ಈ ಬಾರಿಯ ಬಿಗ್‍ಬಾಸ್ ಸೀಸನ್-4 ಈ ಹಿಂದಿನ ಬಿಗ್‍ಬಾಸ್‍ಗಳಿಗಿಂತ ತುಂಬಾ ವಿಭಿನ್ನವಾಗಿದೆ. ಅದು ಹೇಗಪ್ಪಾ ಅಂದ್ರೆ ಬಿಗ್‍ಬಾಸ್‍ನ ಪ್ರಮುಖ ಐಕಾನ್ ಆಗಿದ್ದ ಪ್ರಥಮ್‍ರನ್ನು ಎಲಿಮಿನೇಟ್ ಅಂತ ಬಿಂಬಿಸಿ ಆತನನ್ನು ಗ್ಯಾರೇಜ್ ರೂಂನಲ್ಲಿಡೋ ಮೂಲಕ ಕಾರ್ಯಕ್ರಮಕ್ಕೆ ಇನ್ನಷ್ಟು ಟ್ವಿಸ್ಟ್ ನೀಡಿದ್ರೆ. ದೊಡ್ಮನೆಯ ಒಳಗೆ ಬಿಗ್‍ಬಾಸ್ ಸೀನಿಯರ್ಸ್‍ನ ಕಳುಹಿಸಿ ಮನೆಗೆ ಇನ್ನಷ್ಟು ಕಳೆ ತಂದಿದ್ರು. ಮನೆಯಲ್ಲಿ ಎಲ್ರೂ ಪ್ರಥಮ್ ನಾಮಿನೇಟ್ ಆಗಿದ್ದಾನೆ ಎಂದು ಭಾವಿಸಿದ್ದ ಸದಸ್ಯರು ಇನ್ನು ನಾವೆಲ್ಲಾ ಸೇಫ್ ಅಂತ ಖುಷಿಯಾಗಿದ್ರು..! ಆದ್ರೆ ಗ್ಯಾರೇಜ್ ರೂಂನಲ್ಲಿದ್ಕೊಂಡು ಮನೆಯ ಸದಸ್ಯರ ನಿತ್ಯ ಚಟುವಟಿಕೆಯನ್ನು ನೋಡ್ತಾ ಇದ್ದ ಪ್ರಥಮ್ ಯಾವಾಗಪ್ಪಾ ನಾನು ಮನೆಯೊಳಗೆ ಹೋಗಿ ಎಲ್ಲರ ಚಳಿ ಬಿಡಿಸ್ತೀನೋ ಅಂತ ಹಾತೊರೆಯುತ್ತಿದ್ದ.. ಓಳ್ಳೆ ಹುಡ್ಗನ ಮನದಾಳದ ಕೂಗು ಕೇಳಿಸಿಕೊಂಡ ಬಿಗ್‍ಬಾಸ್ ಸದ್ದಿಲ್ದೆ ರಾತ್ರೋ ರಾತ್ರಿ ಎಂಟ್ರಿ ಕೊಡ್ಸೇ ಬಿಟ್ರು ನೋಡಿ..! ಇನ್ನು ಒಳ್ಳೆ ಹುಡ್ಗ ಮತ್ತೆ ಮನೆಗೆ ಎಂಟ್ರಿ ಕೊಟ್ಟಿದ್ದೆ ಮನೆಯಲ್ಲಿದ್ದವರಿಗೆಲ್ಲಾ ಇದು ಕನಸೋ..? ನನಸೋ ಅಂತ ಧಂಗಾಗಿ ಹೋಗಿದ್ರು..! ಅಲ್ಲಿಂದ ಶುರುವಾಯ್ತು ನೋಡಿ ಪ್ರಥಮ್‍ನ ಅಸಲಿ ಆಟ..! ಯಾರ್ಯಾರು ತನ್ನ ಮೇಲೆ ಬೆರಳು ತೋರ್ಸಿ ಮಾತ್ನಾಡಿದ್ರೋ ಅವ್ರಿಗೆಲ್ಲಾ ಒಂದ್ಕಡೆಯಿಂದ ಚಾಟಿ ಬೀಸೋಕೆ ಶುರು ಮಾಡಿದ್ದ..! ಅದಕ್ಕೆ ಮೊದಲ ಬಲಿಯಾಗಿದ್ದು ಪ್ರಥಮ್ ಪರಮ ಶತ್ರು ಅಂತ ಕಂಡಿದ್ದ ಕಿರಿಕ್ ಕೀರ್ತಿ..! ಕೀರ್ತಿ ಈ ವಾರವೂ ಕ್ಯಾಪ್ಟನ್ ಆಗೋ ಮೂಲಕ ಮನೆಯಲ್ಲಿ ಸತತ ಮೂರನೆ ಬಾರಿಗೆ ನಾಯಕ ಜವಾಬ್ದಾರಿಯನ್ನು