ಖಂಡಿಸುವ ಪ್ರಥಮ್ ನುಡಿದ ಭವಿಷ್ಯ ನಿಜವಾಗುತ್ತಾ??

Date:

ಬಿಗ್‍ಬಾಸ್ ಸೀಸನ್-4ನ ಐಕಾನ್ ಯಾರು ಅಂತ ಕೇಳೊಕಿಂತ ಮುಂಚೆಯೇ ಪಟ್ ಅಂತ ಎಂಟೆದೆಯ ಬಂಟ ಪ್ರಥಮ್ ಅಂಥೇಳುವವರೆ ಹೆಚ್ಚು. ಬಿಗ್‍ಬಾಸ್ ಮನೆಯವರೆಲ್ಲಾ ಪ್ರಥಮ್ ಮೇಲೆ ಮುನಿಸಿಕೊಂಡ್ರು, ಹುಚ್ಚಾ ವೆಂಕಟ್ ಥಳಿಸಿದ್ರು ಸಹ ಬಗ್ಲಿಲ್ಲ ಈ ಪಂಟ.
ಬಿಗ್‍ಬಾಸ್ ಮನೇಲಿ ಪ್ರಥಮ್ ಇದ್ರೇನೆ ಆ ಶೋಗೊಂದು ಕಳೆ ಬರೋದು ಅಂದ್ಕೊಂಡಿರೋರೆ ಹೆಚ್ಚು. ಪ್ರಥಮ್ ಇಲ್ಲದ ಮನೆ ಮಸಣದಂತೆ ಶಾಂತವಾಗಿರುತ್ತೆ ಅನ್ನೋ ಸತ್ಯ ಈಗ ವೀಕ್ಷಕರಿಗೆ ಅರ್ಥವಾಗ್ತಿದಿಯಂತೆ. ಪ್ರಥಮ್ ಇದ್ರೇನೆ ಮನೆಯವರೆಲ್ಲಾ ಆಲರ್ಟ್ ಆಗಿರ್ತಾರೆ ಏಕೆಂದರೆ ಪ್ರಥಮ್ ಬಗ್ಗೆ ಮಾತನಾಡದವರೇ ಇಲ್ಲ. ಎಲ್ಲರ ಬಾಯಿಯಲ್ಲೂ ಪ್ರಥಮ್ ಗೆ ಗುಸುಗುಸು ಪಿಸುಪಿಸು.
ಬಿಗ್‍ಬಾಸ್ ಸೀಸನ್-4 ಕೊನೆಯ ಸ್ಟೆಪ್‍ನಲ್ಲಿದ್ದು, ಸಿಕ್ಕಾಪಟ್ಟೆ ಕನ್ಪೂಶನ್ ಕ್ರಿಯೇಟ್ ಮಾಡಿದೆ. ಎಲ್ಲರಲ್ಲೂ ಕಾಡುತ್ತಿರುವ ಏಕೈಕ ಪ್ರಶ್ನೆ ಅಂದ್ರೆ ಅದು ಈ ಸೀಸನ್ ನ ವಿನ್ನರ್ ಯಾರು ಎನ್ನುವುದೇ ಆಗಿದೆ, ಬಿಗ್‍ಬಾಸ್ ಮನೇಲ್ಲೇ ಈ ಬಾರಿಯ ವಿನ್ನರ್ ಇವರು ಇಲ್ಲ ಅವರ್ರು ಎನ್ನುವ ಮಾತುಗಳು ಕೇಳಿಬರುತ್ತಲೇ ಇವೆ. ಇತ್ತಿಚಿಗೆ ಬಿಗ್‍ಬಾಸ್ ಮನೆಯಿಂದ ಹೊರನಡೆದ ಪ್ರಥಮ್ ಪ್ರೆಂಡ್ ಶೀತಲ್ ಪ್ರಥಮ ಪರ ಬ್ಯಾಟ್ ಬೀಸಿದ್ದರು.
ಈ ಎಲ್ಲಾ ಪ್ರಶ್ನೆಗಳಿಗೆ ಪ್ರಥಮ್ ಡೈರೆಕ್ಟಾಗಿ ಆನ್ಸರ್ ನೀಡಿದ್ದಾರೆ ನೋಡಿ, ಕೀರ್ತಿ ಕುಮಾರ್ ಜೊತೆ ಮಾತನಾಡ್ತ ನೀನು ಫೈನಲ್‍ಗೆ ಹೋಗ್ತೀಯ ಆದ್ರೆ ನಾನು 100% ಪಕ್ಕಾ ಫೈನಲ್‍ಗೆ ಹೋಗೊದಿಲ್ಲ ಎಂದಿದ್ದಾರೆ. ವಿನ್ನರ್ ಸಹ ಯಾರು, ರನ್ನರ್ ಅಪ್ ಯಾರಾಗ್ತಾರೆ ಎನ್ನುವುದನ್ನು ಬಹಿರಂಗವಾಗಿಯೇ ತಿಳಿಸಿದ್ದಾರೆ. ಆಗಾದ್ರೆ ಪ್ರಥಮ್ ಹೇಳಿದ ವಿನ್ನರ್ ಯಾರು ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಫುಲ್ ಸ್ಟಾಪ್.
ಕೀರ್ತಿ, ರೇಖಾ, ಮಾಳವಿಕ ಈ ಬಾರಿ ಫೈನಲ್ ಗೆ ಹೋಗ್ತಾರೆ, ಮೋಹನ್, ಭುವನ ಖಂಡಿತ ಫೈನಲ್ ಗೆ ಹೋಗೊದಿಲ್ಲ. ಕೀರ್ತಿ ಕುಮಾರ್ ಆಲಿಯಾಸ್ ಕಿರಿಕ್ ಕೀರ್ತಿ ಈ ಬಾರಿಯ ರನ್ನರ್ ಆಪ್ ಆಗ್ತಾರೆ ಅಂಥಾನು ಭವಿಷ್ಯ ನುಡಿದಿದ್ದಾರೆ. ಪ್ರಥಮ್ ಮಾತಿನಂತೆ ಹೊಗುವುದಾದ್ರೆ ಕೀರ್ತಿ ರನ್ನರ್ ಆಪ್ ಆದ್ರೆ ಇನ್ನುಳಿದ ರೇಖಾ, ಮಾಳವಿಕ ಇಬ್ಬರಲಿ ಒಬ್ಬರು ವಿನ್ನರ್ ಆಗಲಿದ್ದಾರೆ. ಆದ್ರೆ ಪ್ರಥಮ್ ಹೇಳಿದ ಭವಿಷ್ಯ ಎಷ್ಟರಮಟ್ಟಿಗೆ ನಿಜವಾಗುತ್ತೆ ಎನ್ನುವದನ್ನು ಸ್ವಲ್ಪದಿನದಲ್ಲೇ ತಿಳಿಯಲಿದೆ.
ಬಿಗ್‍ಬಾಸ್ ಮನೇಲಿ ಸೂಜಿಯಷ್ಟೆ ಡೈರೆಕ್ಟ್ ಮಾತುಗಾರ, ಪಕ್ಕಾ ಎಂಟರ್‍ಟೈನ್‍ಮೆಂಟ್ ನೀಡಬಲ್ಲ ಏಕೈಕ ವ್ಯಕ್ತಿ ಅಂದ್ರೆ ಖಂಡಿಸುವ ಪ್ರಥಮ್.. ಪ್ರಥಮ್ ತಮ್ಮ ಮಾತಿನಿಂದಲೇ ಎಲ್ಲಾ ಕಡೆ ಫ್ಯಾನ್ಸ್ ಹುಟ್ಟುಹಾಕಿದ್ದಾರೆ ಆದ್ರಿಂದ ಆ ಬಾರಿ ವಿನ್ನರ್ ಪ್ರಥಮ್ ಆದ್ರೂ ಡೌಟ್ ಪಡಬೇಕಿಲ್ಲ, ಪ್ರಥಮ್ ತಾನೇಳಿದ ಭವಿಷ್ಯವನ್ನೇ ಸುಳ್ಳಾಗಿಸಿಕೊಂಡು ವಿನ್ನರ್ ಕಿರೀಟವನ್ನು ಮುಡಿಗೇರಿಸಿಕೊಂಡ್ರು ಅನುಮಾನ ಪಡಬೇಕಿಲ್ಲ.

