್ರೈಂ. ವಿಶೇಷ ಅಧಿಕಾರಿ ಜೊತೆ ಮಾತನಾಡಿದ್ದೀನಿ. ಇವ್ರು ವಾರ್ನ್ ಮಾಡೋದು ನಿಲ್ಲಿಸುತ್ತಿಲ್ಲ. ನಾನು ಸಂಯಮ ಕಳೆದುಕೊಂಡ್ರೆ ಇದರ ಪರಿಣಾಮ ಚೆನ್ನಾಗಿರಲ್ಲ. ಗೃಹ ಮಂತ್ರಿಗಳು ಸಿಕ್ಕಿದ ಮೇಲೆ ಮುಂದಿನ ಕ್ರಮದ ನಿರ್ಧಾರ ಮಾಡ್ತೀನಿ. ಧೈರ್ಯ ಹೇಳಿದ ಎಲ್ಲಾ ಸ್ನೇಹಿತರಿಗೂ ಧನ್ಯವಾದ. ನಾನು ಒಂದು ಸಲ ದೂರು ಕೊಟ್ಟರೆ ಇನ್ನಷ್ಟು ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತವೆ. ನಮ್ಮ ಆಫೀಸ್‌ನವರಿಗೆ ಜೀವಭಯ ಕೊಡೋ ಮುಂಚೆ ಯೋಚನೆ ಮಾಡಿ. ನಾನು ಸಂಯಮದಲ್ಲಿಇರೋವರೆಗೂ ಅಷ್ಟೇ! ಕೆರಳಿಸಬೇಡಿ…ಕೆರಳಿಸಬೇಡಿ ಎಂದು ಹೇಳಿದ್ದಾರೆ…