ಪಡೆದ್ರು..! ಈ ವಾರದ ನಾಮಿನೇಟ್ ಪ್ರಕ್ರಿಯೆಯಲ್ಲಿ ನಾಯಕನಿಗಿರುವ ನೇರ ನಾಮಿನೇಟ್ ಪ್ರಕ್ರಿಯೆಯಲ್ಲಿ ಕೀರ್ತಿ ನೇರ ನಾಮಿನೇಟ್ ಆಗಿ ರೇಖಾ ಅವ್ರನ್ನ ಆಯ್ಕೆ ಮಾಡಿದರು. ಈ ನಾಮಿನೇಟ್ ಮಾಡೋ ಸಂದರ್ಭದಲ್ಲಿ ಕೀರ್ತಿ ರೇಖಾ ಅವರ ಹೆಸರು ಹೇಳಿ ಸಾರಿ ಎಂದು ಕೇಳಿದ್ದಾರೆ..! ಒಂದು ಸಣ್ಣ ವಿಷಯ ಸಿಗ್ಲಪ್ಪಾ..! ಇವ್ರನ್ನೆಲ್ಲಾ ಕ್ಲಾಸ್ ತಗೊಳ್ಬೇಕು ಅಂತ ಕಾಯ್ತಾ ಇದ್ದ ಪ್ರಥಮ್‍ಗೆ ಸಾರಿ ಅನ್ನೋ ಪದ ಅಸ್ತ್ರವಾಗಿ ಸಿಕ್ತು. ಅದನ್ನು ಬಹಳ ನಾಜೂಕಾಗಿ ಬಳಸಿಕೊಂಡ ಪ್ರಥಮ್ ಮನೆಯ ಸದಸ್ಯರಿಗೆ ಚಳಿ ಬಿಡ್ಸೋಕೆ ಶುರು ಮಾಡ್ತಾ..! ಅದ್ರಲ್ಲೂ ಮುಖ್ಯವಾಗಿ ನಾಯಕ ಕೀರ್ತೀಯನ್ನ ಮೇನ್ ಟಾರ್ಗೆಟ್ ಮಾಡಿದ್ದ ನೋಡಿ..! ಇಂಥಹ ಥರ್ಡ್ ಕ್ಲಾಸ್ ಆಟ ಆಡೋಕೆ ಇಲ್ಲಿಗ್ಯಾಕ್ರಿ ಬರ್ತಿರಾ..? ಹೀಗೆ ಮಾಡ್ತಾ ಇದ್ರೆ ಒಬ್ಬೊಬ್ರಿಗೆ ಗ್ರಹಚಾರ ಬಿಡುಸ್ಬಿಡ್ತೀನಿ ಅಂತ ತನ್ನ ನಿಜವಾದ ಮುಖವನ್ನ ಮತ್ತೆ ತೋರ್ಸೋಕೆ ಶುರು ಮಾಡ್ದ..! ಇರ್‍ರೆಸ್ಪಾನ್ಸಿಬಲ್ ಆಟ ಆಡಿ ನೀವ್ನೀವೆ ಒಂದಾಗೋದಾದ್ರೆ ಯಾಕೆ ಈ ಆಟ ಆಡೋಕೆ ಬರ್ತಿರಾ..? ಇಂಥ ಮೋಸದಾಟ ಆಡೋಕೆ ನಾಚ್ಕೆ ಆಗ್ಬೇಕು..! ನಿಮ್ದೆಲ್ಲಾ ಒಂದು ಜನ್ಮ.. ನಿಮ್ಮ್ ಯೋಗ್ಯತೆ ಬೆಂಕಿ ಹಾಕಾ..! ಅಂತ ಬೈಯುತ್ತಾ ಮನೆಯ ಸದಸ್ಯರ ಬೆಂಡೆತ್ತಿದ್ದ ಪ್ರಥಮ್..! ಇಷ್ಟೆಲ್ಲಾ ಬೈತಾ ಇದ್ದ ಪ್ರಥಮ್‍ಗೆ ನಾಯಕ ಕೀರ್ತಿ ಸೇರಿದಂತೆ ಬಿಗ್‍ಬಾಸ್ ಸದಸ್ಯರ್ಯಾರೂ ತುಟಿಕ್ ಪಿಟಿಕ್ ಅನ್ನಲೇ ಇಲ್ಲ ನೋಡಿ..! ಆದ್ರೆ ಬಿಗ್‍ಬಾಸ್ ಮನೆಗೆ ಮತ್ತೊಮ್ಮೆ ಗೃಹ ಪ್ರವೇಶ ಆಡಿದ್ದ ಪ್ರಥಮ್ ಮನೆಯ ಸದಸ್ಯರ ಮೇಲೆ ಅವಾಚ್ಯ ಶಬ್ದಗಳನ್ನು ಬಳಸಿ ಆಟದ ವೈಖರಿಯನ್ನೆ ಬದಲಾಯಿಸಿದ್ದಾನೆ..!