  • ಹಾಲೇಶ್ ಎಂ.ಎಸ್ ಹುಣಸನಹಳ್ಳಿ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಭಾರಿ ಗಿಫ್ಟ್ ನೀಡೋಕೆ ಮುಂದಾಗಿದೆ ಜಿಯೋ..!

ರಯೀಸ್ ಚಿತ್ರ ಬಿಡುಗಡೆ ಮಾಡ್ಬೇಡಿ: ಶಿವಸೇನೆ ಧಮ್ಕಿ..!

ಅಧಿಕಾರಿಗಳ ಕರಾಳ ಮುಖವನ್ನು ವಿಡಿಯೋ ಮೂಲಕ ಬಯಲಿಗೆಳೆದ ಯೋಧ..!

ಇನ್ಮುಂದೆ ಖಾಸಗೀ ಆಸ್ಪತ್ರೆಯಲ್ಲಿ ಫ್ರೀ ಟ್ರೀಟ್‍ಮೆಂಟ್ ಇರೋದಿಲ್ಲ..!

ಮತ್ತೆ ಒಂದಾಗಲಿದ್ದಾರೆ ಸುದೀಪ್ ದಂಪತಿ

195 ಬಾರಿ ಪಾರ್ಕಿಂಗ್ ನಿಯಮ ಉಲ್ಲಂಘಿಸಿದ ಕಾರು ಒಂದು ಬಾರಿಯೂ ದಂಡ ಕಟ್ಲಿಲ್ಲ..!

Share post:

Subscribe

spot_imgspot_img

Popular

More like this
Related

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...