ಬಿಗ್‍ಬಾಸ್‍ಗೆ ಪ್ರಶ್ನೆ ಕೇಳಿದ ವೀಕ್ಷಕರು..!
ಬಿಗ್‍ಬಾಸ್ ಮನೆಯಲ್ಲಿ ಪ್ರಥಮ್‍ನ ಅಟ್ಟಹಾಸ ತಾರಕ್ಕೇರುತ್ತಿದ್ದು ಅದನ್ನು ಪ್ರಶ್ನಿಸಿ ಸೋಷಿಯಲ್ ಮೀಡಿಯಾಗಳಲ್ಲಿ ಅನೇಕ ವೀಕ್ಷಕರು ಪ್ರಶ್ನೆ ಕೇಳಿದ್ದಾರೆ..! ಬಿಗ್‍ಬಾಸ್ ಮನೇಲಿ ನಿದ್ರೆ ಮಾಡುದ್ರೆ ಹಾಡು ಹಾಕಿ ಎಚ್ಚರಿಸ್ತೀರ..! ಇಂಗ್ಲೀಷ್‍ನಲ್ಲಿ ಮಾತ್ನಾಡುದ್ರೆ ಶಿಕ್ಷೆ ಕೊಡ್ತೀರ. ಲಕ್ಷುರಿ ಟಾಸ್ಕ್ ಗಳಲ್ಲಿ ತಪ್ಪು ಮಾಡಿದ್ರೂ ಅವರಿಗೆ ತಕ್ಕ ಪಾಠ ಕಲುಸ್ತೀರ..! ಯಾರ ಮೇಲಾದ್ರೂ ದೈಹಿಕ ಹಲ್ಲೆ ನಡುದ್ರೆ ಬಿಗ್‍ಬಾಸ್ ರೂಲ್ಸ್ ಪ್ರಕಾರ ಆತನನ್ನು ಹೊರಗೆ ಹಾಕ್ತೀರ..! ಆದ್ರೆ ಪ್ರಥಮ್ ಏನೇ ಮಾಡಿದ್ರು ಯಾಕೆ ನೀವು ಮಾತ್ನಾಡೋದಿಲ್ಲ..? ನಾವು ಪ್ರಥಮ್‍ನ್ನು ದ್ವೇಷ ಮಾಡ್ತಾ ಇಲ್ಲ ಬದ್ಲಾಗಿ ಪ್ರಥಮ್ ಅಷ್ಟು ಹೊಲಸು ಪದಗಳಿಂದ ಮನೆಯ ಇತರೆ ಸ್ಪರ್ಧಾಳುಗಳಿಗೆ ಬೈತಾ ಇದ್ರೂ ನಿಮ್ಮ ಸಣ್ಣ ಎಚ್ಚರಿಕೆಯೂ ಇರಲಿಲ್ಲವಲ್ಲಾ..? ಯಾಕೆ ಎಂದು ಪ್ರಶ್ನಿಸಿದ್ದಾರೆ.. ಕಾರ್ಯಕ್ರಮ ಒಳ್ಳೆಯ ರೀತಿಯಲ್ಲಿ ಮೂಡಿ ಬರ್ತಾ ಇದೆ. ಅಷ್ಟೆ ಅಲ್ಲ ಇಡೀ ಫ್ಯಾಮಿಲಿ ಒಂದುಗೂಡಿ ನೋಡೊ ಶೋ ಇದಾಗಿದ್ದು ಅದರ ಬಗ್ಗೆಯೂ ಬಿಗ್‍ಬಾಸ್‍ಗೆ ಅರಿವಿರಲಿ ಎಂದು ಎಚ್ಚರಿಸಿದ್ದಾರೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಈ ವರ್ಷದಿಂದ ರಿಮೇಕ್ ಮಾಡಲ್ವಂತೆ ಕಿಚ್ಚ ಸುದೀಪ..?
ಸದ್ಯದಲ್ಲೆ ಬೆಂಗಳೂರಲ್ಲಿ ಪ್ರತ್ಯೇಕ ಸೈಬರ್ ಠಾಣೆ: ಪ್ರವೀಣ್ ಸೂದ್
ಸ್ಯಾಂಡಲ್‍ವುಡ್ ಮಿಸ್ಟರ್ ಪರ್ಫೆಕ್ಟ್ ಅಂತೆ ಈ ನಟ..!